ನಂದಿನಿ ಮೈಸೂರು
ಮೈಸೂರು ರಂಗಾಯಣದ ನಿರ್ದೇಶಕ ಅಡಂಡ ಕಾರ್ಯಪ್ಪ ಟಿಪ್ಪು ಸುಲ್ತಾನರ ನಿಜ ಕನಸುಗಳು ಎಂಬ’ ಪುಸ್ತಕ ಬಿಡುಗಡೆ ಮಾಡಿದ್ದಲ್ಲದೇ ನಾಟಕ ಪ್ರದರ್ಶನ ಮಾಡಿಸಿ ಜಾತಿ ಧರ್ಮಗಳ ಮಧ್ಯೆ ವಿಷದ ಬೀಜ ಬಿತ್ತಿ ಶಾಂತಿ ಕದಡುವಂತೆ ಮಾಡಿದ್ದಾರೆ ಅವರು ಬರದಿರುವ ಪುಸ್ತಕದಲ್ಲಿ ಟಿಪ್ಪು ಬಗ್ಗೆ ತಿರುಚಿ ಬರೆದಿದ್ದಾರೆ ಎಂದು ಸೈಯದ್ ಇಕ್ಬಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು
ಟಿಪ್ಪು ಸುಲ್ತಾನ್ ಒಬ್ಬ ಹೋರಾಟಗಾರ.
ಟಿಪ್ಪುವಿನ ನಿಜ ಕನಸುಗಳನ್ನು ತಿರುಚಿ ಅಡ್ಡಂಡ ಕಾರ್ಯಪ್ಪನ ಸುಳ್ಳು ಕನಸುಗಳು ಎಂಬ ನಾಟಕ ಬರೆದಿದ್ದಾರೆ ಹಾಗೂ ಟಿಪ್ಪುವಿನ ಮುಖವನ್ನು ವಿರೂಪಗೊಳಿಸಲಾಗಿದೆ ಮತ್ತು ಟಿಪ್ಪು ಸುಲ್ತಾನರನ್ನು ಪರ್ಶಿಯನ್ ದೇಶದವರು ಎಂದು ಹೇಳುವ ಮೂಲಕ ಹೊರದೇಶದವರು ಎಂದು ಬಿಂಬಿಸಲಾಗಿದೆ.
ಈ ನಾಟಕದಲ್ಲಿ ಟಿಪ್ಪು ಕೊಡವರನ್ನು ಸ್ನೇಹ ಹಸ್ತ ಚಾಚುವಂತೆ ನಟಿಸಿ, ವಿಷ ಉಣಿಸಿ ಕೊಂದಿದ್ದಾನೆ ಎಂದು ಬಿಂಬಿಸಲಾಗಿದೆ.ಒಕ್ಕಲಿಗರು ಹಾಗೂ ನಮ್ಮ ನಡುವೆ ದ್ವೇಷ ಬಿತ್ತುತ್ತಿದ್ದಾರೆ.ನಾವು ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ನಮ್ಮ ಮೇಲೆ ಈ ರೀತಿಯ ಧರ್ಮ ಧರ್ಮಗಳ ನಡುವೆ ಎತ್ತಿ ಕಟ್ಟುವ ಕೆಲಸ ಮಾಡಲಾಗುತ್ತಿದೆ.
ಟಿಪ್ಪು ಸುಲ್ತಾನರ ನಿಜ ಕನಸುಗಳ ಪುಸ್ತಕ ಅಡ್ಡಂಡ ಕಾರ್ಯಪ್ಪ ರವರ ಸುಳ್ಳು ಕನಸುಗಳು ಎಂದು ಕಿಡಿಕಾರಿದರು.
ಶೌಕತ್ ಮಾತನಾಡಿ ಭಾರತ ಸರ್ವಜನಾಂಗದ ಶಾಂತಿಯ ತೋಟ.ಹಿಂದೂ ಮುಸ್ಲಿಂರು ನಾವೆಲ್ಲ ಅಣ್ಣ ತಮ್ಮಂದಿರ ತರ ಜೀವಿಸುತ್ತಿದ್ದೇವೆ.ಟಿಪ್ಪು ಇತಿಹಾಸದ ಬಗ್ಗೆ ಅಡ್ಡಂಡ ಕಾರ್ಯಪ್ಪ ಸುಳ್ಳಿನ ಪುಸ್ತಕ ಬಿಡುಗಡೆ ಮಾಡಿರುವುದು ಬೇಸರದ ಸಂಗತಿ ಎಂದರು.
ದಲಿತ ಮಹಾ ಸಭಾ ಅಧ್ಯಕ್ಷ ಎಸ್.ರಾಜೇಶ್ ಮಾತನಾಡಿ ಮತ ಪ್ರಚಾರಕ್ಕಾಗಿ ಶಾಂತಿ ಸುವ್ಯವಸ್ಥೆ ಹಾಳಾಗಲು ಸಂಚು ರೂಪಿಸಿ ಟಿಪ್ಪು ವಿರುದ್ದ ಪುಸ್ತಕ ಬರೆದಿದ್ದಾರೆ ಅದನ್ನು ದಲಿತ ಮಹಾ ಸಭಾ ಖಂಡಿಸುತ್ತದೆ. ಪ್ರತಾಪ್ ಸಿಂಹ ಗುಂಬಜ್ ಮಾದರಿಯ ಬಸ್ ನಿಲ್ದಾಣ ಕಟ್ಟಡ ಒಡೆದು ಹಾಕುತ್ತೇನೆ ಎಂದು ಗೂಂಡಾಗಿರಿಗಳ ಹಾಗೇ ವರ್ತಿಸುತ್ತಿದ್ದಾರೆ ಇದು ಸರಿಯಲ್ಲ ಮುಂದಿನ ದಿನಗಳಲ್ಲಿ ಜನ ನಿಮಗೆ ಬುದ್ದಿ ಕಲಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಮುಸ್ಲಿಂ ಮುಖಂಡರಾದ ರಸೂಲ್, ಶಹನ್‌ಶಾ, ಮೈಸೂರು ನಗರ. ಎಸ್.ಸಿ. ಘಟಕದ ಅಧ್ಯಕ್ಷ ಆರ್, ರಮೇಶ್, ಉಪಾಧ್ಯಕ್ಷರಾದ ರಾಮಕೃಷ್ಣ, ಕಾಂಗ್ರೆಸ್ ಮುಖಂಡ ಇರ್ಫಾನ್ ಅನ್ನು ಬಾಯ್,ಸೈಯದ್ ಫಾರೂಕ್ ಜೊತೆಯಲ್ಲಿದ್ದರು.