ನಂದಿನಿ ಮೈಸೂರು
ಫೆ. ೨೫ ಮತ್ತು ೨೬ ರಂದು ನಗರದ ರ‍್ಯಾಡಿಸನ್ ಬ್ಲೂ ಹೊಟೇಲ್‌ನಲ್ಲಿ ಹಾಯ್ ಲೈಫ್ ಬ್ರೈ ಡ್ಸ್ ಎಂಬ ಆಭರಣ, ಉಡುಗೆ, ತೊಡುಗೆ ಮಾರಾಟ ಮತ್ತು ಪ್ರದರ್ಶನ ಆಯೋಜಿಸಲಾಗಿದೆ ಎಂದು ಸಂಯೋಜಕರಾದ ಶೋಮಿಕಾ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿವಾಹ ಸಂದರ್ಭದ ವೇಳೆ ವಧುವಿಗೆ ಉಡುಗೆ, ತೊಡುಗೆ, ಆಭರಣಗಳಿಗಾಗಿ ವಿವಿಧ ಮಳಿಗೆಗಳಿಗೆ ಅಲೆಯಬೇಕಾಗುವುದು ಸಾಮಾನ್ಯ ಸಂಗತಿ. ಆದರೆ ಈ ಪ್ರದರ್ಶನದಲ್ಲಿ ದೇಶದ ವಿವಿಧ ಭಾಗಗಳಿಂದ ಮಾರಾಟಗಾರರು ಆಗಮಿಸಿ ಮಳಿಗೆ ತೆರಯಲಿದ್ದಾರೆ.
ಇಲ್ಲಿ ನೂರು ರೂ., ಬೆಲೆಯಿಂದ ಲಕ್ಷ ರೂ.,ಗಳವರೆಗಿನ ವಸ್ತುಗಳೂ ದೊರೆಯಲಿವೆ. ಇನ್ನಿತರ ಸಾಮಾನ್ಯ ಸಂದರ್ಭಗಳಿಗೆ ಅಗತ್ಯವಾದ ಆಭರಣ, ಉಡುಗೆ, ತೊಡುಗೆಗಳೂ ದೊರೆಯಲಿವೆ ಎಂದು ಮಾಹಿತಿ ನೀಡಿದರು.
ಮತ್ತೋರ್ವ ಉಸ್ತುವಾರಿ ಶ್ರೀಕಾಂತ್ ಸಹಾ ಹಾಜರಿದ್ದರು.