ಹಿರಣ್ಯ’ ಮಾಸ್ ಟೀಸರ್ ಹವಾ…ಮ್ಯಾಸೀವ್ ಸ್ಟಾರ್ ರಾಜವರ್ಧನ್ ಭರ್ಜರಿ ಆಕ್ಷನ್

ನಂದಿನಿ ಮೈಸೂರು

*‘ಹಿರಣ್ಯ’ ಮಾಸ್ ಟೀಸರ್ ಹವಾ…ಮ್ಯಾಸೀವ್ ಸ್ಟಾರ್ ರಾಜವರ್ಧನ್ ಭರ್ಜರಿ ಆಕ್ಷನ್*

ಬಿಚ್ಚುಕತ್ತಿ ಸಿನಿಮಾ ಮೂಲಕ ಭರವಸೆ ಹುಟ್ಟಿಸಿರುವ ಮ್ಯಾಸೀವ್ ಸ್ಟಾರ್ ರಾಜವರ್ಧನ್ ಹಿರಣ್ಯ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಹಾಜರಲು ಸಜ್ಜಾಗಿದ್ದಾರೆ. ಇದೀಗ ಹಿರಣ್ಯ ಸಿನಿಮಾದ ಮಾಸ್ ಟೀಸರ್ ರಿಲೀಸ್ ಆಗಿದೆ. ಭರ್ಜರಿ ಆಕ್ಷನ್ ಮೂಲಕ ರಾಜವರ್ಧನ್ ಅಬ್ಬರಿಸಿದ್ದಾರೆ. ಬೆಂಗಳೂರಿನ ವಸಂತನಗರದಲ್ಲಿರುವ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಹಿರಣ್ಯ ಟೀಸರ್ ಬಿಡುಗಡೆ ಮಾಡಲಾಯಿತು. ಲಹರಿ ಸಂಸ್ಥೆಯ ವೇಲು ರಾಜವರ್ಧನ್ ಸಿನಿಮಾಗೆ ಸಾಥ್ ಕೊಟ್ಟರು. ಈ ವೇಳೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ನಿರ್ದೇಶಕ ಪ್ರವೀಣ್ ಅವ್ಯುಕ್ತ ಮಾತನಾಡಿ, ಮುಹೂರ್ತದಲ್ಲಿ ಹೇಳಿದ್ದೆ ಕೆಲಸ ಆದ್ಮೇಲೆ ನಿಮ್ಮ ಮುಂದೆ ಬರ್ತಿವೆ ಎಂದಿದ್ದೆ. ಕೆಲಸ ಆಗಿದೆ ಬಂದಿದ್ದೇವೆ. ಈ ಮೂವೀ ಎಂಜಾಯ್ ಮಾಡಲು ಮಾತೇ ಬರ್ತಿಲ್ಲ. ರಾಜವರ್ಧನ್ ಅವರು ರಾಣಾ ಡೆಡ್ಲಿ ಕ್ಯಾರೆಕ್ಟರ್ ಮಾಡಿದ್ದಾರೆ. ಟೆಸ್ಟ್ ಲುಕ್ ಮಾಡಿದೆವು. ಇಷ್ಟವಾಯ್ತು. ಅದ್ಭುತವಾಗಿ ಅವರು ಫರ್ಪಾಮ್ ಮಾಡಿದ್ದಾರೆ. ಇಡೀ ತಂಡದ ಬೆಂಬಲದಿಂದ ಸಿನಿಮಾ ತಯಾರಾಗಿದೆ ಎಂದು ತಿಳಿಸಿದರು.

ನಟ ರಾಜವರ್ಧನ್ ಮಾತನಾಡಿ, ಹಿರಣ್ಯ ಎರಡು ವರ್ಷದ ಹಿಂದೆ ಪ್ರವೀಣ್ ಬಂದು ಕಥೆ ಹೇಳಿದ್ದರು. ಬಿಚ್ಚುಕತ್ತಿಯಂತಹ ದೊಡ್ಡ ಸಿನಿಮಾ ಮಾಡಿದ್ದೆ. ಆ ಸಮಯದಲ್ಲಿ ಕಥೆ ಆಯ್ಕೆ ಮಾಡಿಕೊಳ್ಳುವುದು ದೊಡ್ಡ ಚಾಲೆಂಜ್. ಪ್ರವೀಣ್ ಕಥೆ ಹೇಳಿದಾಗ ಒಂದು ಪಾಯಿಂಟ್ ಇಷ್ಟು ವರ್ಷವಾಯ್ತು. ಕಿರುಚಿತ್ರ ಮಾಡಿ ನೀವು ಈ ಮಟ್ಟಕ್ಕೆ ಬಂದಿದ್ದೀರಾ ಅಂದರೆ ಅದಕ್ಕೆ ಕಾರಣ ನಿರ್ಮಾಪಕರು. ಕಥೆಯನ್ನು ನೀವು ನಂಬಿದ್ದೀರಾ. ನಿರ್ಮಾಪಕರು ನಂಬಿದ್ದೀರೆ. ಒಂದೊಳ್ಳೆ ಔಟ್ ಫುಟ್ ಬಂದಿದೆ. ಆದಷ್ಟು ಬೇಗ ಸಿನಿಮಾ ತೆರೆಗೆ ಬರಲಿದೆ ಎಂದರು.

ನಿರ್ಮಾಪಕ ವಿಜಯ್ ಗೌಡ ಮಾತನಾಡಿ, ಡೈರೆಕ್ಟರ್ ಪ್ರವೀಣ್ ನಮ್ಮನ್ನು ಅಪ್ರೋಚ್ ಆದರು. ಆ ನಂತರ ಮ್ಯಾಸೀವ್ ಸ್ಟಾರ್ ರಾಜವರ್ಧನ್ ಅವರನ್ನು ಅಪೋರ್ಚ್ ಮಾಡಿದೆವು. ಆ ನಂತರ ತಂಡ ಕಟ್ಟಿಕೊಂಡು ಸಿನಿಮಾ ಶುರು ಮಾಡಿದೆವು. ರಾಜವರ್ಧನ್ ಹಾಗೂ ಇಡೀ ತಂಡ ಬೆಂಬಲದಿಂದ ಸಿನಿಮಾ ಇಲ್ಲಿವರೆಗೆ ಬಂದಿದೆ ಎಂದು ತಿಳಿಸಿದರು.

ಹಲವು ಶಾರ್ಟ್‌ ಮೂವಿಗಳನ್ನು ನಿರ್ದೇಶನ ಮಾಡಿದ ಅನುಭವ ಇರುವ ಪ್ರವೀಣ್‌ ಅವ್ರ್ಯುಕ್ತ್ ಹಿರಣ್ಯ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ. ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಸ್ಪೆಷಲ್ ರೋಲ್ ನಲ್ಲಿ ನಟಿಸಿದ್ದು, ಉಳಿದಂತೆ ಹುಲಿ ಕಾರ್ತಿಕ್‌, ಅರವಿಂದ ರಾವ್‌, ದಿಲೀಪ್‌ ಶೆಟ್ಟಿ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಯುವನಟಿ ರಿಹಾನಾ ರಾಜವರ್ಧನ್ ಗೆ ಜೋಡಿಯಾಗಿ ನಟಿಸಿದ್ದಾರೆ.

ವೇದಾಸ್‌ ಇನ್ಫಿನಿಟಿ ಪಿಕ್ಚರ್ ಬ್ಯಾನರ್‌ನಲ್ಲಿ ವಿಘ್ನೇಶ್ವರ ಯು. ಹಾಗೂ ವಿಜಯ್‌ ಕುಮಾರ್‌ ಬಿ. ವಿ ಜಂಟಿಯಾಗಿ ಬಂಡವಾಳ ಹೂಡಿ ನಿರ್ಮಿಸುತ್ತಿರುವ ಹಿರಣ್ಯ ಸಿನಿಮಾಕ್ಕೆ ಯೋಗೇಶ್ವರನ್‌ ಆರ್‌. ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿದೆ. ಚಿತ್ರೀಕರಣ ಮುಗಿಸಿ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ನಿರತವಾಗಿರುವ ಹಿರಣ್ಯ ಸಿನಿಮಾವನ್ನು ಆದಷ್ಟು ಬೇಗೆ ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.

Leave a Reply

Your email address will not be published. Required fields are marked *