ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಪ್ರಬಲ ಆಕಾಂಕ್ಷಿ ಗುರುಪಾದ ಸ್ವಾಮಿ

 

ನಂದಿನಿ ಮೈಸೂರು

ಮೈಸೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸಿಗರ ಪೈಪೋಟಿ ಹೆಚ್ಚಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್‌ ಭಾರೀ ಬಹುಮತ ಪಡೆದು ಸರ್ಕಾರ ರಚಿಸಿದ ನಂತರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ಪಡೆಯಲು ಕಾಂಗ್ರೆಸ್‌ನಲ್ಲಿ ಉತ್ಸಾಹ ದುಪ್ಪಟ್ಟಾಗಿದ್ದು, ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ೧೪ ಆಕಾಂಕ್ಷಿಗಳ ಹೆಸರು ಈಗಾಗಲೇ ಕೇಳಿ ಬರುತ್ತಿದೆ.
ವಿಶೇಷವಾಗಿ ಹಳೇ ಮೈಸೂರು ಭಾಗ ಕಾಂಗ್ರೆಸ್‌ ಭದ್ರಕೋಟೆ ಎಂದೇ ಗುರುತಿಸಲ್ಪಟ್ಟಿದೆ. ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಪಕ್ಷದ ಹಿರಿಯ ಮುಖಂಡ ಗುರುಪಾದಸ್ವಾಮಿ ಟಿಕೇಟ್ ಆಕಾಂಕ್ಷಿಗಳಲ್ಲಿ ಪ್ರಬಲರಾಗಿದ್ದಾರೆ.

ಈ ಸಾಲಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಭ್ಯಾರ್ಥಿಯನ್ನು ಯಾವ ಅರ್ಹತೆ, ಆಧಾರದ ಮೇಲೆ ಆಯ್ಕೆ ಮಾಡುತ್ತದೆಂಬುದು ಇನ್ನೂ ತಿಳಿದು ಬಂದಿಲ್ಲ. ಆದರೂ ಆಯಾ ಕ್ಷೇತ್ರಗಳ ಆಕಾಂಕ್ಷಿಗಳು ಜಾತಿ ಲೆಕ್ಕಾಚಾರದಲ್ಲಿ ತೊಡಗಿದ್ದು ಒಕ್ಕಲಿಗರು, ಲಿಂಗಾಯಿತ ಸಮುದಾಯದವರು ತಮ್ಮ ಕ್ಷೇತ್ರಗಳಲ್ಲಿ ಇರುವ ಸಮುದಾಯಗಳ ಓಟುಗಳ ಲೆಕ್ಕಾಚಾರದ ಆಧಾರದ ಮೇಲೆ ಹಾಗೂ ಪಕ್ಷ ಸಂಘಟಣೆಯಲ್ಲಿ ತಾವು ತೊಡಗಿಸಿಕೊಂಡಿರುವ ಹಾಗೂ ದುಡಿದಿರುವ ಹಿನ್ನೆಲೆ ಹಾಗೂ ಹಿರಿತನದ ಆಧಾರದ ಮೇಲೆ ಟಿಕೆಟ್ ಕೇಳಲು ಮುಂದಾಗಿದ್ದರಲ್ಲದೆ, ತಮ್ಮನ್ನು ಅಭ್ಯರ್ಥಿ ಮಾಡುವುದರಿಂದ ಪಕ್ಕದ ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಿಗೆ ಯಾವ ರೀತಿ ಅನುಕೂಲವಾಗುತ್ತದೆ ಎಂಬುದರ ಆಧಾರದ ಮೇಲೆ ಅಭ್ಯರ್ಥಿಯಾಗಲು ಮುಖಂಡರುಗಳ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ•

ಮೈಸೂರು-ಕೊಡಗು ಕ್ಷೇತ್ರದಲ್ಲಿ ಈ ಬಾರೀ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಲ್ಲಿ ವೀರಶೈವ ಲಿಂಗಾಯಿತ ಸಮುದಾಯದವರೇ ಹೆಚ್ಚಾಗಿದ್ದಾರೆ. ಇವರುಗಳ ಪೈಕಿ ಎಲ್ಲಾ ಜನಾಂಗದ ವಿಶ್ವಾಸ ಗಳಿಸಿರುವ ಹಿರಿಯ ಮುಖಂಡ ಗುರುಪಾದಸ್ವಾಮಿ ಕೂಡ ಒಬ್ಬರು. ಸುಮಾರು ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು ಪಕ್ಷದ ವಹಿಸಿದ್ದ ಅನೇಕ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ.

ವಿದ್ಯಾರ್ಥಿ ದಿಸೆಯಿಂದಲೂ ನಾಯಕತ್ವ:
ಮೂಲತಃ ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದವರಾದ ಗುರುಪಾದ ಸ್ವಾಮಿ ಕಾಲೇಜು ದಿನಗಳಿಂದಲೂ ಮೈಸೂರಿನ ಕೆ ಆರ್. ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನೆಲೆಸಿದ್ದು, ಪ್ರಸ್ತುತ ಕೆ ಆರ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಗೌರಿಶಂಕರ ನಗರದಲ್ಲಿ ಸ್ವಂತ ಮನೆಯಲ್ಲಿ ವಾಸವಿದ್ದು ಮೈಸೂರು ನಗರ ಪಾಲಿಕೆಯ 54ನೇ ವಾರ್ಡಿನ ಮತದಾರರಾಗಿದ್ದಾರೆ ,
ಇವರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡಿದ್ದಾರೆ.
* ೧೯೮೦ರಲ್ಲಿ ಬನುಮಯ್ಯ ಕಾಲೇಜಿನಲ್ಲಿ ಓದುವಾಗ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಮೈಸೂರು ನಗರ ವಿದ್ಯಾರ್ಥಿ ಕ್ರಿಯಾ ಸಮಿತಿ ಅಧ್ಯಕ್ಷರಾಗಿ ವಿದ್ಯಾರ್ಥಿ ನಾಯಕರಾಗಿ ಮುಂಚೂಣಿಯಲ್ಲಿ ಕಾಣಿಸಿಕೊಂಡರು.
* ೧೯೯೩-೯೪ರಲ್ಲಿ ಅವಿಭಾಜ್ಯ ಮೈಸೂರು ಗ್ರಾಮಾಂತರ ಜಿಲ್ಲೆಯ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
* ೧೯೯೪ರಿಂದ ೨೦೦೦ದವರೆಗೂ ಹದಿನಾರು ಗ್ರಾಮದ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿಯೂ ಆಯ್ಕೆಯಾಗಿ ಕಾರ್ಯ ನಿರ್ವಹಿಸಿದ್ದ ಅನನುಭವ ಇವರಿಗಿದೆ.
* ೧೯೯೪-೧೯೯೯ ಅವಧಿಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದ ಎಚ್ ಆಂಜನೇಯ, ಆರ್ ಮಂಜುನಾಥ್ ಮತ್ತು ದಿನೇಶ್ ಗುಂಡೂರಾವ್ ಅವರ ಅವಧಿಯಲ್ಲಿ ಮೈಸೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ
* ೨೦೧೩-೨೦೧೭ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದಾರೆ
* ೨೦೧೭-೨೦೨೩ ಅವಧಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ. ಪರಮೇಶ್ವರ, ದಿನೇಶ್ ಗುಂಡೂರಾವ್ ಹಾಗೂ ಈಗಿನ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಅವರ ಅವಧಿಯಲ್ಲಿ,ಕೆಪಿಸಿಸಿ ಕಾರ್ಯದರ್ಶಿಯಾಗಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿಯಾಗಿ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಗೆ ಬರುವ 338 ಬೂತ್ಗಳ ಮಟ್ಟದಲ್ಲಿ ಪಕ್ಷದ ಸಂಘಟನೆಯನ್ನು ಬ್ಲಾಕ್ ಸಮಿತಿ ಅಧ್ಯಕ್ಷರು ಹಾಗೂ ಸ್ಥಳೀಯ ಮುಖಂಡರುಗಳ, ಕಾರ್ಯಕರ್ತರ ಸಹಕಾರ ಪಡೆದು ಪಕ್ಷವನ್ನು ಬಲವರ್ಧನೆ ಮಾಡಲು ಶ್ರಮಿಸಿದ್ದಾರೆ•

೨೦೨೧: ಮೈಸೂರು ವಿಭಾಗದ ಜನಸಂಪರ್ಕ ಅಭಿಯಾನದ ಕೆಪಿಸಿಸಿ ಉಸ್ತುವಾರಿ
* ೨೦೨೨ ಕೆಪಿಸಿಸಿ ಉಸ್ತುವಾರಿ, ಮಂಡ್ಯ ಜಿಲ್ಲೆಯ, ಕೆ.ಆರ್.ಪೇಟೆ ಮತ್ತು ನಾಗಮಂಗಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವದ ನೋಂದಣಿಗೆ ಉಸ್ತುವಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ
* ೨೦೨೨ ರಲ್ಲಿ ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಪಾದ ಯಾತ್ರೆಯಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಿಂದ ಹಿಡಿದು ತೆಲಂಗಾಣ ರಾಜ್ಯದವರೆಗೆ ೨೫ ದಿನಗಳ ಕಾಲ ʻರಾಷ್ಟ್ರೀಯ ಯಾತ್ರಿಗಳ ಉಪಚಾರ ಸಮಿತಿಯ ಅಧ್ಯಕ್ಷರಾದ ಹಾಗೂ ರಾಜ್ಯಸಭಾ ಸದಸ್ಯರಾದ ಜಿ ಸಿ ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದಾರೆ. ಹೀಗೆ ಕಾಂಗ್ರೆಸ್ ಪಕ್ಷ ನೀಡಿದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಮೇಕೆದಾಟು ಪಾದಯಾತ್ರೆಯಲ್ಲಿಯೂ ವಿವಿಧ ಜವಾಬ್ದಾರಿಗಳನ್ನು ಗುರುಪಾದಸ್ವಾಮಿ ಪ್ರಾಮಾಣಿಕವಾಗಿ ನಿರ್ವಹಿಸಿದ್ದಾರೆ.

ಚುನಾವಣೆಗಳಲ್ಲಿ ಭಾಗಿ:
ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಗುರುಪಾದಸ್ವಾಮಿ ೧೯೮೩ ರಿಂದ೨೦೨೩ ವರೆಗೆ ಸುಮಾರು ೧೦ ವಿಧಾನಸಭಾ ಹಾಗೂ ೧೦ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಇದರ ಜೊತೆಗೆ ವಿಧಾನ ಪರಿಷತ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದ್ದಾರೆ.
ವಿಧಾನಸಭೆಯ ಉಪಚುನಾವಣೆಗಳಾದ ಗುಂಡ್ಲುಪೇಟೆ, ನಂಜನಗೂಡು, ಶಿರಾ ಹಾಗೂ ಹಾನಗಲ್ ಕ್ಷೇತ್ರದಲ್ಲಿ ಕೆಪಿಸಿಸಿ ವತಿಯಿಂದ ಉಸ್ತುವಾರಿಯಾಗಿ ಪಕ್ಷದ ಅಭ್ಯರ್ಥಿಗಳ ಪರ ಅವರುಗಳ ಗೆಲುವಿಗೆ ಪಕ್ಷ ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿರುವುದಲ್ಲದೆ ಬಳ್ಳಾರಿ ಲೋಕಸಭೆಯ ಉಪಚುನಾವಣೆಯಲ್ಲಿ ಕೆಪಿಸಿಸಿ ವತಿಯಿಂದ ಉಸ್ತುವಾರಿಯಾಗಿ ಪಕ್ಷದ ಅಭ್ಯರ್ಥಿಯ ಪರ ಅವರ ಗೆಲುವಿಗೆ ಶ್ರಮಿಸಿದ್ದಾರೆ.

ಪಕ್ಷದ ಸಂಘಟನೆ:
ಕಾಂಗ್ರೆಸ್ ಪಕ್ಷದಲ್ಲಿ ಸುಧೀರ್ಘಕಾಲ ತೊಡಗಿಸಿಕೊಂಡ ಮೈಸೂರು ಭಾಗದ ಬಹುತೇಕ ಮುಖಂಡರಲ್ಲಿ ಇವರೂ ಕೂಡ ಒಬ್ಬರು. ಕರ್ನಾಟಕ ಪ್ರದೇಶ ಕಾಂಗ್ರೆಸ ಅಧ್ಯಕ್ಷರಾಗಿದ್ದ ಡಾ.ಜಿ ಪರಮೇಶ್ವರ್ ಅವಧಿಯಲ್ಲಿ ಕೆಪಿಸಿಯ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿ ಸೇವೆ ಸಲ್ಲಿಸುತ್ತಿದ್ದರು. ಆನಂತರ ಬಂದ ದಿನೇಶ್ ಗುಂಡೂರಾವ್ ಹಾಗೂ ಡಿ.ಕೆ.ಶಿವಕುಮಾರ್ ಅವರು ಅಧ್ಯಕ್ಷರಾದಾಗಲೂ ಗುರುಪಾದಸ್ವಾಮಿ ಕಾರ್ಯದರ್ಶಿಯಾಗಿ ಮುಂದುವರೆದಿದ್ದಾರೆ.
ಈ ಸಮಯದಲ್ಲಿ ಎಲ್ಲಾ ಕೆಪಿಸಿಸಿ ಅಧ್ಯಕ್ಷರುಗಳೊಂದಿಗೆ ನಿಕಟ ಸಂಬಂಧ ಹೊಂದಿರುವುದಲ್ಲದೆ ಪಕ್ಷ ಸಂಘಟನೆಯ, ಚುನಾವಣೆ ಮತ್ತು ಉಪಚುನಾವಣೆ ದೃಷ್ಟಿಯಿಂದ ರಾಜ್ಯದೆಲ್ಲಡೆ ಪ್ರವಾಸ ಮಾಡಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವಲ್ಲಿ ತಮ್ಮ ಅಳಿಲು ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ.

ಪ್ರಜಾದ್ವನಿ ಯಾತ್ರೆಯ ಸದಸ್ಯ:
ಕೇರಳಾ ರಾಜ್ಯದಿಂದ ಹೊರಟ ರಾಹುಲ್ ಗಾಂಧಿ ನೇತೃತ್ವದಭಾರತ್ ಜೋಡೋ ಯಾತ್ರೆ ಗುಂಡ್ಲುಪೇಟೆ ಮಾರ್ಗವಾಗಿ ಕರ್ನಾಟಕ ಪ್ರವೇಶಿಸಿದಂದಿನಿಂದ ರಾಷ್ಟ್ರೀಯ ಯಾತ್ರಾರ್ಥಿಗಳ ಉಪಚಾರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಯಾತ್ರೆಯ ಯಶಸ್ವಿನ ನಂತರ ನಡೆದ ಪ್ರಜಾದ್ವನಿ ಯಾತ್ರೆಯಲ್ಲಿ ದಕ್ಷಿಣ ಕರ್ನಾಟಕದ ಪ್ರಜಾ ಧ್ವನಿ ಯಾತ್ರೆಯ ೧೨೨ ವಿಧಾನಸಭಾ ಕ್ಷೇತ್ರಗಳ ಪ್ರಚಾರದಲ್ಲಿ ಮಾನ್ಯ ಸಿದ್ದರಾಮಯ್ಯನವರು ಹಾಗೂ ಡಿಕೆ ಶಿವಕುಮಾರ್ ಅವರ ಪ್ರಚಾರ ಕಾರ್ಯದ ಸಂದರ್ಭದಲ್ಲಿ ಪ್ರಜಾ ಧ್ವನಿ ಯಾತ್ರೆಯ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.

ಟಿಕೆಟ್ ಸಿಗುವ ಭರವಸೆ ಇದೆ:
ಸುಧೀರ್ಘವಾಗಿ ಕಾಂಗ್ರೆಸ್ ಪಕ್ಷದಲ್ಲಿ ತೊಡಗಿಸಿಕೊಂಡಿದ್ದರೂ ಕೌಟುಂಬಿಕ ಜವಾಬ್ದಾರಿಯನ್ನೂ ಅಚ್ಚುಕಟಾಗಿ ನಿರ್ವಹಿಸಿರುವ ಗುರುಪಾದಸ್ವಾಮಿಗೆ ಗೃಹಿಣಿ ಪತ್ನಿ, ಸಿವಿಲ್ ಇಂಜಿನಿಯರ್ ಆದ ಓರ್ವ ಪುತ್ರ, ಸಾಫ್ಟ್ ವೇರ್ ಇಂಜಿನಿಯರ್ ಗಳಾದ ಓರ್ವ ಪುತ್ರಿ, ಸೊಸೆ ಹಾಗೂ ಅಳಿಯ ಇರುವ ಚಿಕ್ಕ ಹಾಗೂ ಚೊಕ್ಕ ವಿದ್ಯಾವಂತ ಕುಟುಂಬ ಅವರದು
ವೃತ್ತಿ, ಪಕ್ಷ ಹಾಗೂ ಕುಟುಂಬದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವ ಅವರು ಪಕ್ಷ ಹಾಗೂ ಸಾರ್ವಜನಿಕರ ಸೇವೆಗಾಗಿ ತಮ್ಮ ಪೂರ್ಣ ಅವಧಿಯನ್ನು ವಿನಿಯೋಗಿಸಲು ತಯಾರಾಗಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಆಕಾಂಕ್ಷಿಯೂ ಆಗಿದ್ದಾರೆ. ಈ ಸಂಬಂಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, , ಬೈರತಿ ಸುರೇಶ ಸೇರಿದಂತೆ ಮೈಸೂರು, ಚಾಮರಾಜನಗರ, ಕೊಡಗು, ಜಿಲ್ಲೆಗಳ , ಉಸ್ತುವಾರಿ ಸಚಿವರುಗಳಾದ ಎಚ್ ಸಿ ಮಹಾದೇವಪ್ಪ, ಕೆ ವೆಂಕಟೇಶ್ ಹಾಗೂ ಬೋಸರಾಜ್, ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ತನ್ವೀರ್ ಸೇಟ್, ಪುಟ್ಟರಂಗಶೆಟ್ಟಿ, ಶಾಸಕರುಗಳಾದ ಅನಿಲ್ ಚಿಕ್ಕಮಾದು,ಹರೀಶ್ ಗೌಡ, ಎಂ ಮಂತರ್ ಗೌಡ,ಎ ಎಸ್ ಪೊನ್ನಪ್ಪ, ಡಾಕ್ಟರ್ ತಿಮ್ಮಯ್ಯ, ಮಧು ಮಾದೇಗೌಡ, ಡಿ ರವಿಶಂಕರ್, ದರ್ಶನ್ ಧ್ರುವನಾರಾಯಣ್, ಗಣೇಶ್ ಪ್ರಸಾದ್, ಎ ಆರ್ ಕೃಷ್ಣಮೂರ್ತಿ ಮಾಜಿ ಶಾಸಕರುಗಳಾದ ಡಾಕ್ಟರ್ ಯತೀಂದ್ರ ಸಿದ್ದರಾಮಯ,ವಾಸು, ಎಚ್ ಪಿ ಮಂಜುನಾಥ್, ಎಂ ಕೆ ಸೋಮಶೇಖರ್, ಕಳಲೆ ಕೇಶವಮೂರ್ತಿ, ಬನ್ನೂರು ಕೃಷ್ಣಪ್ಪ, ಶ್ರೀಮತಿ ಸುನಿತಾ ವೀರಪ್ಪಗೌಡ, ಆರ್ ನರೇಂದ್ರ, ಜಯಣ್ಣ, ನಂಜುಂಡಸ್ವಾಮಿ, ಮಾಜಿ ಲೋಕಸಭಾ ಸದಸ್ಯರುಗಳಾದ ಕಾಗಲವಾಡಿ ಶಿವಣ್ಣ ಹಾಗೂ ಸಿದ್ದರಾಜು, ಕೆಪಿಸಿಸಿಯ ಪರಿಶಿಷ್ಟ ಜಾತಿಯ ವಿಭಾಗದ ಅಧ್ಯಕ್ಷರಾದ ಆರ್ ಧರ್ಮ ಸೇನಾ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಪುಷ್ಪ ಅಮರನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳಾದ ಆರ್ ಮೂರ್ತಿ, ಡಾಕ್ಟರ್ ಬಿ ಜೆ ವಿಜಯ್ ಕುಮಾರ್, ಧರ್ಮಜ್ ಉತ್ತಪ್ಪ, ಮರಿಸ್ವಾಮಿ, ಮುಖಂಡರುಗಳಾದ ಕೆ ಮರಿಗೌಡ, ಸುನಿಲ್ ಬೋಸ,ಕೆಪಿಸಿಸಿ ಯ ಪದಾಧಿಕಾರಿಗಳು ಹಾಗೂ ಸದಸ್ಯರುಗಳು, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳು ಹಾಗೂ ಪಕ್ಷದ ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳು, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರನ್ನು ವೈಯಕ್ತಿಯವಾಗಿ ಭೇಟಿ ಮಾಡಿ ತಮ್ಮ ಮನವಿ ಸಲ್ಲಿಸಿದ್ದಾರೆ.

ಈ ನಿಟ್ಟಿನಲ್ಲಿ ಗುರುಪಾದಸ್ವಾಮಿ ಹೇಳುವಂತೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಇದ್ದು, ಕಟ್ಟ ಬೆಂಬಲಿಂಗನಾಗಿದ್ದು, ನಾಲ್ಕು ದಶಕಗಳಿಂದಲೂ ಪಕ್ಷದಲ್ಲಿ ತೊಡಗಿಸಿಕೊಂಡು ಪ್ರಾಮಾಣಿಕವಾಗಿ ದುಡಿದಿದ್ದೇನೆ ನನ್ನ ಕೆಲಸವನ್ನು ವರಿಷ್ಠರಿಂದ ಹಿಡಿದು ರಾಜ್ಯದ ಹಾಗೂ ಸ್ಥಳೀಯ ನಾಯಕರವರೆಗೂ ಗುರುತಿಸಿದ್ದಾರೆ ಹಾಗಾಗಿ ಟಿಕೆಟ್ ನನಗೆ ಸಿಗುವ ಭರವಸೆ ಇದೆʼಎನ್ನುತ್ತಾರೆ.
ಇನ್ನೂ ಜಾತಿ ಲೆಕ್ಕಾಚಾರದಲ್ಲಿ ಅಭ್ಯರ್ಥಿ ಆಯ್ಕೆ ಮಾಡುವುದಾದರೂ ಲಿಂಗಾಯಿತ ಸಮುದಾಯದಲ್ಲಿ ಒಳ್ಳೆಯ ಹೆಸರು ಉಳಿಸಿಕೊಂಡಿದ್ದಾರೆ. 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಲು ಪ್ರಬಲ ಆಕಾಂಕ್ಷಿ ಸಹ ಆಗಿದ್ದರು, ಅದೇನೇ ಇರಲಿ ಕಾಂಗ್ರೆಸ್ ಪಕ್ಷ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಇನ್ನೂ ಮುಂದಾಗಿಲ್ಲ. ಸಧ್ಯಕ್ಕೆ ಸರ್ವೆ ಹಂತದಲ್ಲಿದ್ದು, ಗುರುಪಾದ ಸ್ವಾಮಿಯವರ ಹೆಸರೂ ಮುಂಚೂಣಿಯಲ್ಲಿದೆ.

 

Leave a Reply

Your email address will not be published. Required fields are marked *