ನೂರಾರು ಅವಮಾನ ಅನುಭವಿಸಿದ ಅಂಬೇಡ್ಕರ್ ಸಂವಿಧಾನವನ್ನ ಕೊಡುಗೆಯಾಗಿ ನೀಡಿದರು:ಹೆಚ್.ಸಿ.ಮಹದೇವಪ್ಪ

ಮೈಸೂರು:28 ಏಪ್ರಿಲ್ 2022

ನಂದಿನಿ ಮೈಸೂರು

ಮೈಸೂರು ಶರಣ ಮಂಡಲಿ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮೈಸೂರು ಜಿಲ್ಲಾಪತ್ರಕರ್ತರ ಭವನದಲ್ಲಿ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಅಂಬೇಡ್ಕರ್ ಶರಣ ಮಂಡಳಿಗೆ ಶರಣ ಮಂಡಳಿ ಅಂಬೇಡ್ಕರ್ ಒಳಗೆ ಬೇರೆತರೇ ಒಳ್ಳೆಯ ಸಂದೇಶ ಸಾರುತ್ತದೆ.
ಲಂಡನ್ ನಲ್ಲಿ ಬಸವಣ್ಣ ಪುಸ್ಥಳಿ ಸ್ಥಾಪಿಸಿದ್ದಾರೆ.ಅನೇಕ ರಾಷ್ಟ್ರ ಡಾ.ಬಿ.ಆರ್.ಅಂಬೇಡ್ಕರ್ ರವರ ಜಯಂತಿ ಆಚರಿಸುತ್ತಾರೆ.ಬುದ್ಧ, ಬಸವ,ಅಂಬೇಡ್ಕರ್ ಅವರನ್ನ ನಂಬಿದವರು,ದೇವರನ್ನ ನಂಬದವರು
ದೇವಾಲಯಕ್ಕೆ ಹೋಗದಿದ್ದವನನ್ನ ನಾಸ್ಥಿಕ ಅಂತಾರೇ.ಅಂಬೇಡ್ಕರ್ ರವರ ಬಾಲ್ಯದಲ್ಲಿ ಶಾಲೆಗೆ ಹೋಗುವಾಗ ಕುಡಿಯುವ ನೀರು ಮುಟ್ಟಿಸಿಕೊಂಡೆ ಎಂದು ದೂರ ತಳ್ಳಿದ್ರು.ಕೊಚ್ಚೆ ಗುಂಡಿಗೆ ತಳ್ಳಿದ್ರೂ.ನೂರಾರು ಅವಮಾನ ಅನುಭವಿಸಿದರು.ಆಳವಾದ ಅಭ್ಯಾಸದಿಂದ ಬರವಣಿಗೆ ಮೂಲಕ ಸಂವಿಧಾನ ನೀಡಿದ್ದಾರೆ.ಸಂವಿಧಾನದ ಅಡಿಯಲ್ಲಿಯೇ ನಾನು ನೀವು ಬದುಕುತ್ತಿದ್ದೇವೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ರವರನ್ನು ಬಣ್ಣೀಸಿದರು.

ರಘುರಾಮ್ ವಾಜಪೇಯಿ, ಡಾ.ಎಂ.ಶಿವಕುಮಾರ್,ಕೆ.ಎಸ್.ಶಿವರಾಮು,ಹೇಮಾವತಿ,ಟಿ.ಎಸ್.ಅಮೃತ್ ಶರ್ಮ ರವರಿಗೆ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಹೆಚ್.ಕೆ.ರಾಮು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಡ್ಡೀಕೇರೆ ಗೋಪಾಲ್, ಮಹದೇವಪ್ಪ,ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *