ಅಡುಗೆ ಮನೆಗೆ ಸೀಮಿತವಾಗಿದ್ದ ನಾವು ಸೈನಿಕರಾಗದೇ ಇರಬಹುದು ಧ್ವಜ ತಯಾರಿಸುತ್ತೇವೆ ಹೆಮ್ಮೆಯ ಮಾತುಗಳನ್ನಾಡಿದ ಮಹಿಳೆಯರು

ನಂದಿನಿ ಮೈಸೂರು

ಮಹಿಳೆ ಎಂದರೇ ಆಕೆ ನಾಲ್ಕು ಗೋಡೆಗೆ ಸೀಮಿತಳು ಎನ್ನುವವರ ಮುಂದೆ ಅಡುಗೆ ಮನೆಗೆ ಮಾತ್ರವಲ್ಲ ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡದೇ ಇರಬಹುದು ಆದರೇ ನಾವು ದೇಶದ ಧ್ವಜ ತಯಾರು ಮಾಡುತ್ತಿದ್ದೇವೆ ಎಂದು ಮಹಿಳೆಯರು ಸಂತಸ ವ್ಯಕ್ತಪಡಿಸುತ್ತಿದ್ದ‌ ದೃಶ್ಯ ಕಂಡು ಬಂದಿತು.

ಹೌದು
ನಾನು ಏನಾದ್ರೂ ಸಾಧಿಸಬಲ್ಲೇ ಎಂದು ಮಹಿಳೆ ಜಗತ್ತಿಗೆ ತೋರಿಸಿಕೊಟ್ಟಿದ್ದಾಳೆ.
ಮಹಿಳೆಯರು ಜೀವನ ಸಾಗಿಸುವುದಕ್ಕೆ ಬಟ್ಟೆ ಹೊಲಿಗೆ ಹಾಕುವುದು ಸಾಮಾನ್ಯ ಆದರೇ
ಮೈಸೂರಿನಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ (NRLM) ಮಹಿಳೆಯರಿಂದ ರಾಷ್ಟ್ರ ದ್ವಜ ತಯಾರಿಕೆಯಾಗುತ್ತಿದೆ.

75 ನೇ ಸ್ವಾತಂತ್ರ ಅಮೃತ ಮಹೋತ್ಸವ ಅಂಗವಾಗಿ ಮನೆ ಮನೆಯಲ್ಲಿ ಧ್ವಜಾರೋಹಣ ಅಭಿಯಾನದಲ್ಲಿ ಗ್ರಾಮಾಂತರ ಮಟ್ಟದಲ್ಲಿ ರಾಷ್ಟ್ರ ಧ್ವಜ ತಯಾರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು . ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕರಿಮುದ್ದನಹಳ್ಳಿ ಗ್ರಾಮದಲ್ಲಿ ಮಹಿಳೆಯರು ರಾಷ್ಟ್ರಧ್ವಜ ತಯಾರಿಕೆ ಕಾರ್ಯ ಭರದಿಂದ ಸಾಗಿದೆ .

ಒಂದು ಧ್ವಜ ತಯಾರು ಮಾಡಲು 3 ನಿಮಿಷ ಬೇಕು

ಭಾರತದ ಧ್ವಜದಲ್ಲಿರುವ ಮೂರು ಬಣ್ಣಗಳು ಒಂದೊಂದು ವಿಶೇಷತೆ ಪ್ರತಿನಿಧಿಸುತ್ತದೆ.ಕೇಸರಿ ಧೈರ್ಯ ಶೌರ್ಯ ತ್ಯಾಗದ ಪ್ರತಿಕಾವಾದರೇ ಬಿಳುಪು ಸತ್ಯ ಶಾಂತಿ ಪರಿಶುದ್ದತೆಯ ಪ್ರತೀಕಾ ಹಸಿರು ಬಣ್ಣ ದೇಶದ ಸಂಮೃದ್ದಿ ತೋರಿಸುತ್ತದೆ.ಧ್ವಜದ ಮಧ್ಯೆ ಭಾಗದಲ್ಲಿರುವುದು ಅಶೋಕ ಚಕ್ರ.24 ಗೆರೆಗಳಿರುವ ಈ ಚಕ್ರವನ್ನ ಅಶೋಕ ಸ್ಥಂಭದಿಂದ ತೆಗೆದುಕೊಳ್ಳಲಾಗಿದೆ.

ರಾಷ್ಟ್ರ ಧ್ವಜದ ಅಳತೆ ಎಷ್ಟಿರಬೇಕು ಅಂತ ಸಂವಿಧಾನದಲ್ಲಿದೆ.ಧ್ವಜದ ಉದ್ದ ಎಷ್ಟಿರುತ್ತದೆಯೋ ಅದರ ಒಂದುವರೆ ಪಟ್ಟು ಹೆಚ್ಚಿನ ಅಗಲ ಇರಬೇಕು.ಧ್ವಜವನ್ನು ಮಡಿಚೋದಕ್ಕೂ ಒಂದು ಕ್ರಮ ಇದೆ.ಅಶೋಕ ಚಕ್ರ ಕಾಣುವ ಹಾಗೇ ಬಾವುಟವನ್ನು ಮಡಚಬೇಕು.ನಂತರ ಅದನ್ನ ಗೌರವಯುತವಾಗಿ ಇಡಬೇಕು.

ಇನ್ನೂ ಧ್ವಜವನ್ನು ಹಾರಿಸುವುದಕ್ಕೂ ಒಂದು ಕ್ರಮ ಇದೆ.ಸ್ಥಂಭದಲ್ಲಿರುವ ಎರಡು ಹಗ್ಗವನ್ನು ಬಳಸಿ ಧ್ವಜ ಹಾರಿಸಬೇಕು.ಈ ರಾಷ್ಟ್ರ ಧ್ವಜವನ್ನು ಎಲ್ಲಂದರಲ್ಲಿ ಹಾರಿಸೋಹಾಗಿಲ್ಲ.ಅದಕ್ಕೊಂದಷ್ಟು ನಿಯಮಗಳಿವೆ.ಕೆಸರಿ ಬಣ್ಣ ಮೇಲಿರಬೇಕು.ಭಾರತದ ಧ್ವಜಕ್ಕಿಂತ ಎತ್ತರದಲ್ಲಿ ಬೇರೆ ಯಾವ ಧ್ವಜವೂ ಹಾರಾಡಬಾರದು .ರಾಷ್ಟ್ರಪತಿ ಭವನ,ವಿಧಾನಸೌಧ,ಸರ್ಕಾರಿ ಕಚೇರಿಗಳನ್ನ ಹೊರತುಪಡಿಸಿದರೆ ಬೇರೆಲ್ಲಾ ಖಾಸಗೀ ಜಾಗಗಳಲ್ಲಿ ಸಂಜೆ ಸೂರ್ಯಾಸ್ತ ಆಗುವುದಕ್ಕೂ ಮುಂಚೆ ಧ್ವಜವನ್ನು ಇಳಿಸಬೇಕು.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಹರ್ ಘರ್ ತಿರಂಗ ಮನೆ ಮನೆಗಳಲ್ಲಿ ರಾಷ್ಟ್ರ ದ್ವಜ ಹರಿಸುವ ನಿಟ್ಟಿನಲ್ಲಿ ಸ್ವ ಸಹಾಯ ಸಂಘಗಳ ಮಹಿಳೆಯರಿಂದ ರಾಷ್ಟ್ರ ದ್ವಜ ತಯಾರಿಸಲಾಗುತ್ತಿದೆ ಸುಮಾರು 1,15,200 ರಾಷ್ಟ್ರ ದ್ವಜ ತಯಾರಿಸಲಾಗುತ್ತಿದ್ದು ಈಗಾಗಲೇ 80 ಸಾವಿರ ರಾಷ್ಟ್ರ ದ್ವಜ ನಿರ್ಮಾಣವಾಗಿದ್ದು ಉಳಿದ ರಾಷ್ಟ್ರಧ್ವಜಗಳನ್ನು 13 ರ ಒಳಗೆ ಮುಗಿಸಲಾಗುತ್ತದೆ, ಮೈಸೂರು ಜಿಲ್ಲೆಯ ಒಟ್ಟು 256 ಗ್ರಾಮ ಪಂಚಾಯಿತಿಗಳಿಗೆ 450 ರಾಷ್ಟ್ರಧ್ವಜ ನೀಡಲಾಗುತ್ತಿದೆ ಹಾಗೂ ಸರ್ಕಾರಿ ಕಚೇರಿಗಳು, ಶಾಲೆಗಳು, ಅಂಗನವಾಡಿಗಳು, ನಿಗಮ ಮಂಡಳಿ ಗಳಿಗೆ ನೀಡಲಾಗುತ್ತಿದೆ ಎನ್ನುತ್ತಾರೆ
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ.
ಬಿ.ಆರ್. ಪೂರ್ಣಿಮಾ.

ಪ್ರತಿ ಮನೆಗೂ ಧ್ವಜ ನೀಡಲು ಪ್ರಯತ್ನಿಸಲಾಗುವುದು , ಇದರಿಂದ ರಾಷ್ಟ್ರಧ್ವಜ ಹಾಗೂ ಸ್ವಾತಂತ್ರದ ಮಹತ್ವದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಿದಂತಾಗುತ್ತದೆ ಎಂದರು . ಸ್ಥಳೀಯ ಸ್ವಸಹಾಯ ಸಂಘಗಳ ಮಹಿಳೆಯರು , ಧ್ವಜ ತಯಾರಿಕೆಯಲ್ಲಿ ತೊಡಗಿಕೊಂಡಿದ್ದು ,ಸುಮಾರು 1,15,200 ರಾಷ್ಟ್ರ ದ್ವಜ ತಯಾರಿಸಲಾಗುತ್ತಿದ್ದು ಈಗಾಗಲೇ 80 ಸಾವಿರ ರಾಷ್ಟ್ರ ದ್ವಜ ನಿರ್ಮಾಣವಾಗಿದ್ದು ಉಳಿದ ರಾಷ್ಟ್ರಧ್ವಜಗಳನ್ನು 13 ರ ಒಳಗೆ ಮುಗಿಸಲಾಗುತ್ತದೆ ಮೈಸೂರು ಜಿಲ್ಲೆಯ ಒಟ್ಟು 256 ಗ್ರಾಮ ಪಂಚಾಯಿತಿಗಳಿಗೆ 450 ರಾಷ್ಟ್ರಧ್ವಜ ನೀಡಲಾಗುತ್ತಿದೆ ಹಾಗೂ ಸರ್ಕಾರಿ ಕಚೇರಿಗಳು, ಶಾಲೆಗಳು, ಅಂಗನವಾಡಿಗಳು, ನಿಗಮ ಮಂಡಳಿ ಗಳಿಗೆ ನೀಡಲಾಗುತ್ತಿದೆ ಎಂದು ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯೆ ರಶ್ಮಿ ತಿಳಿಸಿದರು.

ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯೆ ಬಿಂದುಶ್ರೀ ಮಾತನಾಡಿ
ಸಂಜೀವಿನಿ ಸ್ವಸಹಾಯ ಸಂಘದಿಂದ ಟೈಲರಿಂಗ್ ತರಬೇತಿ ನೀಡಿ ಮನೆ ಮನೆಯಲ್ಲಿ ಧ್ವಜಾರೋಹಣ ಅಭಿಯಾನದಲ್ಲಿ ರಾಷ್ಟ್ರಧ್ವಜ ತಯಾರಿಕೆ ಅವಕಾಶ ಕಲ್ಪಿಸಲಾಗಿದೆ ಇದರಿಂದ ಸ್ವ ಉದ್ಯೋಗಕ್ಕೆ ಅನುಕೂಲವಾಗಿದೆ , ಸ್ವಾವಲಂಬಿ ಜೀವನಕ್ಕೂ ನೆರವಾಗಿದೆ ಎಂದರು .

75 ನೇ ಸ್ವಾತಂತ್ರ್ಯ ಮಹೋತ್ಸವ ಅಂಗವಾಗಿ ಮನೆ ಮನೆಗಳಲ್ಲಿ ಧ್ವಜಾರೋಹಣ ಅಭಿಯಾನ ನಡೆಸಲಾಗುತ್ತಿದೆ ಹಾಗೂ ಧ್ವಜ ತಯಾರಿಸಲು ಸರ್ಕಾರ ಅವಕಾಶ ಕಲ್ಪಿಸಿರುವುದು ಉತ್ತಮ ನಡೆಯಾಗಿದೆ . ಇದರಿಂದ ತುಂಬಾ ಸಂತಸವಾಗಿದೆ ನನಗೆ ಮಿಲಿಟರಿ ಅಂದರೆ ತುಂಬಾ ಇಷ್ಟ ಆದರೆ ಅವಕಾಶ ಸಿಗಲಿಲ್ಲ ಆದರೆ ದ್ವಜ ತಯಾರಿಸಿ ದೇಶ ಪ್ರೇಮ ತೋರಿಸಲು ಒಳ್ಳೆಯ ಅವಕಾಶ ಎಂದು ಸ್ವಸಹಾಯ ಸಂಘದ ತರಬೇತುದಾರರಾದ
ಸುಜಾತಾ ತಿಳಿಸಿದರು.

Leave a Reply

Your email address will not be published. Required fields are marked *