ಸಿಗ್ಮಾ ಆಸ್ಪತ್ರೆಯಲ್ಲಿ ಯಶಸ್ವಿ ಎಂಡೋಸ್ಕೋಪಿ ಕಾರ್ಯಗಾರ

ನಂದಿನಿ ಮೈಸೂರು

*ಸಿಗ್ಮಾ ಆಸ್ಪತ್ರೆಯಲ್ಲಿ ಯಶಸ್ವಿ ಎಂಡೋಸ್ಕೋಪಿ ಕಾರ್ಯಗಾರ*.

ಎರಡು ದಿನಗಳ ಕಾಲ ನಡೆದ ಎಂಡೋಸ್ಕೋಪಿ ಕಾರ್ಯಗಾರವು ವಿವಿಧ ಭಾಗಗಳಿಂದ ಬಂದಿದ್ದ ವೈದ್ಯರುಗಳಿಗೆ ಸಿಗ್ಮಾ ಆಸ್ಪತ್ರೆಯ ಲ್ಯಾಪ್ರೋಸ್ಕೋಪಿ ಮತ್ತು ಎಂಡೋಸ್ಕೋಪಿ ತಜ್ಞರಾದ ಡಾ. ಜಿ ಸಿದ್ದೇಶ್ ರವರ ನೇತೃತ್ವದಲ್ಲಿ ನಡೆಯಿತು.

ಅಖಿಲ ಭಾರತೀಯ ಶಸ್ತ್ರ ಚಿಕಿತ್ಸಕರ ಸಂಘದ ಮಾಜಿ ಅಧ್ಯಕ್ಷರಾದ ಇವರು ಸಂಘದ ವತಿಯಿಂದ ಸಿಗ್ಮಾ ಆಸ್ಪತ್ರೆಯಲ್ಲಿ ಎರಡನೇ ಬಾರಿ ಈ ಕಾರ್ಯಗಾರ ನಡೆಸಲಾಯಿತು. ಬಂದಿದ್ದ ಹಲವಾರು ವೈದ್ಯರುಗಳಿಗೆ ಸೆಮಿನಾರ್ ನಡೆಸಿ ಡೆಮೋ ಮುಖಾಂತರ ರೋಗ ಪತ್ತೆ ಮಾಡುವ ತರಬೇತಿ ನೀಡಲಾಯಿತು. ಇದನ್ನು ಕಲಿತ ವೈದ್ಯರುಗಳು ಅವರ ಸ್ವಂತ ಜಾಗದಲ್ಲಿ ಇದನ್ನು ಅನುಸರಿಸಿ ರೋಗಿಗಳಿಗೆ ರೋಗಪತ್ತೆ ಮಾಡಿ ಅದಕ್ಕೆ ಸಮರ್ಪಕ ಚಿಕಿತ್ಸೆ ನೀಡುವಲ್ಲಿ ಸಹಕಾರಿಯಾಗುತ್ತದೆ.
ಡಾ. ಜಿ ಸಿದ್ದೇಶ್ ರವರು ನುರಿತ ಎಂಡೋಸ್ಕೋಪಿ ತಜ್ಞರು ಹಾಗೂ ಮೈಸೂರಿನಲ್ಲಿ ಮೊದಲ ಬಾರಿ ಎಂಡೋಸ್ಕೋಪಿ ಪರಿಚಯಿಸಿ ಯಶಸ್ವಿಯಾದವರು ಇಂತಹ ಪರಿಣಿತರಿಂದ ತರಬೇತಿ ಪಡೆದ ಬಹಳಷ್ಟು ವೈದ್ಯರುಗಳು ಈಗ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ತರಹದ ಕಾರ್ಯಗಾರಗಳನ್ನು ಸಿಗ್ಮಾ ಆಸ್ಪತ್ರೆಯಲ್ಲಿ ನಡೆಸಲು ಮುಂದಾಗಿದ್ದು ಇದಕ್ಕೆ ಸಹಕಾರಿಯಾಗಿ ಸಿಗ್ಮಾ ಆಸ್ಪತ್ರೆ ಆಡಳಿತ ಮಂಡಳಿ ಸಹಕಾರವಿದೆ.
ತರಬೇತಿ ಪಡೆದ ವೈದ್ಯರುಗಳಿಗೆ ಅಖಿಲ ಭಾರತ ಶಸ್ತ್ರ ಚಿಕಿತ್ಸಕರ ಸಂಘದ ವತಿಯಿಂದ ಎಂಡೋಸ್ಕೋಪಿ ತರಬೇತಿ ಪ್ರಮಾಣ ಪತ್ರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಡಾ. ಜಿ ಸಿದ್ದೇಶ್ ಅವರ ಜೊತೆ ಡಾ. ರಘುವೀರ್ ಡಾ. ಮನೋಪ್ ಡಾ. ಮನೋಜ್ ಕುಮಾರ್ ಮತ್ತು ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು

Leave a Reply

Your email address will not be published. Required fields are marked *