ಮಹಾತ್ಮಾ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜಯಂತಿ ಕಾರ್ಯಕ್ರಮ,ಸಿಹಿ ವಿತರಣೆ

ಮೈಸೂರು:1 ಅಕ್ಟೋಬರ್ 2021

ನ@ದಿನಿ

                   ಇಂದು ಕರ್ನಾಟಕ ಸೇನಾ ಪಡೆ ವತಿಯಿಂದ ಮೈಸೂರಿನ ಅಗ್ರಹಾರ ವೃತ್ತ ದಲ್ಲಿ ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

                    ಕರ್ನಾಟಕ ರಾಜ್ಯ ಖಾದಿ ನಿಗಮ ಅಧ್ಯಕ್ಷರಾದ ಕೃಷ್ಣಪ್ಪ ಗೌಡ ಎನ್ ಆರ್ ರವರು ಭಾವಚಿತ್ರಕ್ಕೆ ಪುಷ್ಪಾರ್ಚಾನೆಗೈದು ಸ್ಮರಿಸಿದರು.

                         ನಂತರ ಮಾತನಾಡಿದ ರವರು ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ರವರು ದೇಶ ಕಂಡ ಮಹಾನ್ ನಾಯಕರು,  ಮಹಾತ್ಮಾ ಗಾಂಧಿರವರು ಸ್ವದೇಶಿ ವಸ್ತುಗಳನ್ನು ಬಳಸಿ ಎಂದು ತನ್ಮೂಲಕ ಮನೆಯಲ್ಲಿ ನೂತ ನೂಲಿನ ಬಟ್ಟೆ (ಖಾದಿ )ಯ ಬಳಕೆಯನ್ನು ಸಮರ್ಥಿಸಿದರು. ತಾವೇ ಸ್ವತಃ ನೂತ ನೂಲಿನಿಂದ ತಮ್ಮದೇ ಉಡುಪುಗಳನ್ನು ನೇಯುವ ಅಭ್ಯಾಸವನ್ನು ಅಳವಡಿಸಿಕೊಂಡ ಗಾಂಧಿಯವರು ಹಾಗೂ ಅವರ ಅನುಯಾಯಿಗಳು, ಇತರರೂ ಹಾಗೆಯೇ ಮಾಡುವಂತೆ ಮಾಡಿದರು ಹಾಗು ಈಗ ದೇಶದ ಜನರೆಲ್ಲ ಖಾದಿ ವಸ್ತ್ರ ಗಳನ್ನು ಬಳಸಿ ದೇಶ ಉಳಿಸಿ ಎಂದರು. 

                     ತದನಂತರ ಗಾಂಧಿವಾದಿಗಳು ಹಾಗು ಹಿರಿಯ ಸಮಾಜ ಸೇವಕರಾದ ಡಾ. ರಘುರಾಂ ಕೆ ವಾಜಪೇಯಿ ರವರು ಮಾತನಾಡಿ ಮಹಾತ್ಮಾ ಗಾಂಧೀಜಿ ಯವರು ವಿಶ್ವ ಕಂಡ ಮಾನವತಾವಾದಿ, ಅಹಿಂಸವಾದಿ ಮಹಾನಾಯಕ, ಅಸಾಧಾರಣ ಚಾಣಾಕ್ಷ ರಾಜಕಾರಣಿ, ಸತ್ಯ ಮತ್ತು ಅಹಿಂಸೆಯ ಮೇಲೆ ಜೀವನವಿಡೀ ಪ್ರಯೋಗ ಮಾಡಿದ ಸಾಧಕ – ಹರಿಕಾರ, ಆತ್ಮ ಸಾಧಕ. ಅಪ್ಪಟ ಕರ್ಮಯೋಗಿ, ಸ್ವಾತಂತ್ರ್ಯ ಹೋರಾಟದ ಮಹಾನ್ ಚೇತನ,  ಅಹಿಂಸಾ ಮಾರ್ಗದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು ಎಂದರು. ಸ್ವಾತಂತ್ರ ಹೋರಾಟದ ಮಂಚೂಣಿ ನಾಯಕರು ಮಹಾತ್ಮಾ ಗಾಂಧಿ ಹಾಗು ಲಾಲ್ ಬಹದ್ದೂರ್ ಶಾಸ್ತ್ರಿ ರವರು ಮರೆಯಲಾಗದ ಮಾಣಿಕ್ಯ, ಮಾದರಿ ಸರಳ ಪ್ರಧಾನಿ ಎಂದರು.

                        ಕಾಂಗ್ರೆಸ್ ಮುಖಂಡರು ಎನ್ ಎಂ ನವೀನ್ ಕುಮಾರ್ ಮಾತನಾಡಿ ಮಹಾತ್ಮಾ ಗಾಂಧಿ ಶತಮಾನದ ಪುರುಷ,  ವಿಶ್ವ ಕಂಡ ಮಹಾನ್ ಅಹಿಂಸವಾದಿ, ಸ್ವಾತಂತ್ರ್ಯ ಹೋರಾಟಕ್ಕಾಗಿ ದೇಶದ ಎಲ್ಲ ಜನರನ್ನು ಒಗ್ಗೂಡಿಸಿ ಪ್ರೇರೇಪಿಸಿದರು. ಹಾಗೆಯೇ ಗಾಂಧಿ ಯವರ ಹೋರಾಟ ಕಂಡು ಪ್ರೇರೇಪಿತರಾದ ಲಾಲ್ ಬಹದ್ದೂರ್ ಶಾಸ್ತ್ರಿ ರವರು ಮಹಾತ್ಮಾ ಗಾಂಧಿ ಯವರಂತೆಯೇ ಸರಳ ವ್ಯಕ್ತಿಯಾಗಿ ದೇಶದ ಪ್ರಧಾನಿ ಯಾಗಿ ಬಹಳ ನಿಸ್ವಾರ್ಥ ಸೇವೆ ಯನ್ನು ದೇಶಕ್ಕೆ ಸಲ್ಲಿಸಿದರು ಎಂದರು,. ಈ ಇಬ್ಬರು ಮಹನೀಯರನ್ನು ದೇಶವೇ ಸ್ಮರಿಸಬೇಕು, ಅವರ ಆದರ್ಶ ವಿಚಾರಧಾರೆ ಗಳನ್ನು ದೇಶದ ಜನರು, ಅದರಲ್ಲೂ ಯುವಪೀಳಿಗೆ ಅಳವಡಿಸಿಕೊಳ್ಳಬೇಕು ಎಂದರು.

                          ಕಾರ್ಯಕ್ರಮದಲ್ಲಿ ಕೆಂಪೇಗೌಡ ಸಹಕಾರ ಸಂಘದ ಅಧ್ಯಕ್ಷ ಸಿ. ಜಿ ಗಂಗಾಧರ ಗೌಡ ರವರು ನೆರದಿದ್ದವರಿಗೆ ಸಿಹಿ ವಿತರಿಸಿದರು.

                          ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಡಾ.ಶಾಂತರಾಜೇ ಅರಸ್, ವಿಕ್ರಂ ಅಯ್ಯಂಗಾರ್, ಕರ್ನಾಟಕ ರಾಜ್ಯ ಮಹಿಳಾ ನಿಗಮದ ನಿರ್ದೇಶಕಿ ಎಸ್.  ರೇಣುಕಾರಾಜು,  ಜಯಣ್ಣ, ವಿಜಯೇಂದ್ರ, ಪ್ರಭುಶಂಕರ್, ಚಂದ್ರ ಎಂ ಜೆ, ಮಂಜುನಾಥ್, ರಮೇಶ್ ಟಿ,   ಕುಮಾರ್ ಗೌಡ, ಬಂಗಾರಪ್ಪ, ರವಿ ನಾಯಕ್,  ದೂರ ಸುರೇಶ್,  ಮತ್ತಿತರರು ಪಾಲ್ಗೊಂಡಿದ್ದರು.

 

Leave a Reply

Your email address will not be published. Required fields are marked *