ಮೈಸೂರು :9 ಫೆಬ್ರವರಿ 2022
ನಂದಿನಿ ಮೈಸೂರು
ಐಟಿ ಯುಗದಲ್ಲಿ ಫಿಸಿಕಲ್ ಟ್ರೈನಿಂಗ್ ತುಂಬ ಕಡಿಮೆ ಆಗುತ್ತಿದೆ.ಮೆದುಳಿಗೆ ಹೇಗೆ ವ್ಯಾಯಾಮ ಕೊಡುತ್ತೇವೋ ಹಾಗೇಯೇ ದೇಹಕ್ಕೂ ವ್ಯಾಯಾಮ ಅವಶ್ಯಕತೆ ಇದೆ ಎಂದು ಸಂಗೀತ ನಿರ್ದೇಶಕ ಗುರುಕಿರಣ್ ತಿಳಿಸಿದರು.
ಮೈಸೂರಿನ ವಿಜಯನಗರದ ಕೆಸಿ ಜನರಲ್ ತಿಮ್ಮಯ್ಯ ರಸ್ತೆಯಲ್ಲಿ ಗೌತಮ್ ,ಪ್ರಮೋದ್ ಮಾಲೀಕತ್ವದಲ್ಲಿ ನೂತನವಾಗಿ ಆರಂಭವಾಗಿರುವ ಹೆಲ್ತೋನಿಫೈ ಫಿಟ್ನೆಸ್ ಕ್ಲಬ್ ಎಂಎಲ್ ಸಿ ಹೆಚ್ ವಿಶ್ವನಾಥ್ , ಸ್ಯಾಂಡಲ್ ವುಡ್ ನ ಸಂಗೀತ ನಿರ್ದೇಶಕ ಗುರುಕಿರಣ್ , ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ, ಮಾಜಿ ಶಾಸಕ ವಾಸು ಅವರು ಉದ್ಘಾಟನೆಗೊಳಿಸಿ ಅವರು ಮಾತನಾಡಿದರು.
ಮೈಸೂರು ಅಂದರೇ ನೆನಪಾಗೋದು ಮೈಸೂರು ಅರಮನೆ,ವೈಭವ,ಇದರ ಜೊತೆ ನಶಿಸಿ ಹೋಗುತ್ತಿರುವ ವ್ಯಾಯಾಮ ಶಾಲೆ.ರಾಜರ ಕಾಲದಲ್ಲಿ ಜೆಟ್ಟಿಗಳು ಇದ್ದ ಊರು ಮೈಸೂರು.ವ್ಯಾಯಾಮ ಶಾಲೆಗಳು ಈಗ ಕಡಿಮೆ ಆಗಿದೆ. ಮಕ್ಕಳು ಓದು,ಅಂಕ ಇದನ್ನ ಬಿಟ್ಟು ಜಗತ್ತಿನಲ್ಲಿ ಬೇರೆನೂ ಇಲ್ಲ ಅಂದುಕೊಂಡಿದ್ದಾರೆ.ಆರೋಗ್ಯದ ಬಗ್ಗೆ ಎಲ್ಲರೂ ಜಾಗೃತರಾಗಿರಬೇಕು.ಪ್ರಮೋದ್ ಮತ್ತು ಗೌತಮ್ ಒಳ್ಳೆಯ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ವಿಶಾಲವಾದ ಸ್ಥಳವನ್ನು ಒಳಗೊಂಡ ಮತ್ತು ಈ ರೀತಿಯ ಫಿಟ್ನೆಸ್ ಕ್ಲಬ್ ಮೈಸೂರಿನಲ್ಲಿರೋದು ಇದೆ ಮೊದಲನೆಯದು ಅನಿಸುತ್ತದೆ ಮೈಸೂರಿಗರು ತಮ್ಮ ಆರೋಗ್ಯದ ದೃಷ್ಟಿಯಿಂದ ಸದುಪಯೋಗಪಡಿಸಿಕೊಳ್ಳಿ ಎಂದರು.
ತದನಂತರ ಎಲ್ಲಾ ಗಣ್ಯರು ಪ್ರತಿಯೊಬ್ಬರೂ ಈ ಫಿಟ್ನೆಸ್ ಕ್ಲಬ್ ನ ಪ್ರಯೋಜನ ಪಡೆಯಿರಿ ಎಂದು ಕ್ಲಬ್ ಮಾಲೀಕರಿಗೆ ಶುಭ ಆರೈಸಿದರು.