ನಂದಿನಿ ಮೈಸೂರು
ಕಾಂಗ್ರೆಸ್ ಸರ್ಕಾರದಿಂದ ಜಾರಿಯಾಗಿರುವ ಗೃಹಲಕ್ಷ್ಮೀ ಯೋಜನೆ ಮಂಜೂರಾತಿ ಪತ್ರವನ್ನ ಮನೆಯ ಯಜಮಾನಿಗೆ ತಲುಪಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮಾಜಿ ನಗರ ಪಾಲಿಕೆ ಸದಸ್ಯ ಮಹದೇಶ್,ಹಾಲಿ ನಗರ ಪಾಲಿಕೆ ಸದಸ್ಯೆ ಭಾಗ್ಯ ಮಹದೇಶ್, ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಶ್ರೀಪಾಲ್ ರವರ ನೇತೃತ್ವದಲ್ಲಿ 19ನೇ ವಾರ್ಡ್ ಪಡುವಾರಹಳ್ಳಿಯಲ್ಲಿರುವ
ಅರ್ಹ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆಯ ಮಂಜೂರಾತಿ ಪತ್ರ ಹಾಗೂ ಸಿಹಿ ವಿತರಿಸಿದರು.
ನಗರಪಾಲಿಕೆ ಸದಸ್ಯೆ ಭಾಗ್ಯಾ ಮಹದೇಶ್ ಹಾಗೂ ಶ್ರೀಪಾಲ್ ರವರು ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಅನೇಕ ಯೋಜನೆಗಳನ್ನ ಜಾರಿಗೆ ತಂದಿದೆ.ಚುನಾವಣಾ ಸಂದರ್ಭದಲ್ಲಿ ಮನೆಯ ಯಜಮಾನಿಗೆ 2ಸಾವಿರ ನೀಡುವುದಾಗಿ ಕಾಂಗ್ರೆಸ್ ಪಕ್ಷ ಹೇಳಿತ್ತು.ಇದೀಗಾ
ಕೊಟ್ಟ ಮಾತಿನಿಂದ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿದೆ.ಆ.30 ರಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗೃಹಲಕ್ಷ್ಮೀ ಗೆ ಚಾಲನೆ ನೀಡಲಾಗುತ್ತಿದೆ.ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಇಂದು ಪಡುವಾರಹಳ್ಳಿಯಲ್ಲಿರುವ ಅರ್ಹ ಮಹಿಳಾ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿದ್ದೇವೆ ಎಂದರು.