ಹಿರಿಕ್ಯಾತನಹಳ್ಳಿ ಗ್ರಾ.ಪಂ ಎಂ.ಎ.ಬಿಇಡಿ ಪದವೀಧರೆ ಕು.ರುಕ್ಮಿಣಿ ಅಧ್ಯಕ್ಷೆ ಉಪಾಧ್ಯಕ್ಷರಾಗಿ ಕಲಾವತಿ ಅವಿರೋಧ ಆಯ್ಕೆ

ನಂದಿನಿ ಮೈಸೂರು

*ಹಿರಿಕ್ಯಾತನಹಳ್ಳಿ ಗ್ರಾಮ ಪಂಚಾಯಿತಿಗೆ ಎಂ.ಎ.ಬಿಇಡಿ ಪದವೀಧರೆ ಕುಮಾರಿ ರುಕ್ಮಿಣಿ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಕಲಾವತಿ ಅವಿರೋಧ ಆಯ್ಕೆ.*

ದಿನಾಂಕ 05-08-2023 ರಂದು ನಡೆದ ಹುಣಸೂರು ತಾಲ್ಲೂಕು ಹಿರೀಕ್ಯಾತನಹಳ್ಳಿ ಗ್ರಾಮ ಪಂಚಾಯತಿಗೆ ಎರಡನೇ ಅವಧಿಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳಾದ ಹಿರಿಕ್ಯಾತನಹಳ್ಳಿ ಗ್ರಾಮದ *ಎಂ.ಎ.ಬಿ,ಇಡಿ ಪದವೀಧರೆ ಕುಮಾರಿ ರುಕ್ಮಿಣಿ ಅವರು ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಶಿರೇನಹಳ್ಳಿ ಗ್ರಾಮದ ಶ್ರೀಮತಿ ಕಲಾವತಿ ಅವರು ಅವಿರೋಧವಾಗಿ ಆಯ್ಕೆಯಾದರು*
ಹಿರಿಕ್ಯಾತನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಒಟ್ಟು16 ಜನ ಸದಸ್ಯರಿದ್ದರು ಕಾಂಗ್ರೆಸ್ ಬೆಂಬಲಿತ 10 ಸದಸ್ಯರು ಮಾತ್ರ ಚುನಾವಣೆಯಲ್ಲಿ ಭಾಗವಹಿಸಿದರು,ಇನ್ನುಳಿದ ಜೆಡಿಎಸ್ ಪಕ್ಷದ 6 ಜನ ಸದಸ್ಯರು ಗೈರು ಹಾಜರಿಯಾಗಿದ್ದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆ ಆಗಿದ್ದರಿಂದ ಚುನಾವಣಾ ಅಧಿಕಾರಿಗಳಾದ ಸುರೇಶ್ ಅವರು ಎರಡು ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆ ಆಗಿರುತ್ತಾರೆ ಎಂದು ಘೋಷಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಹೆಚ್.ಪಿ ಮಂಜುನಾಥ್ ಅವರ ಸಹೋದರರಾದ *ಹೆಚ್.ಪಿ.ಅಮರನಾಥ್* ಅವರು ,*ಕಾಂಗ್ರೆಸ್ ಯುವ ಮುಖಂಡರು, ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ದೇವರಾಜ್ ಟಿ. ಕಾಟೂರು* ಅವರು ,ಕಾಂಗ್ರೆಸ್ ಮುಖಂಡರಾದ ಹಿರಿಕ್ಯಾತನಹಳ್ಳಿ ಶಿವಪ್ಪ ಅವರು, ಸುರೇಶ್ ಅವರು,ಉದಯ್ ಅವರು ಅಭಿನಂದಿಸಿದರು.

*ಚುನಾವಣೆಯಲ್ಲಿ ಮಾಜಿ ಅಧ್ಯಕ್ಷರು ಮತ್ತು ಹಾಲಿ ಸದಸ್ಯರಾದ ಶ್ರೀ ಜವರೇಗೌಡರು,ಮಾಜಿ ಉಪಾಧ್ಯಕ್ಷರು ಮತ್ತು ಹಾಲಿ ಸದಸ್ಯರಾದ ಶ್ರೀಮತಿ ವತ್ಸಲ ಹರೀಶ್ ಅವರು,ಸದಸ್ಯರುಗಳಾದ ಶ್ರೀ ಸಣ್ಣಶೆಟ್ಟಿ ಅವರು,ಶ್ರೀಮತಿ ಅಭಿಮಂಜು,ಶ್ರೀಮತಿ ಮಣಿಯಮ್ಮ,ಶ್ರೀ ವೆಂಕಟೇಗೌಡರು,ಶ್ರೀ ಬೀರೇಗೌಡರು,ಶ್ರೀಮತಿ ಕುಮಾರಿ ಸೀನಯ್ಯ ಅವರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಹರೀಶ್, ಮಾಜಿ ಸದಸ್ಯರಾದ ಶ್ರೀ ಮಹೇಶ್,ಶ್ರೀ ವಿಜಯ್,ಶ್ರೀ ಹರೀಶ್,ಶ್ರೀ ಮೊಗ್ಗಣ್ಣೇಗೌಡರು,ಶ್ರೀ ನಂಜೇಗೌಡರು,ಶ್ರೀ ಸತೀಶ್,ಶ್ರೀ ಮಹೇಶ್,ಶ್ರೀ ನಂಜನಾಯಕ,ಶ್ರೀ ಕರಿನಾಯಕ,ಶ್ರೀ ತಿಮ್ಮನಾಯಕ, ಸ್ವಾಮಿನಾಯಕ,ಸುರೇಶ್,ಶಿವ,ಕಿರಣ್,ಇನ್ನೂ ಮುಂತಾದ ಮುಖಂಡರನ್ನು ಕಾಣಬಹುದು.

Leave a Reply

Your email address will not be published. Required fields are marked *