ಜಾನಪದ ಸಂಸ್ಕೃತಿ ಸೌರಭ ಕಾರ್ಯಕ್ರಮ

ತಿ.ನರಸೀಪುರ:19 ಜೂನ್ 2022

ಆಲಗೂಡು ರೇವಣ್ಣ

ರಮ್ಯ ಮತ್ತು ಅವರ ದಂಪತಿಗಳು ಕಲೆ , ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಹಿಂದಿನ ಜಾನಪದ ಸೊಗಡನ್ನು ಇಂದಿನ ಪೀಳಿಗೆಗೆ ತಿಳಿಸುತ್ತಾ ಮಾನವೀಯ ಮೌಲ್ಯಗಳನ್ನು ತಮ್ಮ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ತಿಳಿಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ದಲಿತ ಜಾಗೃತಿ ಸಮಿತಿ ಜಿಲ್ಲಾದ್ಯಕ್ಷ ತುಂಬಲ ಮಂಜುನಾಥ್ ತಿಳಿಸಿದರು.

ತಾಲ್ಲೂಕಿನ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತುಂಬಲ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದಲ್ಲಿ ರಮ್ಯಾ ಕಲಾ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಜಾನಪದ ಸಂಸ್ಕೃತಿ ಸೌರಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಕನ್ನಡ ನಾಡಿನ ಮೂಲ ಕಲೆ ಜಾನಪದ ಅದನ್ನು ಕಾಲ-ಕಾಲಕ್ಕೂ ಉಳಿಸಿ ಬೆಳಸಬೇಕಿದೆ ಎಂದರು.

ನನ್ನವ್ವ ಕಲಾ ಮತ್ತು ಸಾಂಸ್ಕೃತಿಕ ತಂಡದ ಮುಖ್ಯಸ್ಥ ಕಲಾವಿದ,ಹಾಡುಗಾರ ಯಾಚೇನಹಳ್ಳಿ ಮಹದೇವ್ ಮಾತನಾಡಿ ರಮ್ಯ ರವರು ತಾಲ್ಲೂಕಿನಲ್ಲಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಪದ ಸೊಗಡನ್ನು ತಮ್ಮ ಕಂಠಸಿರಿಯಲ್ಲಿ ಪ್ರಸ್ತುತ ಪಡಿಸುತ್ತಾ,ಜನ ಮನ್ನಣೆ ಗಳಿಸಿದ್ದಾರೆ.ಯುವ ಪೀಳಿಗೆಗೆ ಜಾನಪದದ ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡು ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ತಮ್ಮ ಸೇವೆಯನ್ನು ವಿಸ್ತರಿಸಿಕೊಂಡು ಜನಮನ್ನಣೆ ಗಳಿಸಲಿ ಎಂದು ಶುಭ ಹಾರೈಸಿದರು.

ಜಾನಪದ ಕಲೆಯಲ್ಲಿ ಬರುವ ಹಲವಾರು ಪ್ರಾಕಾರಗಳನ್ನು ಸಾದರಪಡಿಸುವುದರ ಮೂಲಕ ಜನಪದ ಕಲೆಯ ಜೀವಂತಿಕೆಯನ್ನು ಪ್ರಸ್ತುತ ಪಡಿಸಿ ನೋಡುಗರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ತುಂಬಲ ಗ್ರಾಮಪಂಚಾಯತಿ ಅಧ್ಯಕ್ಷೆ ಸುಲೋಚನ ಗುರುರಾಜ್ ನೆರವೇರಿಸಿ ಶುಭ ಕೋರಿದರು.ಇದೇ ಸಂದರ್ಭದಲ್ಲಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು,ಜಾನಪದ ಕಲೆಯನ್ನು ಜೀವಂತವಾಗಿರಸಿಕೊಂಡಿರುವ ಕಲಾವಿದರನ್ನು ಸನ್ಮಾನಿಸಲಾಯಿತು.

ನನ್ನವ್ವ ಕಲಾ ಮತ್ತು ಸಾಂಸ್ಕೃತಿಕ ತಂಡದ ಮುಖ್ಯಸ್ಥ ಕಲಾವಿದ,ಹಾಡುಗಾರ ಯಾಚೇನಹಳ್ಳಿ ಮಹದೇವ್ ತಮ್ಮ ವಿಶಿಷ್ಚ ಗಾಯನ ಹಾಗೂ ಮಾತುಗಾರಿಕೆಯ ಮೂಲಕ ನಗೆ ಚಟಾಕಿ ಹಾರಿಸಿ ನೆರೆದಿದ್ದ ಜನರನ್ನು ಆಕರ್ಷಿತರಾಗುವಂತೆ ಮಾಡಿದ್ದು ಕಾರ್ಯಕ್ರಮಕ್ಕೆ ಕಳೆ ನೀಡಿತ್ತು.

Leave a Reply

Your email address will not be published. Required fields are marked *