ಮೈಸೂರು:30 ನವೆಂಬರ್ 2021
ನಂದಿನಿ
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಮಾಡಿರುವ ಆರೋಪಕ್ಕೆ ವಿಧಾನ ಪರಿಷತ್ ಅಭ್ಯರ್ಥಿಯಾದ ಸಿ,ಎನ್, ಮಂಜೇಗೌಡರು ಬಹಿರಂಗ ಪತ್ರ ಬಿಡುಗಡೆ ಮಾಡಿದ್ದಾರೆ.
ನೀವು ನನ್ನ ಮೇಲೆ ಮಾಡಿರುವ ಆರೋಪಗಳೆಲ್ಲ ಸತ್ಯಕ್ಕೆ ದೂರವಾದ ಮಾತು.ಮಂತ್ರಿ ಮಂಡಲದಲ್ಲಿ ನೀವು ಬುದ್ದಿವಂತರು ಎಂದು ಭಾವಿಸಿದ್ದೇ.ಆದರೆ ಈ ರೀತಿಯ ದಡ್ಡತನದ ಹೇಳಿಕೆ ಶೋಭೆ ತರುವಂತದಲ್ಲ.ಈ ಆರೋಪವನ್ನ ಸಾಕ್ಷಿ ಸಮೇತ ಹಾಗೂ ದಾಖಲಾತಿ ನೀಡಿದರೇ ಆ ಕ್ಷಣದಿಂದಲೇ ನಾನು ವಿಧಾನ ಪರಿಷತ್ ಚುನಾವಣಾ ಕಣದಿಂದ ಹಿಂದೆ ಸರಿದು ರಾಜಕೀಯ ನಿವೃತ್ತಿ ಪಡೆಯುತ್ತೇನೆ.ಗೌರವದಿಂದ ಚುನಾವಣೆ ಎದುರಿಸಿ ಈ ರೀತಿಯ ಆರೋಪ ಹೇಳಿಕೆಗಳಿಗೆ ಮತದಾರ ಪ್ರಭು ಅಸ್ಪದ ಕೊಡುವುದಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಡಲು ಇಷ್ಟಪಡುತ್ತೇನೆ.ನಾನೊಬ್ಬ ಸೈನಿಕ ದೇಶ ಕಾದವನು ಮತ್ತೊಬ್ಬರ ವೈಯಕ್ತಿಕ ವಿಚಾರವನ್ನು ಮಾತನಾಡುವ ವ್ಯಕ್ತಿ ನಾನಲ್ಲ.ಮೈಸೂರು ಅಭಿವೃದ್ಧಿ ವಿಚಾರದಲ್ಲಿ ನಿಮ್ಮ ಮೇಲೆ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.ಜನರ ನಿರೀಕ್ಷೆ ಹುಸಿ ಮಾಡದೆ ಮೈಸೂರು ಜಿಲ್ಲೆಯ ಅಭಿವೃದ್ಧಿಯತ್ತ ಗಮನಹರಿಸಿ ಎಂದು ಪತ್ರದ ಮೂಲಕ ತಿಳಿಸಿರುತ್ತಾರೆ.
ಸಿ.ಎನ್ .ಮಂಜೇಗೌಡ
ವಿಧಾನ ಪರಿಷತ್ ಜೆಡಿಎಸ್ ಅಭ್ಯರ್ಥಿ