ಮ‌ಹಾಜನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ಬಡ್ತಿ ಪಡೆದ ಸುಜಾತ ರವರಿಗೆ ಶ್ರೀಪಾಲ್ ರಿಂದ ಸನ್ಮಾನ

ನಂದಿನಿ ಮೈಸೂರು

ಮ‌ಹಾಜನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ಬಡ್ತಿ ಪಡೆದ ಸುಜಾತ ರವರಿಗೆಸನ್ಮಾನಿಸಲಾಯಿತು.

ಮೈಸೂರಿನ ಜಯಲಕ್ಷ್ಮಿಪುರಂ ನಲ್ಲಿರುವ ಮಹಜನ ಪ್ರೌಢಶಾಲೆಯ ಆವರಣದಲ್ಲಿ ಮೊದಲಿಗೆ ವಿಧ್ಯಾರ್ಥಿಗಳಿಗೆ ಕಜ್ಜಾಯ ವಿತರಿಸಿದರು.

ನಂತರ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಶ್ರೀಪಾಲ್ ರವರು
ಬಡ್ತಿ ಪಡೆದ ಸುಜಾತ ರವರಿಗೆ ಹಾಗೂ ಬೀರೇಗೌಡರಿಗೆ ಸನ್ಮಾನಿಸಿದರು.

ಸ್ವಾತಂತ್ರ್ಯಪೂರ್ವದಲ್ಲಿ ಸ್ಥಾಪಿತವಾಗಿರುವ ಮಹಜನ ಪ್ರೌಢಶಾಲೆಯಲ್ಲಿ ಆರಂಭದ ದಿನದಲ್ಲಿ ಅನುತ್ತೀರ್ಣರಾದ 13ವಿದ್ಯಾರ್ಥಿಗಳು ಶಾಲೆಗೆ ಸೇರಿಕೊಂಡರು.ಅವರಿಗೆಲ್ಲಾ ಉತ್ತಮ ಶಿಕ್ಷಣ ನೀಡಿದ ಕೀರ್ತಿ ಈ ಶಾಲೆಗೆ ಸಲ್ಲುತ್ತದೆ.
13 ವಿದ್ಯಾರ್ಥಿಗಳು ಇದ್ದ ಶಾಲೆಯಲ್ಲಿ ಇದೀಗ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಶಾಲೆಯಲ್ಲಿ ಸಹಶಿಕ್ಷಕಿಯಾಗಿದ್ದ ನಾನು ಇಂದು ಬಡ್ತಿ ಪಡೆದು
ಮುಖ್ಯೋಪಾಧ್ಯಾಯರ ಸ್ಥಾನ ಪಡೆದಿದ್ದೇನೆ.ಸಹಕರಿಸಿದ ಎಲ್ಲಾರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಸುಜಾತ ರವರು ತಿಳಿಸಿದರು.

ಕೆಪಿಸಿಸಿ ಕಾರ್ಮಿಕ ಸಂಘಟನೆ ರಾಜ್ಯ ಕಾರ್ಯದರ್ಶಿ ಶ್ರೀಪಾಲ್ ಮಾತನಾಡಿ ಯಾವುದೇ ಶಾಲೆಯಾಗಲೀ ಬಡವರ ಮಕ್ಕಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರಲ್ಲದೇ ಯಾವುದೇ ಸಂದರ್ಭದಲ್ಲೂ ವಿಧ್ಯಾರ್ಥಿಗಳಿಗೆ ಏನೇ ರೀತಿ ಸಹಾಯಕ್ಕಾಗಿ ನನ್ನನ್ನು ಸಂಪರ್ಕಿಸಿ ಎಂದು ಅಭಯ ನೀಡಿದರು.

Leave a Reply

Your email address will not be published. Required fields are marked *