ಬಸವರಾಜು / ನಂದಿನಿ ಮೈಸೂರು
ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧನೆ ಮಾಡಿದ ತಗಡೂರು ನಾಗರಾಜ್ ರವರಿಗೆ ಶಾಸಕ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯ ಸನ್ಮಾನಿಸಿ ಗೌರವಿಸಿದರು
ತಾಂಡವಪುರ : ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಗಡೂರು ಗ್ರಾಮದ ನಾಗರಾಜ್ ರವರು ಇಂಡಿಯಾ ಬುಕ್ ಆಫ್ ರೆಕಾರ್ಡ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧನೆ ಮಾಡಿದರು ಇವರನ್ನು ಕ್ಷೇತ್ರದ ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯನವರು ನಗದು ಬಹುಮಾನವನ್ನು ನೀಡಿ ಗೌರವಿಸಿ ಸನ್ಮಾನಿಸಿ ಪ್ರೋತ್ಸಾಹ ನೀಡಿದರು ಇದೆ ವೇಳೆ ಮಾತನಾಡಿದ ಶಾಸಕರು ನನ್ನ ಕ್ಷೇತ್ರದಲ್ಲಿ ಇಂತಹ ಸಾಧಕರು ಇರುವುದು ನಮಗೆ ಹಾಗೂ ನಮ್ಮ ಕ್ಷೇತ್ರದ ಜನತೆಗೆ ಹೆಮ್ಮೆಯ ವಿಷಯವಾಗಿದ್ದು ಇಂತಹ ಪ್ರತಿಭೆಗಳು ಇನ್ನು ಹೆಚ್ಚು ಹೆಚ್ಚು ಬೆಳೆಯಬೇಕು ಅದಕ್ಕೆ ನನ್ನ ಪ್ರೋತ್ಸಾಹ ಸದಾಾ ಇರುತ್ತದೆ ಅದಕ್ಕೆ ನನ್ನ ಪ್ರೋತ್ಸಾಹ ಸದಾ ಇರುತ್ತದೆ ಎಂದು ತಿಳಿಸಿದರು 1) 2011 ರಲ್ಲಿ ಜಪಾನಿ ನಲ್ಲಿ ನಡೆದ ಇಂಟೆರ್ ನ್ಯಾಷನಲ್ ಕನ್ವೆನ್ಷನ್ ಕ್ವಾಲಿಟಿ ಸರ್ಕಲ್ ನಲ್ಲಿ ಟಿ ವಿ ಸ್ ಮೋಟಾರ್ ಕಂಪನಿ ವತಿಯಿಂದ ಭಾಗವಯಿಸಿರುತ್ತೆನೆ. 2) ಕಳೆದ 9 ವರ್ಷಗಳಿಂದ sslc ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಟಾಪ್ ಫೋರ್ ವಿದ್ಯಾರ್ಥಿಗಳಿಗೆ 20gm ಬೆಳಿ ಪಧಕವನು ಸ್ವಂತ ಖರ್ಚಿನಿಂದ ಸ್ವಾತಂತ್ರ ದಿನಾಚರಣೆಯ ದಿನ ನೀಡಿ ಸನ್ಮಾನಿಸಿ ಪ್ರೋತ್ಸಾಹ ನೀಡುತ ಬಂದಿರುತೇನೆ. (3) ಒಂದು ಪೋಸ್ಟ್ ಕಾರ್ಡ್ ನಲ್ಲಿ I LOVE YOU INDIA ಎಂಬ ಅಂಗ್ಲ ಪದಗಳನ್ನು 5000 ಬಾರಿ ಬರೆದು ( 65000) ಅಕ್ಷರ ಗಳನ್ನು ಬರೆದು ಇಂಡಿಯಾ ಬುಕ್ ಒಫ್ ರೆಕಾರ್ಡ್ ಮಾಡಿರುತ್ತೇನೆ 4) ಇಂಗ್ಲಿಷ್ a-z ವರ್ಣಮಾಲೆ ಯನ್ನು 1 ಸೆಕೆಂಡ್ 35 ಮಿಲಿ ಸೆಕೆಂಡ್ ನಲ್ಲಿ ಪಠಿಸಿ ಏಷ್ಯಾ ಬುಕ್ ಒಫ್ ರೆಕಾರ್ಡ್ ಮಾಡಿರುತ್ತೇನೆ 5) ಕರ್ನಾಟಕ ಸಾಂಸ್ಕೃತಿಕ ಪರಿಶತ್ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ 6) agl ಸಂಸ್ಥೆ ಯು ಎಕ್ಸೆಲೆನ್ಸ್ ಅವಾರ್ಡ್ ನೀಡಿದೆ 7) hypedge ಮೀಡಿಯಾ ದವರು ಇಂಡಿಯಾ ಸೋಶಿಯಲ್ ಇಂಪ್ಯಾಕ್ಟ್ ಅವಾರ್ಡ್ ನೀಡಿ ಗೌರವಿಸಿದ್ದಾರೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಸಿ ಬಸವರಾಜು ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ ಮುಖಂಡರಾದ ಗಾರ್ಡನ್ ಮಹೇಶ್ ಎಪಿಎಂಸಿ ಮಾಜಿ ಉಪಾಧ್ಯಕ್ಷ ಆರ್ ಮಹದೇವ್ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗುರು ಮಲ್ಲೇಶ್ ಬಾಲರಾಜು ಪುಟ್ಟಣ್ಣ ಶಿವರಾಮು ನಾಗಣ್ಣ ರಾಜಣ್ಣ ಶಾಂತಮ್ಮ ಮಾದ ಶೆಟ್ಟರು ಸೇರಿದಂತೆ ಮುಂತಾದ ಮುಖಂಡರು ಗ್ರಾಮಸ್ಥರು ಹಾಜರಿದ್ದರು