ಕ್ಯಾನ್ಸರ್ ರೋಗಿಗಳಿಗಾಗಿ “ಕೇಶದಾನ ಅಭಿಯಾನ”

ನಂದಿನಿ ಮೈಸೂರು

ಮೈಸೂರು ಅಮಿಟಿ ಲೇಡೀಸ್ ಸರ್ಕಲ್ ೧೦೮ ರ ವತಿಯಿಂದ
ಕ್ಯಾನ್ಸರ್ ಚಿಕಿತ್ಸೆ ಪಡೆಯುವ ವೇಳೆ ಕೂದಲು ಕಳೆದುಕೊಂಡವರಿಗೆ ಕೇಶದಾನ ಅಭಿಯಾನ ಆರಂಭಿಸಿದ್ದೇವೆ ಎಂದು
ಅಧ್ಯಕ್ಷರಾದ ಅಪರ್ಣ ರಂಗ ತಿಳಿಸಿದರು.

ಭರವಸೆಗಾಗಿ ಕೇಶ ಎಂಬ ಈ ಕೇಶದಾನ ಅಭಿಯಾನವನ್ನು ಕಿಮಾಯ ಬ್ಯೂಟಿ ಸ್ಟುಡಿಯೋ ಸಹಯೋಗದಲ್ಲಿ ಮಾ. ೧೫ ರವರೆಗೆ ಆಯೋಜಿಸಲಾಗಿದೆ. ೧೨ ಇಂಚುಗಳಷ್ಟು ಕೂದಲನ್ನು ದಾನಿಗಳಿಂದ ಸಂಗ್ರಹಿಸಲಾಗುವುದು ಮತ್ತು ಇದನ್ನು ಕ್ಯಾನ್ಸರ್ ರೋಗಿಗಳಿಗಾಗಿ ಎಗ್‌ಗಳನ್ನು ತಯಾರಿಸುವ ಸಹಾಯಾರ್ಥ ಸಂಸ್ಥೆಗೆ ನೀಡಲಾಗುವುದು. ಅವರು ಅಗತ್ಯವಿರುವ ಕ್ಯಾನ್ಸರ್ ರೋಗಿಗಳಿಗೆ ವಿಗ್‌ಗಳನ್ನು ವಿತರಿಸಲಿದ್ದಾರೆ.

ಇದೊಂದು ಸಮಾಜಮುಖಿ ಕಾರ್ಯವಾಗಿದ್ದು, ಕೂದಲು ಕತ್ತರಿಸಿದ ವೇಳೆ ಬೇಸಿಕ್ ಹೇರ್ ಕಟಿಂಗ್ ಮಾಡಲಾಗುವುದು. ಇದು ಸಹಾ ಉಚಿತವಾಗಿರುತ್ತದೆ. ಈ ರೀತಿ ಕೂದಲು ದಾನ ನೀಡಿದವರಿಗೆ ಮುಂದಿನ ದಿನಗಳಲ್ಲಿ ಪ್ರಮಾಣಪತ್ರ ನೀಡುವ ಉದ್ದೇಶವಿದೆ ಎಂದು ತಿಳಿಸಿದರು.

ಈ ಹಿಂದೆ 5 ವರ್ಷದ ಮಗು ಕೂಡ ಕೇಶದಾನ ಮಾಡಿದೆ. ಕ್ಯಾನ್ಸರ್ ಪೀಡಿತರಿಗೆ ಅಗತ್ಯವಾದ ಕೇಶದಾನ ಮಾಡುವವರಿಗೆ ಯಾವುದೇ ವಯಸ್ಸಿನ ವಯೋಮಿತಿ ಇರುವುದಿಲ್ಲ ಎಂದರು.

ಸುದ್ದಿಗೋಷ್ಟಿಯಲ್ಲಿ
ಸಂಸ್ಥೆಯ ಸಂಪದಾ ಜೈನ್, ಸಹನಾ, ಅನುಷಾ ಸೂರಜ್, ಪ್ರಿಯಾಂಕಾ ಹಾಜರಿದ್ದರು.

ಹೇರ್ ಫಾರ್ ಹೋಪ್ 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :kimaya beauty studio ,8th main ,5th cross road ,3rd block ,jayalakshmipuram,Mysore-06

phone number:0821-4266616

7022554243

Leave a Reply

Your email address will not be published. Required fields are marked *