ಖಾತೆ ದುರ್ಬಳಕೆ ಪತಿ, ಮಾವನ ವಿರುದ್ದ ನಟಿ ಎಫ್ ಐ ಆರ್

ಮೈಸೂರು:24 ಮೇ 2022

ನಂದಿನಿ ಮೈಸೂರು

ನನ್ನ ಅನುಮತಿ ಪಡೆಯದೆ ನನ್ನ ಖಾತೆಯನ್ನ ದುರ್ಬಳಕೆ ಮಾಡಿಕೊಂಡು 13 ಲಕ್ಷ ಗೋಲ್ಡ್ ಲೋನ್ ಪಡೆದಿರುವ ಪತಿ ಮತ್ತು ಮಾವನ ವಿರುದ್ದ ನಟಿ ಚೈತ್ರ ಹಳ್ಳಿಕೇರಿ ದೂರು‌ ನೀಡಿದ್ದಾರೆ.

ಬ್ಯಾಂಕ್ ಖಾತೆಯನ್ನ ದುರ್ಬಳಕೆ ಹಾಗೂ ಫೋರ್ಜರಿ ಸಹಿ ಮಾಡಿ ಗೋಲ್ಡ್ ಲೋನ್ ಪಡೆದಿರುವುದಾಗಿ ಚಿತ್ರನಟಿ ತಮ್ಮ ಪತಿ ಹಾಗೂ ಮಾವನ ವಿರುದ್ದ ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚಿತ್ರನಟಿ ಚೈತ್ರಾಹಳ್ಳಿಕೇರಿ ತಮ್ಮ 
ಪತಿ ಬಾಲಾಜಿ ಪೋತರಾಜ್ ಹಾಗೂ ಮಾವ ಪೋತರಾಜ್ ವಿರುದ್ದ ವಂಚನೆ ಆರೋಪ ಮಾಡಿ ದೂರು ದಾಖಲಿಸಿದ್ದಾರೆ.ಜಯಲಕ್ಷ್ಮಿಪುರಂ ನಲ್ಲಿರುವ ಸೌತ್ ಇಂಡಿಯನ್ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದು ಇದರಲ್ಲಿ ಬ್ಯಾಂಕ್ ಮ್ಯಾನೇಜರ್ ಕೂಡಾ ಶಾಮೀಲಾಗಿದ್ದಾರೆಂದು ಆರೋಪಿಸಿದ್ದಾರೆ.
ನನಗೆ ವಂಚನೆ ಮಾಡಿ ಜೀವಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪತಿ,ಮಾವ ಹಾಗೂ ಮ್ಯಾನೇಜರ್ ವಿರುದ್ದ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.

Leave a Reply

Your email address will not be published. Required fields are marked *