ಎಪಿಎಂಸಿ ಕೂಲಿ ಕಾರ್ಮಿಕರಿಂದ ಡಾ.ಪುನೀತ್ ರಾಜ್ ಕುಮಾರ್ ಅವರ 1ನೇ ವರ್ಷದ ಪುಣ್ಯಸ್ಮರಣೆ,ಹಾಲಿನ ಅಭಿಷೇಕ, ಅನ್ನಸಂತರ್ಪಣೆ

ನಂದಿನಿ ಮೈಸೂರು

ಕೂಲಿ ಕಾರ್ಮಿಕರು ಡಾ.ಪುನೀತ್ ರಾಜ್ ಕುಮಾರ್ ಅವರ ಮೊದಲನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಅನ್ನಸಂತರ್ಪಣಾ ಕಾರ್ಯಕ್ರಮ ನಡೆಯಿತು.

ಎಪಿಎಂಸಿ ಎ ಬ್ಲಾಕ್ ಬಂಡಿಪಾಳ್ಯ ಕೂಲಿ ಕಾರ್ಮಿಕರು ಅಪ್ಪು ಅಭಿಮಾನಿ‌ ಬಳಗ ಮೈಸೂರು,ಶ್ರೀ ಭುವನೇಶ್ವರಿ ಮಿತ್ರ ಮಂಡಳಿ
ವತಿಯಿಂದ ಬಂಡಿಪಾಳ್ಯದಲ್ಲಿ ಪಟಾಕಿ ಹೊಡೆದು ದಿವಂಗತ. ಡಾ. ಪುನೀತ್ ರಾಜ್ ಕುಮಾರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಹಾಲಿನ ಅಭಿಷೇಕ ಮಾಡಿದರು.

ಅಪ್ಪು ನಮನ ಕಾರ್ಯಕ್ರಮದ ಮೂಲಕ ನೂರಾರು ಜನರಿಗೆ ಅನ್ನಸಂತರ್ಪಣೆ ಮಾಡಿದರು.ಪುನೀತ್ ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತು ಊಟ ಸ್ವೀಕರಿಸಿದರು.

ಗೌರವಾಧ್ಯಕ್ಷ ಲೋಕೇಶ್ ಹಾಗೂ
ಮಹದೇವ್ ಮಾತನಾಡಿ ದಿವಂಗತ ಡಾ.ಪುನೀತ್ ರಾಜ್ ಕುಮಾರ್ ಅಗಲಿ ಒಂದು ವರ್ಷವಾಗಿದೆ.ಅಭಿಮಾನಿಗಳಲ್ಲಿ ಅವರ ನೆನಪು ಇನ್ನೂ ಮಾಸಿಲ್ಲ‌.ಅಪ್ಪುರವರ ಮೊದಲ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಎಪಿಎಂಸಿ ಎ ಬ್ಲಾಕ್ ಕೂಲಿ ಕಾರ್ಮಿಕರು ಒಟ್ಟಿಗೆ ಸೇರಿ ಇಂದು ಅನ್ನ ಸಂತರ್ಪಣೆ ಮಾಡಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಬಸವರಾಜು, ಕುಮಾರ್,ರಾಮಯ್ಯಗೌಡ,ಶಿವು,ಬೀರಪ್ಪ,ಕನ್ನಡ ಸೇನೆ ಜಿಲ್ಲಾಧ್ಯಕ್ಷ ಪಳನಿ ,
ಎಪಿಎಂಸಿ ಬಂಡಿಪಾಳ್ಯದ ಕೂಲಿಕಾರ್ಮಿಕರು,ಪದಾಧಿಕಾರಿಗಳು ,ಸಂಘದ ಸದಸ್ಯರು,ಅಭಿಮಾನಿಗಳು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *