ಸರಗೂರು:18 ಮಾರ್ಚ್ 2022
ಉನ್ನತ ಮಟ್ಟದ ಚಿಕಿತ್ಸೆ ನೀಡುವುದೇ ನಮ್ಮ ಸಂಸ್ಥೆಯ ಗುರಿ ಎಂದು ವಿವೇಕಾನಂದ ಸ್ಮಾರಕ ಆಸ್ಪತ್ರೆಯ ಮುಖ್ಯಾಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಜಿ.ಎಸ್ ಅವರು ತಿಳಿಸಿದರು.
ಇಂದು ಹೆಚ್.ಡಿ.ಬಿ ಫೈನಾನ್ಸ್ ವತಿಯಿಂದ ವಿವೇಕಾನಂದ ಸ್ಮಾರಕ ಆಸ್ಪತ್ರೆಗೆ ನೀಡಿದ ಆರೋಗ್ಯ ತಪಾಸಣಾ ಯಂತ್ರೋಪಕರಣಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಆಸ್ಪತ್ರೆಯ ನಿರಂತರ ಬೆಳವಣಿಗೆಯಿಂದ ಮುಂದಿನ ದಿನಗಳಲ್ಲಿಯೂ ಸಹ ಗ್ರಾಮೀಣಾ ಭಾಗದ ಜನರಿಗೆ ಉನ್ನತ ಮಟ್ಟದ ಸೇವೆಯನ್ನು ನೀಡಲಾಗುವುದು ಎಂದರು.
ಹಾಗೆಯೇ ಗ್ರಾಮೀಣಾಭಿವೃದ್ಧಿಯಲ್ಲಿ ಉಂಟಾಗುವ ಸಮಸ್ಯೆಗಳನ್ನು ತಟೆಗಟ್ಟಲು ಐ.ಸಿ.ಓ ವನ್ನು ಸಹ ಶುರು ಮಾಡಲಾಗುವುದು. ಹಾಗೂ ಸರ್ಜಿಕಲ್ ಸ್ಪೇಷಲಿಟಿ ಒಳಗೊಂಡAತೆ ಕಣ್ಣಿನ ಸಮಸ್ಯೆ ಮತ್ತು ದಂತದ ಸಮಸ್ಯೆಗಳಿಗೆ ವಿವೇಕಾನಂದ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಒದಗಿಸಲಾಗುವುದು ಎಂದು ತಿಳಿಸಿದರು.
ಗ್ರಾಮೀಣ ವ್ಯವಸ್ಥೆಗೆ ಬೇಕಾದ ವ್ಯಕ್ತಿಗಳನ್ನು ತಯಾರಿಸಲು ಪೂರ್ಣ ಪ್ರಮಾಣದ ನರ್ಸಿಂಗ್ ಕಾಲೇಜ್, ಮತ್ತು ಟಿ.ಎನ್.ಬಿ ಕೋರ್ಸ್ಗಳನ್ನು ತೆರೆಯಲಾಗುವುದು ಹಾಗೂ ಹೆಚ್.ಡಿ.ಬಿ ಫೈನಾನ್ಸ್ ಕಂಪನಿಯು ಆಸ್ಪತ್ರೆಗೆ ಒತ್ತು ನೀಡಿದಂತೆ, ಗ್ರಾಮೀಣಾ ಭಾಗದಲ್ಲಿ ಶಿಕ್ಷಣವನ್ನು ಅಭಿವೃದ್ಧಿಪಡಿಸಲು ಹೊಸ ಹೊಸ ಯೋಜನೆಗಳನ್ನು ನಿರೂಪಿಸಬೇಕು ಎಂದು ಮನವಿ ಮಾಡಿದರು.
ಬಳಿಕ ವಿವೇಕಾನಂದ ಆಸ್ಪತ್ರೆಯ ನಿರ್ದೇಶಕರಾದ ಡಾ. ಡೆನ್ನಿಸ್ ಡಿ. ಚೌಹಣ್ ಅವರು ಮಾತನಾಡಿ ವಿವೇಕಾನಂದ ಆಸ್ಪತ್ರೆಗೆ ಆರೋಗ್ಯ ತಪಾಸಣಾ ಯಂತ್ರೋಪಕರಣಗಳ ಅವಶ್ಯಕತೆ ಆಗತ್ಯವಿರುವ ಸಂದರ್ಭದಲ್ಲಿ, ಹೆಚ್.ಡಿ.ಬಿ ಫೈನಾನ್ಸ್ ಯಂತ್ರೋಪಕರಣಗಳನ್ನು ನೀಡಿದಕ್ಕೆ ಅವರು ಶುಭಕೋರಿದರು.
ಸಮುದಾಯದ ಅಭಿವೃದ್ಧಿಗೆ ನಾವೆಲ್ಲಾರೂ ಶ್ರಮಿಸುತ್ತಿದ್ದೇವೆ ಆದ್ದರಿಂದ ತಾಲೊಕಿನ ಜನತೆಯ ಸಹಕರ ನಮ್ಮ ಸಂಸ್ಥೆಗೆ ಬಹಳ ಅಗತ್ಯ ಎಂದರು.
ಹೆಚ್.ಡಿ.ಬಿ, ಪೈನಾಸ್ಸ್ ವತಿಯಿಂದ ವಿವೇಕಾನಂದ ಸ್ಮಾರಕ ಆಸ್ಪತ್ರೆಗೆ ಲ್ಯಾಪ್ರೋಸ್ಕೋಪಿಕ್, ದಂತ ಚಿಕಿತ್ಸೆ ಮತ್ತು ಕಣ್ಣೀನ ಆರೋಗ್ಯ ತಪಾಸಣಾ ಯಂತ್ರೋಪಕರಣಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಹೆಚ್.ಡಿ.ಬಿ, ಪೈನಾಸ್ಸ್ ಜೊನಲ್ ಮ್ಯಾನೇಜರ್ ಶ್ರೀ ಬಿನೋದ್ ಮೆನನ್, ಕ್ಲಸ್ಟರ್ ಮ್ಯಾನೇಜರ್ ಆದ ಶ್ರೀ ಮಹೇಶ್, ಬ್ರಾಂಚ್ ಮ್ಯಾನೇಜರ್ ಆದ ಶ್ರೀ ಹರೀಶ್ ಸಮುದಾಯದ ಸಹಭಾಗಿತ್ವದಲ್ಲಿ ಸರಗೂರಿನ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬ್ರಹ್ಮದೇವಯ್ಯ, ವರ್ತಕರ ಮಂಡಳಿಯ ಅಧ್ಯಕ್ಷರಾದ ಶ್ರೀ ಶ್ರೀನಿವಾಸ್ ಎಸ್. ಎಂ, ವಿವೇಕಾನಂದ ಸ್ಮಾರಕ ಆಸ್ಪತ್ರೆಯ ಸಿಬ್ಬಂದಿ ಹಾಗೂ ಇನ್ನಿತರರು ಇದ್ದರು.
ಸಂಜಯ್ ಕೆಬೆಳತೂರು ಜೊತೆ ನಂದಿನಿ ಭಾರತ್ ನ್ಯೂಸ್ ಟಿವಿ ಮೈಸೂರು