ನಂದಿನಿ ಮೈಸೂರು
*ಅರ್ಬನ್ ಹಾತ್‌ನಲ್ಲಿ ಗಾಂಧಿ ಶಿಲ್ಪ ಬಜಾರ್ ಅಖಿಲ ಭಾರತ ಹಸ್ತಶಿಲ್ಪ ಪ್ರದರ್ಶನ ಹಾಗೂ ಮಾರಾಟ*
ಅರ್ಬನ್ ಹಾತ್ ನಲ್ಲಿ ಸೆಪ್ಟೆಂಬರ್ 16 ರಿಂದ 25 ರವರೆಗೆ ಗಾಂಧಿ ಶಿಲ್ಪ ಬಜಾರ್ ಅಖಿಲ ಭಾರತ ಹಸ್ತಶಿಲ್ಪ ಪ್ರದರ್ಶನ ಹಾಗೂ ಮಾರಾಟಕ್ಕೆ ಇಂದು ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು
ನಿಧಿ ಬನ್ಸಾಲ್ ಅಸಿಸ್ಟೆಂಟ್ ಸೆಕರೆಟ್ರಿ, ಮಿನಿಸ್ಟ್ರಿ ಆಫ್ ಟೆಕ್ಸ್ಟ್ ಟೈಲ್ಸ್ ಭಾರತ ಸರ್ಕಾರ
ನವದೆಹಲಿ ಇವರು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಕರಕುಶಲ ಅಭಿವೃದ್ಧಿ , ಆಯುಕ್ತರ ಕಛೇರಿಯು ಕುಶಲಕರ್ಮಿಗಳಿಗೆ ನೇರ ಮಾರುಕಟ್ಟೆಯನ್ನು ಒದಗಿಸಲು ಪ್ರತಿ ವರ್ಷ ಸುಮಾರು 300 ಪ್ರದರ್ಶನ ಹಾಗೂ ಮಾರುಕಟ್ಟೆ , ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ,
ಇವುಗಳಲ್ಲಿ ಒಂದಾದ ಗಾಂಧಿ ಶಿಲ್ಪ , ಬಜಾರ್ ಮೈಸೂರಿನಲ್ಲಿ ಈಗ ಆಯೋಜಿಸಲಾಗಿದೆ .
ಅನೇಕ ಕಡೆಯಿಂದ ಬಂದ ಕುಶಲಕರ್ಮಿಗಳಿಗೆ , ಮೈಸೂರಿನ ಕಲಾ ಪ್ರೇಮಿಗಳ ಜೊತೆ ನೇರ ಮಾರುಕಟ್ಟೆ ವೇದಿಕೆಯನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ .
ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತರು ಸೇರಿದಂತೆ ಸುಮಾರು 100 ಮಂದಿ ಕುಶಲಕರ್ಮಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು , ಅವರು ತಮ್ಮ ಉತ್ಕೃಷ್ಠ ಕಲಾವಸ್ತುಗಳನ್ನು ಐತಿಹಾಸಿಕ ಮೈಸೂರಿನ ಕಲಾಪ್ರೇಮಿಗಳಿಗೆ ಪ್ರದರ್ಶಿಸಲಿದ್ದಾರೆ .
ಈ ಪ್ರದರ್ಶನದಲ್ಲಿ ಮದ್ಯವರ್ತಿಗಳಿಲ್ಲದ , ಕುಶಲಕರ್ಮಿಗಳಿಂದ ನೇರವಾಗಿ ಖರೀದಿದಾರರಿಗೆ ಮಾರಾಟದ ವ್ಯವಸ್ತೆ ಕಲ್ಪಿಸಲಾಗಿದೆ . ಈ ಪ್ರದರ್ಶನದಲ್ಲಿ ನೊಂದಾಯಿತ ಕುಶಲಕರ್ಮಿಗಳಿಗೆ ಉಚಿತವಾಗಿ ಮಳಿಗೆಗಳನ್ನು ನೀಡಲಾಗುವುದು , ಜೊತೆಗೆ ಪ್ರಯಾಣ ಭತ್ಯೆ ಹಾಗೂ ರವಾನೆ ಶುಲ್ಕವನ್ನು ಕರಕುಶಲ ಅಭಿವೃದ್ಧಿ ಆಯುಕ್ತರ ಕಛೇರಿಯಿಂದ ನೀಡಲಾಗುವುದು .
ಇದೆ ಸಂಧರ್ಭದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದ , ಕಾರ್ಯನಿರ್ವಾಹಕ ಕಾರ್ಯದರ್ಶಿಗಳಾದ
ಡಾ.ಸಿ.ಜಿ.ಬೆಟಸೂರಮಠ್
ಪ್ರೊ.ಮೊರಬದ ಮಲ್ಲಿಕಾರ್ಜುನ ಪ್ರಕಟಣ ವಿಭಾಗದ ನಿರ್ದೇಶಕರು ,
ಡಾ . ಎಚ್.ಆರ್ . ಮಹದೇವಸ್ವಾಮಿ , ಜಂಟಿ ನಿರ್ದೇಶಕರು , ಜೆಎಸ್‌ಎಸ್ ತಾಂತ್ರಿಕ ಶಿಕ್ಷಣ ವಿಭಾಗ , ಸುನಿಲ್‌ಕುಮಾರ್ , ರೇವಣ್ಣ ಸ್ವಾಮಿ , ಶಂಕರಪ್ಪ, ಶಿವನಂಜಸ್ವಾಮೀ, ಸುಂದರಪ್ಪ, ಸೇರಿದಂತೆ ಹಲವರು ಉಪಸ್ಥಿತರಿದ್ದರು.