ಜೆಡಿಎಸ್ ಎರಡನೇ ಪಟ್ಟಿ ಪ್ರಕಟ ಬಾರೀ ಕುತೂಹಲ ಮೂಡಿಸಿದ್ದ ಹಾಸನ ಟಿಕೇಟ್ ಬಹಿರಂಗ

ನಂದಿನಿ ಮೈಸೂರು

ಜೆಡಿಎಸ್ ಎರಡನೇ ಪಟ್ಟಿ ಪ್ರಕಟ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಲೇಬೆಂಕೆಂದು ಕಸರತ್ತು ನಡೆಸುತ್ತಿರುವ ಜೆಡಿಎಸ್ ವರಿಷ್ಠ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದು 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಹಾಸನ- ಸ್ವರೂಪ್ ಪ್ರಕಾಶ್
ಬೇಲೂರು- ಕೆ.ಎಸ್.ಲಿಂಗೇಶ್
ಅರಕಲಗೂಡು- ಎ.ಮಂಜು
ಆಲೂರು-ಸಕಲೇಶಪುರ- ಎಚ್.ಕೆ.ಕುಮಾರಸ್ವಾಮಿ
ಚನ್ನರಾಯಪಟ್ಟಣ- ಬಾಲಕೃಷ್ಣ
ಹೊಳೆನರಸೀಪುರ- ಎಚ್.ಡಿ.ರೇವಣ್ಣ
ಸ್ವರೂಪ್ ಮನೆಯಲ್ಲಿ ಭಾರಿ ಹರ್ಷೋದ್ಘಾರ: ಇನ್ನು ರಾಜ್ಯದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದ್ದ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಅನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಈ ಮೊದಲೇ ಹೇಳುತ್ತಿದ್ದಂತೆ ಪಕ್ಷದ ಕಾರ್ಯಕರ್ತ ಸ್ವರೂಪ್ ಪ್ರಕಾಶ್ ಅವರಿಗೆ ನೀಡಿದ್ದಾರೆ. ಈ ಮೂಲಕ ತಮ್ಮ ಕುಟುಂಬದಲ್ಲಿ ಭವಾನಿ ರೇವಣ್ಣ ಅವರು ನನಗೆ ಹಾಸನದ ಟಿಕೆಟ್ ಬೇಕೇ ಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದರೂ, ಅವರಿಗೆ ಟಿಕೆಟ್ ಕೊಡದೇ ಕೈಬಿಡಲಾಗಿದೆ. ಈ ಮೂಲಕ ಭಾರಿ ಕುತೂಹಲ ಕೆರಳಿಸಿದ್ದ ಕ್ಷೇತ್ರದಲ್ಲಿ ಟಿಕೆಟ್ ಸಿಕ್ಕಿದ್ದರಿಂದ ಸ್ವರೂಪ್ ಪ್ರಕಾಶ್ ಅವರ ಮನೆಯಲ್ಲಿ ತೀವ್ರ ಕುತೂಹಲ ಉಂಟಾಗಿದೆ.
ಪ್ರೀತಂಗೌಡಗೆ ಟಾಂಗ್ ಕೊಡಲು ತೀರ್ಮಾನ: ಇನ್ನು ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿಯೇ ಕಳೆದ ಎರಡು ವರ್ಷಗಳ ಹಿಂದೆ ಬಿಜೆಪಿ ಶಾಸಕ ಪ್ರೀತಂ ಗೌಡ ಜೆಡಿಎಸ್ಗೆ ಸವಾಲು ಹಾಕಿದ್ದರು. ಆದರೆ, ಈಗ ಹಾಸನದಲ್ಲಿ ಯಾರನ್ನು ನಿಲ್ಲಿಸಬೇಕು ಎನ್ನುವ ಹಿನ್ನೆಲೆಯಲ್ಲಿ ಮನೆಯವರೆಲ್ಲರೂ ಸೇರಿ ಈಗ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಚುನಾವಣೆ ಕಣಕ್ಕೆ ಇಳಿಸುತ್ತಿದ್ದೇವೆ. ಇನ್ನು ನಮ್ಮ ಕುಟುಂಬದಲ್ಲಿ ಸಹೋದರನ್ನು ಯಾರು ಏನೇ ಮಾಡಿದರೂ ಇಬ್ಭಾಗ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದರು.

ಜೆಡಿಎಸ್ ಪಟ್ಟಿ

• ಕುಡುಚಿ-ಆನಂದ್ ಮಾಳಗಿ
• ರಾಯಭಾಗ-ಪ್ರದೀಪ್ ಮಾಳಗಿ
• ಸವದತ್ತಿ-ಸೌರಬ್ ಚೋಪ್ರಾ
• ಅಥಣಿ-ಶಶಿಕಾಂತ್ ಪಡಸಲಗಿ ಗುರುಗಳು
• ಹುಬ್ಬಳ್ಳಿ-ಧಾರವಾಡ (ಪೂರ್ವ)-ವೀರಭದ್ರಪ್ಪ ಹಾಲರವಿ
• ಕುಮಟಾ-ಸೂರಜ್ ಸೋನಿ ನಾಯ್ಕ್
• ಹಳಿಯಾಳ- ಎಸ್ ಎಲ್ ಘೋಟ್ನೇಕರ್
• ಭಟ್ಕಳ-ನಾಗೇಂದ್ರ ನಾಯ್ಕ್
• ಶಿರಸಿ-ಉಪೇಂದ್ರ ಪೈ
• ಯಲ್ಲಾಪುರ-ಡಾ.ನಾಗೇಶ್ ನಾಯ್ಕ್
• ಚಿತ್ತಾಪುರ-ಸುಭಾಷ್ ಚಂದ್ರ ರಾಥೋಡ್
• ಕಲಬುರಗಿ ಉತ್ತರ-ನಾಸಿರ್ ಹುಸೇನ್ ಉಸ್ತಾದ್
• ಬಳ್ಳಾರಿ-ಅಲ್ಲಾಭಕ್ಷ್
• ಹಗರಿಬೊಮ್ಮನಹಳ್ಳಿ-ಪರಮೇಶ್ವರಪ್ಪ
• ಹರಪನಹಳ್ಳಿ-ನೂರ್ ಅಹ್ಮದ್
• ಸಿರಗುಪ್ಪ-ಪರಮೇಶ್ವರ್ ನಾಯಕ್
• ಕಂಪ್ಲಿ-ರಾಜು ನಾಯಕ್
• ಕೊಳ್ಳೆಗಾಲ-ಪುಟ್ಟಸ್ವಾಮಿ
• ಗುಂಡ್ಲುಪೇಟೆ-ಕಡಬೂರು ಮಂಜುನಾಥ್
• ಕಾಪು-ಸಬೀನಾ ಸಮದ್
• ಕಾರ್ಕಳ-ಶ್ರೀಕಾಂತ್ ಕೊಚ್ಚೂರ್
• ಉಡುಪಿ-ದಕ್ಷತ್ ಶೆಟ್ಟಿ
• ಬೈಂದೂರು-ಮನ್ಸೂರ್ ಇಬ್ರಾಹಿಂ
• ಕುಂದಾಪುರ-ರಮೇಶ್
• ಮಂಗಳೂರು ದಕ್ಷಿಣ-ಸುಮತಿ ಹೆಗಡೆ
• ಕನಕಪುರ-ನಾಗರಾಜ್
• ಯಲಹಂಕ-ಮುನೇಗೌಡ ಎಂ
• ಸರ್ವಜ್ಞ ನಗರ- ಮೊಹಮದ್ ಮುಸ್ತಾಫ್
• ಯಶವಂತಪುರ-ಜವರಾಯಿಗೌಡ
• ತಿಪಟೂರು-ಶಾಂತಕುಮಾರ್
• ಶಿರಾ-ಉಗ್ರೇಶ್
• ಹಾನಗಲ್-ಮನೋಹರ್ ತಹಸೀಲ್ದಾರ್
• ಸಿಂಧಗಿ-ವಿಶಾಲಾಕ್ಷಿ
• ಗಂಗಾವತಿ-ಚೆನ್ನಕೇಶವ
• ಎಚ್.ಡಿ.ಕೋಟೆ – ಜಯಪ್ರಕಾಶ್ ಸಿ
• ಜೇವರ್ಗಿ – ದೊಡ್ಡಪ್ಪಗೌಡ ಶಿವಲಿಂಗಪ್ಪಗೌಡ
• ಶಹಾಪುರ-ಗುರುಲಿಂಗಪ್ಪ ಪಾಟೀಲ್
• ಕಾರವಾರ-ಚೈತ್ರಾ ಕೋಟ್ಕರ್
• ಪುತ್ತೂರು-ದಿವ್ಯಪ್ರಭ
• ಕಡೂರು-ವೈಎಸ್ವಿ ದತ್ತಾ
• ಮಹಾಲಕ್ಷ್ಮೀ ಲೇಔಟ್ – ರಾಜಣ್ಣ
• ಹಿರಿಯೂರು – ರವೀಂದ್ರಪ್ಪ
• ಮಾಯಕೊಂಡ – ಆನಂದಪ್ಪ

Leave a Reply

Your email address will not be published. Required fields are marked *