ಸೆ.27 ಮತ್ತು 29 ಮೈಸೂರು ತಾಲ್ಲೂಕಿನಲ್ಲಿ ಗ್ರಾಮೀಣ ದಸರಾ ಆಚರಣೆ

ನಂದಿನಿ ಮೈಸೂರು

*ಸೆ.27 ಮತ್ತು 29 ಮೈಸೂರು ತಾಲ್ಲೂಕಿನಲ್ಲಿ ಗ್ರಾಮೀಣ ದಸರಾ ಆಚರಣೆ*

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಮೈಸೂರು ತಾಲ್ಲೂಕಿನಲ್ಲಿ ಸೆ.27 ಹಾಗೂ ಸೆ.29 ರಂದು ಎರಡು ದಿನಗಳ ಕಾಲ ತಾಲ್ಲೂಕು ಮಟ್ಟದ ಗ್ರಾಮೀಣ ದಸರಾ ಕಾರ್ಯಕ್ರಮ ಆಚರಿಸಲಾವುದು ಎಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಡಿ.ಗಿರೀಶ್ ಅವರು ತಿಳಿಸಿದ್ದಾರೆ‌.

ತಾಲ್ಲೂಕಿನ ವರುಣ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಸೆ. 27 ರಂದು ಬೆಳಿಗ್ಗೆ 9 ರಿಂದ ರೈತರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ‌. ಪುರುಷರಿಗೆ ಮೂರು ಕಾಲಿನ ಓಟ, ಗೋಣಿ ಚೀಲದ ಒಳಗೆ ಕಾಲಿಟ್ಟು ಓಡುವುದು, ಗೊಬ್ಬರದ ಮೂಟೆ ಹೊತ್ತು ಓಡುವ ಸ್ಪರ್ಧೆ ಇರುತ್ತದೆ.

ಮಹಿಳೆಯರಿಗೆ ಒಂಟಿ ಕಾಲಿನ ಓಟ, ನೀರಿನ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ, ಗೋಣಿ ಚೀಲದ ಒಳಗೆ ಕಾಲಿಟ್ಟು ಓಡುವ ಸ್ಪರ್ಧೆ ಇರಲಿದೆ. ಪುರುಷರು ಹಾಗೂ ಮಹಿಳೆಯರಿಗೆ ಕೆಸರು ಗದ್ದೆಯಲ್ಲಿ ಓಡುವ ಸ್ಪರ್ಧೆಯೂ ಇರಲಿದ್ದು, ವರುಣ ಗ್ರಾಮದ ಸುತ್ತೂರು ರಸ್ತೆಯಲ್ಲಿರುವ ಮಹದೇವಪ್ಪ ಅವರ ಜಮೀನಿನಲ್ಲಿ ಆಯೋಜಿಸಲಾಗಿದೆ.

ಸೆ.29 ರಂದು ಬೆಳಿಗ್ಗೆ 11 ಗಂಟೆಗೆ ಗ್ರಾಮೀಣ ದಸರಾ ವೇದಿಕೆ ಕಾರ್ಯಕ್ರಮವು ಜಯಪುರ ಗ್ರಾಮದ ಗುಜ್ಜಮ್ಮ ದೇವಸ್ಥಾನದ ಆವರಣದಲ್ಲಿ ನಡೆಯಲಿದ್ದು, ವಿವಿಧ ಜಾನಪದ ಕಲಾತಂಡ ಮತ್ತು ಆಕರ್ಷಕ ಟ್ಯಾಬ್ಲೋ ಒಳಗೊಂಡ ಮೆರವಣಿಗೆಯು ದಾರಿಪುರ ಗ್ರಾಮದ ದೇವಸ್ಥಾನದಿಂದ ಸಾಗಲಿದೆ.

ಕ್ರೀಡಾಕೂಡದಲ್ಲಿ ಭಾಗವಹಿಸುವವರು ವರುಣ ಮೊ.ಸಂ: 9019974711, ಜಯಪುರ ಮೊ.ಸಂ: 7795398976, ಇಲವಾಲ ಮೊ.ಸಂ: 9538793550, ಕಸಬಾ ಮೊ.ಸಂ: 9880501981 ಸಂಪರ್ಕಿಸಿ ಹೋಬಳಿವಾರು ಹೆಸರು ನೋಂದಾಯಿಸಿಕೊಳ್ಳಬಹುದು.

ಗ್ರಾಮೀಣ ದಸರಾ ಕಾರ್ಯಕ್ರಮದಲ್ಲಿ ತಾಲ್ಲೂಕು ವ್ಯಾಪ್ತಿಯ ಆಸಕ್ತ ಕ್ರೀಡಾ ಸ್ಪರ್ಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *