ಸಂಸತ್ ನಲ್ಲಿ ನಡೆದದ್ದು ಪೂರ್ವ ನಿಯೋಜಿತ ಕೃತ್ಯ, ಕಾಂಗ್ರೇಸ್ ಮೇಲೆ ಆರೋಪ ಹೊರೆಸುವ ಯತ್ನ, ಕೃತ್ಯಕ್ಕೆ ಪ್ರತಾಪ್ ಸಿಂಹ ನೇರ ಹೊಣೆ:ಗುರುಪಾದಸ್ವಾಮಿ

ನಂದಿನಿ ಮೈಸೂರು

ನೆನ್ನೇ ಸಂಸತ್ ಭವನದಲ್ಲಿ ನಡೆದ ಘಟನೆ
ಪೂರ್ವ ನಿಯೋಜಿತ ಕೃತ್ಯ ವಾಗಿದ್ದು ಸಂಸದ ಪ್ರತಾಪ್ ಸಿಂಹ ರವರ ಕುಮ್ಮಕ್ಕಿನಿಂದ ನಡೆದಿದೆ. ಈ ಘಟನೆಗೆ ನೇರ ಹೊಣೆ ಪ್ರತಾಪ್ ಸಿಂಹ ಎಂದು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ಗುರುಪಾದಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ‌.

ಮೈಸೂರಿನ ಮನೋರಂಜನ್,ಸಾಗರ್ ಶರ್ಮ ಎಂಬ ಯುವಕರು
ಸಂಸತ್ ಕಲಾಪ ನಡೆಯುವ ವೇಳೆ ವೀಕ್ಷಕರ ಗ್ಯಾಲರಿಯಿಂದ ಸಂಸದರ ಗ್ಯಾಲರಿಗೆ ಏಕಾಏಕಿ ಜಿಗಿದು ಹಳದಿ ಬಣ್ಣದ ಹೊಗೆ ಸೂಸಿ ಆತಂಕ ಸೃಷ್ಠಿಸಿದ್ದಾರೆ.
ಭಾರಿ ಭದ್ರತಾ ವೈಫಲ್ಯದಿಂದ ಆತಂಕದ ವಾತಾವರಣ ಎದುರಾಗಿತ್ತು.ಪ್ರತಾಪ್ ಸಿಂಹ ಅವರಿಂದಲೇ ಕೃತ್ಯವೆಸಗಿದ ಯುವಕರಿಗೆ ಪಾಸ್ ವಿತರಣೆಯಾಗಿದೆ.ನಿರುದ್ಯೋಗಿಗಳು ದೆಹಲಿಯವರಗೆ ಹೋಗುವುದಕ್ಕೆ ಹಣ ಕೊಟ್ಟವರು ಯಾರು.ಒಬ್ಬ ಆಟೋ ಡ್ರೈವರ್ ಗೆ ಸಂಸತ್ ನಲ್ಲಿ ಏನ್ ಕೆಲಸ.

ಮನೋರಂಜನ್ ಒಬ್ಬ ಇಂಜಿನಿಯರ್ ವಿಧ್ಯಾರ್ಥಿಯಾಗಿದ್ದ ಮನೋರಂಜನ್ ತಂದೆ ಒಬ್ಬ ರೈತರಾಗಿದ್ದಾರೆ.ಮಗನ ವಿಧ್ಯಾಭ್ಯಾಸ ಕ್ಕಾಗಿ ಹುಟ್ಟೋರಿಂದ ಮೈಸೂರಿಗೆ ಬಂದು ನೆಲೆಸಿದ್ದ.ಮನೋರಂಜನ್ ತಂದೆ ದೇವರಾಜೇ ಗೌಡ ಹೇಳಿರುವಂತೆ ಪ್ರತಾಪ್ ಸಿಂಹ ನಾವು ತುಂಬ ಆತ್ಮೀಯರು ಎಂದಿದ್ದಾರೆ.
ಸಂಸತ್ ನಲ್ಲಿ ನಡೆದ ಘಟನೆ 22 ವರ್ಷಗಳ ಹಿಂದೆ ನಡೆದ ಭಯೋತ್ಪಾದಕರ ದಾಳಿಯನ್ನು ನೆನಪು ಮಾಡುವಂತಾಗಿದೆ.

ದಾಳಿ ನಡೆಸಿರುವ ಮನೋರಂಜನ್ ಎಂಬ ಮೈಸೂರಿನ ವ್ಯಕ್ತಿ ಬೇರೆ ಯಾರು ಅಲ್ಲ ಆತ ಸಂಸದ ಪ್ರತಾಪ್ ಸಿಂಹ ಅವರಿಗೆ ತೀರಾ ಹತ್ತಿರದ ವ್ಯಕ್ತಿಯಾಗಿದ್ದಾನೆ ಆತನ ತಂದೆ ಪ್ರತಾಪ್ ಸಿಂಹರ ಬೆಂಬಲಿಗರು ಅಷ್ಟೇ ಅಲ್ಲದೆ ಸಂಸದ ಪ್ರತಾಪ್ ಸಿಂಹ ಮೂಲತಃ ಮೈಸೂರಿನವರೇ ಅಲ್ಲ ಹಾಸನ ಜಿಲ್ಲೆಗೆ ಸಂಬಂಧಪಟ್ಟವರು ಹಾಗೆ ಈಗ ಅಪರಾಧಿ ಎನಿಸಿಕೊಂಡಿರುವ ಮನೋರಂಜನ್ ಎಂಬ ವ್ಯಕ್ತಿಯ ಮೂಲ ಹುಡುಕಿದರೆ ಆತನ ತಂದೆಯವರು ಕೂಡ ಹಾಸನ ಜಿಲ್ಲೆಯವರೇ ಹಾಗಾಗಿ ಇವರಿಗೆ ತೀರ ಹತ್ತಿರದ ವ್ಯಕ್ತಿಯಾಗಿದ್ದ ಮನೋರಂಜನ್ ದಾಳಿಗೆ ಸಂಬಂಧಿಸಿದಂತೆ ಹೇಳುವುದಾದರೆ ಮನೋರಂಜನ್ ಸುಮಾರು ವರ್ಷಗಳಿಂದ ಪ್ರತಾಪ್ ಸಿಂಹ ಅವರ ಕಚೇರಿಯಲ್ಲಿ ಓಡಾಡಿಕೊಂಡಿದ್ದಂತಹ ವ್ಯಕ್ತಿ ಅದರ ಹಿನ್ನೆಲೆಯಲ್ಲಿ ಸಂಸತ್ ಭವನಕ್ಕೆ ಹೋಗುವಂತಹ ಪಾಸ್ ಅಷ್ಟು ಸಲೀಸಾಗಿ ಸಿಕ್ಕಿದ್ದು ಪಾಸ್ ಕೊಡುವುದರ ಹಿಂದೆ ಸಂಸದ ಪ್ರತಾಪ್ ಸಿಂಹ ಅವರ ಕೈವಾಡ ಬೇರೇನೇ ಇದೆ. ದಾಳಿ ಮಾಡಿರೋದು ಪ್ರತಾಪ್ ಸಿಂಹರ ಬೆಂಬಲಿಗನೇ ಆದರೂ ದಾಳಿ ಮಾಡಿರುವ ಉದ್ದೇಶವನ್ನು ಕಾಂಗ್ರೆಸ್ ಮೇಲೆ ವರಿಸುವ ಹುನ್ನಾರ ಅವರದಾಗಿತ್ತು. ಆದರೆ ಅದು ಫಲಿಸಲಿಲ್ಲ ಏನೋ ಮಾಡಲು ಹೋಗಿ ಈಗ ಅವರೇ ಸಿಕ್ಕಿಹಾಕಿಕೊಂಡಿದ್ದಾರೆ. ದಾಳಿ ಮಾಡಿದವರ ಬಾಯಿಯಲ್ಲಿ ಜೈ ಭಾರತ್ ಜೈ ಹಿಂದ್. ಜೈ ಅಂಬೇಡ್ಕರ್ ಎಂದು ಹೇಳಿಸಿದ ತಕ್ಷಣ ಅದನ್ನೇ ಮುಂದಿಟ್ಟುಕೊಂಡು ಇದರ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಬಿಂಬಿಸುವ ಆಲೋಚನೆ ಅವರ್ದಾಗಿತ್ತು. ಆದರೆ ಅವೆಲ್ಲವೂ ಈಗ ತಲೆಕೆಳಗಾಗಿದೆ
ಇದು ಇಡೀ ದೇಶವೇ ತಲೆತಗ್ಗಿಸುವಂತಹ ಕೃತ್ಯವಾಗಿದೆ. ಹಾಗಾಗಿ ಅವರನ್ನು ಸಂಸದ ಸ್ಥಾನದಿಂದ ಅಮಾನತುಗೊಳಿಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

Leave a Reply

Your email address will not be published. Required fields are marked *