ಡಿ.30 ರಂದು ಹನುಮ ಜಯಂತಿ ಹಿನ್ನಲೆ ಹನುಮನ ಭಾವಚಿತ್ರವಿರುವ ಟೀ ಶರ್ಟ್ ಬಿಡುಗಡೆಗೊಳಿಸಿದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ

ನಂದಿನಿ ಮೈಸೂರು

ನಾಳೆ ಹನುಮ ಜಯಂತಿ ಕಾರ್ಯಕ್ರಮ ಹಿನ್ನಲೆ ಹನುಮನ ಭಾವಚಿತ್ರವಿರುವ ಟೀ ಶರ್ಟ್ ಬಿಡುಗಡೆ ಮಾಡಲಾಯಿತು.

ರಾಷ್ಟ್ರಕವಿ ಕುವೆಂಪುರವರ ಜಯಂತಿಯ ಪ್ರಯುಕ್ತ ಕುವೆಂಪುರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಮೈಸೂರಿನ ಆದಿಚುಂಚನಗಿರಿ ಶಾಖಾಮಠದ ಪರಮಪೂಜ್ಯ ಶ್ರೀ ಸೋಮೇಶ್ವರನಾಥ ಸ್ವಾಮೀಜಿರವರು ಹನುಮನ ಭಾವಚಿತ್ರವಿರುವ ಟೀ ಶರ್ಟ್ ಬಿಡುಗಡೆ ಮಾಡಿದರು.

ಇದೇ ಸಂದರ್ಭದಲ್ಲಿ ಮೈಸೂರು ಕೊಡಗು ಲೋಕಸಭಾ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ಡಾ.ಸ್ರುಶ್ರೂತ್ ಗೌಡ ಮಾತನಾಡಿ ಡಿ.30 ರಂದು ಹನುಮ‌ ಜಯಂತಿ ಹಿನ್ನಲೆ ಮೈಸೂರಿನ ಅರಮನೆ ಮುಂಭಾಗವಿರುವ ಕೋಟೆ ಅಂಜನೇಯಸ್ವಾಮಿ ದೇವಾಲಯದ ಮುಂಭಾಗದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ಸುಮಾರು 2 ಸಾವಿರ ಜನರು ಬರುವ ನಿರೀಕ್ಷೆ ಇದೆ.ನಾನು ನನ್ನ ವೈಯಕ್ತಿಕವಾಗಿ ಹನುಮ ಭಾವಚಿತ್ರವಿರುವ ಟೀಶರ್ಟ್ ವಿತರಿಸುತ್ತಿದ್ದೇನೆ. ಇದು ನನ್ನ ವೈಯಕ್ತಿಕ ಖುಷಿಗಾಗಿ ಟೀಶರ್ಟ್ ವಿತರಿಸಲು ಮುಂದಾಗಿದ್ದೇನೆ ಹೊರೆತು ಇದರಲ್ಲಿ ಯಾವುದೇ ರಾಜಕೀಯ ಇರುವುದಿಲ್ಲ ಎಂದರು.

Leave a Reply

Your email address will not be published. Required fields are marked *