ಮೈಸೂರು:28 ಏಪ್ರಿಲ್ 2022
ನಂದಿನಿ ಮೈಸೂರು
ಮೈಸೂರಿನಲ್ಲಿ ಏ.29 ಮತ್ತು 30 ರಂದು ಇಂಡಿಯನ್ ಲೈಫ್ ಸ್ಟೈಲ್ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಮಿಸ್ ಮೈಸೂರು ವಿನ್ನರ್ ತನಿಷ್ಕ ಮಾಹಿತಿ ನೀಡಿದರು.
ಮೈಸೂರಿನ ಸರ್ದನ್ ಸ್ಟಾರ್ ನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಮೇಳವನ್ನು ಉದ್ಘಾಟಿಸುತ್ತಿದ್ದೇನೆ.ಆರ್.ಜೆ ರಶ್ಮಿ ಹಾಗೂ ಗಣ್ಯರು ಮೇಳದಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯದ ವಿವಿಧ ವಿಶೇಷ ಕರಕುಶಲ,ಆಭರಣಗಳು ಹಾಗೂ ಉಡುಪುಗಳು ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ.ಯುವಕ ಯುವತಿಯರಿಗೆ ಬೇಕಾದ ವಸ್ತುಗಳು ದೊರೆಯಲಿದೆ.ಪ್ರವೇಶ ಉಚಿತವಾಗಿದ್ದು ಮೇಳಕ್ಕೆ ಒಮ್ಮೆ ಭೇಟಿ ನೀಡುವಂತೆ ಮೈಸೂರಿನ ಜನತೆಗೆ ಮನವಿ ಮಾಡಿದ್ದಾರೆ.