ನಂದಿನಿ ಮೈಸೂರು
ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಮೈಸೂರಿನ
ಎಂ.ಜಿ.ರಸ್ತೆಯಲ್ಲಿರುವ ತೇರಾಪಂತ್ ಭವನದಲ್ಲಿಂದು ಅಖಿಲ ಭಾರತೀಯ ತೇರಾಪಂತ್ ಯುವ ಪರಿಷದ್ ವತಿಯಿಂದ ಏರ್ಪಡಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದ ಸಂಸದರಾದ ಪ್ರತಾಪ್ ಸಿಂಹ ರವರು ಖುದ್ದು ರಕ್ತದಾನ ಮಾಡಿದ್ದರು.
ಬಳಿಕ ಮಾತನಾಡಿದ ಪ್ರತಾಪ್ ಸಿಂಹ ರವರು ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿಯವರ 72ನೇ ಜನ್ಮದಿನ.ಇದರ ಅಂಗವಾಗಿ ಇಡೀ ದೇಶದಾದ್ಯಂತ ತೇರಾಪಂತ್ ನವರು ಹಾಗೂ ಮೈಸೂರಿನಲ್ಲಿ ತೇರಾಪಂತ್ ನವರು ಜೊತೆ ಯುವ ಮೋರ್ಚಾದವರು ಹಾಗೂ ಚಾಮರಾಜಕ್ಷೇತ್ರದ ಅಧ್ಯಕ್ಷರುಗಳ ನೇತೃತ್ವದಲ್ಲಿ ಕೈಜೋಡಿಸಿ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಿದ್ದಾರೆ.ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ರವರು ಬಂದು ಇದನ್ನು ಉದ್ಘಾಟನೆ ಮಾಡಿದ್ದರು.
ಈ ಸಂದರ್ಭದಲ್ಲಿ ನಾನು ಕೂಡ ರಕ್ತದಾನವನ್ನು ಮಾಡಿದ್ದೇನೆ ಯಾಕೆಂದರೆ ರಕ್ತದಾನ ಎನ್ನುವುದು ಒಂದು ವಿಶೇಷವಾದ ದಾನ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಹಗಲಿರುಳು ಈ ದೇಶಕ್ಕೋಸ್ಕರ,ದೇಶದ ಏಳಿಗೆಗೋಸ್ಕರ,ಶ್ರಮಿಸುತ್ತಿದ್ದಾರೆ,ಒಂದು ಸಣ್ಣ ನಮ್ಮ ರಕ್ತದಾನವೂ ಇರಬೇಕು ಅಂತ ನಾನು ರಕ್ತದಾನವನ್ನು ಮಾಡಿದ್ದೇನೆ ಎಂದರು.
ಇನ್ನು ಇದೆ ಸಂದರ್ಭದಲ್ಲಿ ಸಮಾಜ ಸೇವಕರು ಹಾಗೂ ಬನ್ನೂರಿನ ಪರಿಸರ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಬನ್ನೂರಿನ ಮಹೇಂದ್ರ ಸಿಂಗ್ ಕಾಳಪ್ಪ ನವರು ಈ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಸ್ವಯಂ ಅವರು ಸಹ ರಕ್ತದಾನ ಮಾಡಿದ್ದರು.ಅಂತೆಯೇ ಇದೆ ವೇಳೆ ತೇರಾಪಂತ್ ಯುವ ಪರಿಷದ್ ವತಿಯಿಂದ ಕಾರ್ಯಕ್ರಮದಲ್ಲಿ ಗಣ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತ್ತು.
ಇನ್ನು ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್,ಮಹಾಪೌರರಾದ ಶಿವಕುಮಾರ್,ಬಿಜೆಪಿ ಮೈಸೂರು ನಗರಾಧ್ಯಕ್ಷರಾದ ಶ್ರೀವತ್ಸ,ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಶಿವಕುಮಾರ್,ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಮಿರ್ಲೆ ಶ್ರೀನಿವಾಸ್ ಗೌಡ,ಹಾಗೂ ತೇರಾಪಂತ್ ಯುವ ಪರಿಷದ್ ನ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.