ಶ್ರೀ ಚಿಕ್ಕದೇವಮ್ಮನ ಬೆಟ್ಟದಲ್ಲಿ ಚಾರಣ ಮತ್ತು ಸ್ವಚ್ಛತೆ ಕಾರ್ಯಕ್ರಮ

ಸರಗೂರು:19 ಮಾರ್ಚ್ 2022

ಇಂದು ಬೆಳಿಗ್ಗೆ ಶ್ರೀ ಚಿಕ್ಕದೇವಮ್ಮನ ಬೆಟ್ಟದಲ್ಲಿ ಚಾರಣ ಮತ್ತು ಸ್ವಚ್ಛತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಹುಣಸೂರಿನ ಶ್ರೀ ಡಿ ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ಸುಮಾರು 60 ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಿಂದ ಶ್ರಮದಾನ ಮಾಡಲಾಯಿತು.

ಶ್ರೀ ಚಿಕ್ಕದೇವಮ್ಮನ ದೇವಸ್ಥಾನ ಆವರಣ ಒಳಗೊಂಡಂತೆ ಬೆಟ್ಟದ ಸುತ್ತ ಮುತ್ತಲೂ ಕೂಡ ಸ್ವಚ್ಛತೆ ಮಾಡಲಾಯಿತು.

ದೇವಸ್ಥಾನದ ಆವರಣವನ್ನು ನೀರಿನಿಂದ ತೊಳೆದು, ದೇವಸ್ಥಾನದಲ್ಲಿ ಬೆಳದಿರುವ ಗಿಡ ಗಂಟಿಗಳನ್ನು ಸ್ವಚ್ಛಗೂಳಿಸಿದರು.

ದೇವಸ್ಥಾನದ ಆವರಣದಲ್ಲಿ ನೇರೆವೇರಿದ ಭಕ್ತರಿಗೆ ಹಾಗೂ ವ್ಯಾಪಾರಗಾರರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಯಿತು.

ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಾದ ಡಾ. ಕಿರಣ್ ಕುಮಾರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದರು.ಪ್ಲಾಸ್ಟಿಕ್ ಮುಕ್ತ ವಲಯ ಮಾಡಬೇಕೆನ್ನುವ ಉದ್ದೇಶದಿಂದ ಬೆಟ್ಟದ ಸುತ್ತಲೂ ಪ್ಲಾಸ್ಟಿಕ್ ಗಳನ್ನು ಸ್ವಚ್ಛತೆ ಮಾಡಲಾಯಿತು.ತಾಲೂಕಿನ ಪ್ರೇಕ್ಷಣೀಯ ಸ್ಥಳವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆದ್ದರಿಂದ ದೇವಸ್ಥಾನದಲ್ಲಿ ಸ್ವಚ್ಛತೆ ಕಾಪಾಡುವ ಜವಾಬ್ದಾರಿ ಮೂದಲು ಭಕ್ತರಿಗೆ ಇರುತ್ತದೆ.ದೇವಾಲಯದ ಆವರಣದಲ್ಲಿ ಪ್ಲಾಸ್ಟಿಕ್ ಮುಕ್ತ ವಲಯ ಮಾಡಲು ತಾಲೂಕು ಆಡಳಿತ ಹಾಗೂ ದೇವಸ್ಥಾನ ಅಭಿವೃದ್ಧಿ ಮಂಡಳಿಗೆ ಮನವಿ ಮಾಡಿದರು.

ತಾಲೂಕಿನ ಸುತ್ತ ಮುತ್ತಲಿನ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳೊಳಗೊಂಡಂತೆ ಎಲ್ಲಾ ವಿದ್ಯಾರ್ಥಿಗಳು ಬೆಟ್ಟಕ್ಕೆ ಆಗಮಿಸಿ ಶ್ರಮದಾನ ಮಾಡಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ವೇಳೆ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಾದ ಡಾ.ಕವಿತಾ, ಪ್ರಾಂಶುಪಾಲರಾದ ಡಾ. ವೆಂಕಟೇಶಯ್ಯ,
ಕಾಲೇಜಿನ ಅಭಿವೃದ್ಧಿ ಸಮಿತಿಯ ಸದಸ್ಯರಾದ ಶಿವಾನಂದ, ಮಧು, ಚೇತನ್, ದೇವಸ್ಥಾನದ ಪ್ರಧಾನ ಅರ್ಚಕ ಮಹದೇವಸ್ವಾಮಿ ಹಾಗೂ ಇನ್ನಿತರರು ಇದ್ದರು.

ವರದಿ‌ ಸಂಜಯ್.ಕೆ.ಬೆಳತೂರು
ಸರಗೂರು ವರದಿಗಾರರು

Leave a Reply

Your email address will not be published. Required fields are marked *