ನಂದಿನಿ ಮೈಸೂರು
ಮಗು ಅನ್ನೋ ಪದ ಕೇಳಿದರೇ ಸಾಕು ನಮಗೆ ಅರಿವೇ ಇಲ್ಲದೇ ನಮ್ಮ ಮುಖದಲ್ಲಿ ಒಂದು ನಗು ಮೂಡುತ್ತದೆ.ಮಕ್ಕಳಿಲ್ಲದ ದಂಪತಿಗಳಿಗೆ ಕಾನೂನು ಬದ್ಧವಾಗಿ ದತ್ತು ನೀಡುತ್ತಿದೆ “ಶ್ರೀ ಛಾಯಾದೇವಿ ವಿಶೇಷ ದತ್ತು ಕೇಂದ್ರ.
ದತ್ತು ಮಕ್ಕಳನ್ನು ಪಡೆಯಲು ದೂರದ ಊರಿಗೆ ಹೋಗಬೇಕಿತ್ತು.ದತ್ತು ಮಕ್ಕಳನ್ನು ಪಡೆಯುವ ಬಗ್ಗೆ ಕೆಲವರಿಗೆ ಮಾಹಿತಿಯ ಕೊರತೆಯೂ ಇತ್ತು. ಹೌದು ದತ್ತು ಮಕ್ಕಳನ್ನು ನೀಡಲು ಸಾಂಸ್ಕೃತಿಕ ನಗರೀ ಮೈಸೂರಿನ ಚಿಕ್ಕಹರದನಹಳ್ಳಿ ಬೇಡರ ಕಣ್ಣಪ್ಪ ದೇವಸ್ಥಾನ ಹಿಂಭಾಗ ಜಯನಗರದಲ್ಲಿ ಶ್ರೀ ಛಾಯಾದೇವಿ ಮಕ್ಕಳ ಆಶ್ರಮ ಮತ್ತು ವಿಶೇಷ ದತ್ತು ಕೇಂದ್ರ ಸ್ಥಾಪನೆಯಾಗಿದೆ.
ಮೈಸೂರು ಜಿಲ್ಲೆಯಲ್ಲಿ ಕಳೆದ 8 ವರ್ಷಗಳಿಂದ ಯಾವುದೇ ದತ್ತು ಕೇಂದ್ರ ಇರುವುದಿಲ್ಲ ಮೈಸೂರಿನ ವ್ಯಾಪ್ತಿಯಲ್ಲಿ 01 ದಿನದಿಂದ 06 ವರ್ಷದ ಚಿಕ್ಕ ಚಿಕ್ಕ ಅನಾಥ ಒಪ್ಪಿಸಲ್ಪಟ್ಟ ಮಕ್ಕಳು ಹಾಗು ತೆಜಿಸಲ್ಪಟ್ಟ ಮಕ್ಕಳು ತಿಂಗಳಲ್ಲಿ ಸುಮಾರು ಮಕ್ಕಳು ಕಂಡುಬರುತ್ತಿದ್ದವು. ಈ ಮಕ್ಕಳುಗಳನ್ನು ಘೋಷಣೆ ಮತ್ತು ಮುಂದಿನ ದತ್ತು ಪ್ರಕ್ರಿಯೆಗಾಗಿ ಮಕ್ಕಳನ್ನು ಪಕ್ಕದ ಜಿಲ್ಲೆಗಳಿಗೆ ಕಳುಹಿಸಿಕೊಡುತ್ತಿದ್ದರು. ಈ ವಿಚಾರವಾಗಿ ಮೈಸೂರು ಜಿಲ್ಲೆಯಲ್ಲಿ ಶ್ರೀ ಛಾಯಾದೇವಿ ಸಂಸ್ಥೆಯಲ್ಲಿ ದತ್ತು ಕೇಂದ್ರವನ್ನು ಪ್ರಾರಂಭಿಸಬೇಕೆಂದು 2020 ರಲ್ಲಿ ಸರ್ಕಾರಕ್ಕೆ ಪ್ರಸ್ಥವನೆಯನ್ನು ಎಲ್ಲಾ ರೀತಿಯ ವ್ಯವಸ್ಥೆಯನ್ನು ಸಲ್ಲಿಸಿದ್ದೆವು. ಹಾಗೂ ದತ್ತು ಕೇಂದ್ರಕ್ಕೆ ಬೇಕಾದಂತಹ ಎಲ್ಲಾ ಮಾಡಿಕೊಂಡಿದ್ದೆವೆ. ನಮ್ಮ ಸಕಕ ಪ್ರಯತ್ನದ ನಂತರ ನಮ್ಮ ಮನವಿಗೆ ಸ್ಪಂದಿಸಿ ಸರ್ಕಾರ ಏಪ್ರಿಲ್ 2022 ರಂದು ದತ್ತು ಕೇಂದ್ರವನ್ನು ಪ್ರಾರಂಭಿಸುವಂತೆ ಅನುಮತಿ ನೀಡಿಲಾಗಿತ್ತು.ಕಳೆದ ತಿಂಗಳು ಕೇಂದ್ರ ಸ್ಥಾಪನೆಗೆ ಸರ್ಕಾರದಿಂದ ಮಾನ್ಯತೆ ದೊರೆತಿದೆ.ಮಕ್ಕಳನ್ನು ಕಾನೂನು ಬದ್ದವಾಗಿ ದತ್ತು ಪಡೆಯಬಹುದಾಗಿದೆ.
ಪ್ರಸ್ತುತ ಶ್ರೀ ಛಾಯಾದೇವಿ ಸಂಸ್ಥೆಯು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಶ್ರೀ ಛಾಯಾದೇವಿ ವಿಶೇಷ ದತ್ತು ಕೇಂದ್ರ ನಡೆಸಲು ಮಾನ್ಯತೆ ಪಡೆದಿದೆ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಎಂ.ಟಿ.ಕಮಲ ಮಾಹಿತಿ ನೀಡಿದರು.
ಡಾ.ಭಾನು ಪ್ರಕಾಶ್ ಮಾತನಾಡಿ
ಶ್ರೀ ಛಾಯಾದೇವಿ ಸಂಸ್ಥೆಯನ್ನು ಶ್ರೀ ಭೀರಪ್ಪ ಮಹಾಸ್ವಾಮಿಗಳು 1992 ರಲ್ಲಿ ಸ್ಥಾಪನೆ ಮಾಡಿದರು. ಸಂಸ್ಥೆಯು ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಸಮಾಜ ಸೇವೆಯನ್ನು ಮಾಡಿಕೊಂಡು ಬರುತ್ತಿದೆ.ದತ್ತು ಕೇಂದ್ರಕ್ಕೆ 11 ದಿನದಿಂದ 6 ವರ್ಷ ‘ಒಳಪಟ್ಟಿ ಬೇಡವೆಂದು ತ್ಯಜಿಸಲು ತಂದೆತಾಯಿ ಹಾಗೂ ಸಂಬಂದಿಕರು ಬೇಡವೆಂದು ಬಿಟ್ಟೋಗಿರುವಂತಹ ಮಕ್ಕಳು ಅನಾಥ ಮಕ್ಕಳು ಈ ತರದ ಎಲ್ಲಾರೀತಿಯ ಮಕ್ಕಳನ್ನು ಸರ್ಕಾರದ ವಶಕ್ಕೆ ಹಾಗೂ ದತ್ತು ಕೇಂದ್ರಕ್ಕೆ ನೀಡಬಹುದಾಗಿರುತ್ತದೆ. ಈ ಮಕ್ಕಳಗಳನ್ನು ಉತ್ತಮ ರೀತಿಯ ಪಾಲನೆ ಪೋಷಣೆ, ರಕ್ಷಣೆ ನೀಡಲಾಗುತ್ತದೆ. ಮಗು ಪ್ರಕರಣವನ್ನು
ಮಕ್ಕಳ ಕಲ್ಯಾಣ ಸಮಿತಿ ರವರ ಗಮನಕ್ಕೆ ತರಲಾಗುತ್ತದೆ. ನಂತರ ಮಕ್ಕಳ ಕಲ್ಯಾಣ ಸಮಿತಿರವರು ದತ್ತು ಮುಕ್ತ ಆದೇಶದ
ಪ್ರತಿ ನೀಡಿದ ನಂತರ ಮಗುವಿನ ಮಾಹಿತಿಯನ್ನು ಕಾಲಾ’ ಜಾಲಾತಾಣದಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ನಂತರ ಮಕ್ಕಳುಗಳನ್ನು ಕಾನೂನು ಬದ್ಧವಾಗಿ ದತ್ತು ನೀಡಲಾಗುತ್ತದೆ ಎಂದರು.
ಸಮಿತಿ ಸದಸ್ಯೆ ಸವಿತಾ ಕುಮಾರಿ ಮಾತನಾಡಿ ಕೆಲವೊಂದು ಮಕ್ಕಳಿಗೆ ಅನ್ಯಾಯವಾದಾಗ ಮಾನಸಿಕವಾಗಿ ನೊಂದಿರುತ್ತಾರೆ.ಅವರ ಗೌಪ್ಯತೆ ಕಾಪಾಡುತ್ತೇವೆ.ಮಕ್ಕಳು ಏನೇ ಸಮಸ್ಯೆ ,ದೌರ್ಜನ್ಯ ,ಕಿರುಕುಳ ಅನುಬಹುಸುತ್ತಿದ್ದಲ್ಲಿ 1098 ಕ್ಕೆ ಕರೆ ಮಾಡಿ ನಮ್ಮನ್ನ ಸಂಪರ್ಕಿಸಬಹುದು ಎಂದರು.
ಇದೇ ಸಂದರ್ಭದಲ್ಲಿ
ಸಾಮಾಜಿಕ ಕಾರ್ಯಕರ್ತ ಮಹೇಂದ್ರ,ಸಂಯೋಜಕಿ ಉಷಾ,ಸಿಬ್ಬಂದಿ ಧನಲಕ್ಷ್ಮೀ ಹಾಜರಿದ್ದರು.
ಶ್ರೀ ಛಾಯಾದೇವಿ ವಿಶೇಷ ದತ್ತು ಕೇಂದ್ರ ಚಿಕ್ಕಹರದನಹಳ್ಳಿ ಜಯನಗರ ಮೈಸೂರು
ಮಾಹಿತಿಗಾಗಿ ಸಂಪರ್ಕಿಸಿ:9482163177
8618770716