ಮೈಸೂರು ಇಸ್ಕಾನನಲ್ಲಿ ಕಾರ್ತಿಕ ಮಾಸದ ವಿಶೇಷ ಪೂಜೆ ಸಲ್ಲಿಸಿದ :ಎಸ್.ಟಿ. ಸೋಮ ಶೇಖರ್,

ನಂದಿನಿ ಮೈಸೂರು

ಮೈಸೂರು ಇಸ್ಕಾನನಲ್ಲಿ ಕಾರ್ತಿಕ ಮಾಸದ ವಿಶೇಷ ಪೂಜೆ ಸಲ್ಲಿಸಿದ :ಎಸ್.ಟಿ. ಸೋಮ ಶೇಖರ್,

ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ದೀಪೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತಿದ್ದು ಇಂದು ಜಯನಗರದ ಇಸ್ಕಾನ್ ದೇವಾಲಯದಲ್ಲಿ ದೀಪೋತ್ಸವ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್
ದೀಪ ಬೆಳಗಿಸಿದರು.

ಇಸ್ಕಾನ್ ಮೈಸೂರು ದೇವಸ್ಥಾನದಲ್ಲಿ ಪ್ರತಿ ಸಂಜೆ 8ರ ಹೊತ್ತಿಗೆ ಇಡೀ ಮಂದಿರವು ದೀಪಗಳಿಂದ ಕಂಗೊಳಿಸುತ್ತಿದ್ದು.ಕೃಷ್ಣನನ್ನು ಕೊಂಡಾಡುವ ದಾಮೋದರ ಅಷ್ಟಕವನ್ನು ಭಕ್ತರುಹಾಡುತ್ತಿದ್ದಂತೆಯೇ ದೇವರಿಗೆ ವಿಶೇಷ ಆರತಿಯನ್ನು ಅರ್ಚಕರು ಅರ್ಪಿಸಿದರು. ನಂತರ ನೆರೆದ ಭಕ್ತರೆಲ್ಲರೂ ಒಬ್ಬೊಬ್ಬರಾಗಿ, ಸಾಲಾಗಿ ಬಂದು ತುಪ್ಪದ ದೀಪವನ್ನು ದೇವರಿಗೆ ಅರ್ಪಿಸಿದರು.

ಕಾರ್ಯಕ್ರಮದಲ್ಲಿವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಮಿರ್ಲೇ ಶ್ರೀನಿವಾಸ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದಶಿವಕುಮಾರ್ ಎಚ್‌. ವಿ. ರಾಜೀವ್,ಮೈಸೂರು ನಗರ (ಜಿಲ್ಲಾ) ಬಿಜೆಪಿ ಅಧ್ಯಕ್ಷ ಟಿ.ಎಸ್.ಶ್ರೀವತ್ಸ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *