ಮಹಿಳೆಗೆ ಡ್ರಾಪ್ ಕೊಡುವ ನೆಪದಲ್ಲಿ ಸುಲಿಗೆ ಮಾಡಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಹುಲ್ಲಹಳ್ಳಿ ಪೋಲಿಸರು ಯಶಸ್ವಿ

122 Views

ಹುಲ್ಲಹಳ್ಳಿ:16 ಜನವರಿ 2022

ನಂದಿನಿ ಮೈಸೂರು

ಮಹಿಳೆಗೆ ಡ್ರಾಪ್ ಕೊಡುವ ನೆಪದಲ್ಲಿ 19 ಗ್ರಾಂ ಚಿನ್ನದ ಸರ, ಒಂದು ನೋಕಿಯಾ ಕೀಪ್ಯಾಡ್ ಮೊಬೈಲ್ ಅನ್ನು ಸುಲಿಗೆ ಮಾಡಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಹುಲ್ಲಹಳ್ಳಿ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹುಲ್ಲಳ್ಳಿ ಯಡಿಯಾಲದಲ್ಲಿ ನಡೆದ ಸುಲಿಗೆ ಪ್ರಕರಣ 10 ರಂದು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಆರೋಪಿಗಳಾದ ಮುಜೀಬ್ ಮತ್ತು ವೆಂಕಟರಾಜು ರವರುಗಳು ತಲೆಮರಿಸಿಕೊಂಡಿದ್ದರು.

ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಪಿಎಸ್ಐ ಹುಲ್ಲಳ್ಳಿ ರವರ ಆದ ಬಿಕೆ ಮಹೇಶ್ ಕುಮಾರ್ ಅವರ ನೇತೃತ್ವದ ತಂಡ ಆರೋಪಿಗಳದ ಮುಜೀಬ್ ಮತ್ತು ವೆಂಕಟರಾಜು ಹಾಗೂ ಮಾಲನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಎಸ್ಪಿ ಚೇತನ್ ,ಎಎಸ್ಪಿ ಶಿವಕುಮಾರ್, ಪೊಲೀಸ್ ಉಪಾಧೀಕ್ಷಕರಾದ ಗೋವಿಂದರಾಜು ,ಪೊಲೀಸ್ ವೃತ್ತ ನಿರೀಕ್ಷಕ ಲಕ್ಷ್ಮಿಕಾಂತ ತಳವಾರರ ನಂಜನಗೂಡು ರವರ ಮಾರ್ಗದರ್ಶನದಲ್ಲಿ ಬಿಕೆ ಮಹೇಶ್ ಕುಮಾರ್ ಪಿಎಸ್ಐ ಹುಲ್ಲಹಳ್ಳಿ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸತೀಶ್ , ಅಶೋಕ್, ದೊಡ್ಡಯ್ಯ, ಸಣ್ಣಸ್ವಾಮಿ, ಮಹೇಂದ್ರ, ನಾಗರಾಜ್ ಮತ್ತು ನಜೀರ್ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.

ಈ ತಂಡದ ಕಾರ್ಯವನ್ನು ಶ್ಲಾಘಿಸಿ ಎಸ್ಪಿ ಚೇತನ್ ಆರ್ ರವರು ಬಹುಮಾನವನ್ನು ಘೋಷಿಸಿರುತ್ತಾರೆ.

Leave a Reply

Your email address will not be published. Required fields are marked *