ಸಂಘ ವಿರೋಧಿ ಕೆಲಸ ಮಾಡುತ್ತಿರುವವರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಸರ್ಕಾರಿ ನೌಕರರಿಂದ ಮನವಿ.

ನಂದಿನಿ ಮೈಸೂರು

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವಿರುದ್ಧ ಸುಳ್ಳು ದೂರು ನೀಡಿರುವವರ ಬಗ್ಹೆ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ
ಮೈಸೂರು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜೆ.ಗೋವಿಂದರಾಜು ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ
ಮೈಸೂರು ಜಿಲ್ಲಾ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ವತಿಯಿಂದ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದರು 

ಇದೇ ಸಂದರ್ಭದಲ್ಲಿ
ಸಂಘದ ಅಧ್ಯಕ್ಷ ಜೆ.ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ರೇವಣ್ಣ ಮಾತನಾಡಿ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷರಾದ ಸಿ.ಎಸ್ ಷಡಕ್ಷರಿ ವಿರುದ್ಧ ಕೆಲವರು ಆರೋಪ ಮಾಡುತ್ತಿದ್ದಾರೆ.ಷಡಾಕ್ಷರಿ ಅವರು ಸರ್ಕಾರಿ ನೌಕರರ ಕುಂದು ಕೊರತೆ ಹಾಗೂ ಬೇಡಿಕೆಗಳನ್ನ ಈಡೇರಿಸಿದ್ದಾರೆ.ಅವರ ಕಾರ್ಯ ವೈಖರಿ ನೋಡಿ ಸಹಿಸಲಾಗದ ಕೆಲವರು ಸಂಘ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ.

ಸರ್ಕಾರಿ ನೌಕರರಾದ ಶಾಂತರಾಮು,ಗುರುಸ್ವಾಮಿ,ಮೆಹಬೂಬ್ ಪಾಷ, ಶಿವರುದ್ರಯ್ಯ ಮತ್ತು ನಿಂಗೇಗೌಡ ಎಂಬುವವರು ಆರೋಪ ಮಾಡುವ ಜೊತೆಗೆ ಸಂಘ ವಿರೋಧಿ ಕೆಲಸ ಮಾಡುತ್ತಿದ್ದಾರೆ.ಇವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ
ಎಡಿಸಿ ರವರಿಂದ ಮನವಿ ಸಲ್ಲಿಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ರಮೇಶ್ ಉಪಾಧ್ಯಕ್ಷ, ರಮೇಶ್ ಕುಮಾರ್ ಜಿಲ್ಲಾ ಖಜಾಂಚಿ ಮತ್ತು ಜಿಲ್ಲೆಯ ವಿವಿಧ ಇಲಾಖೆಯ ವೃಂದ ಸಂಘದ , ಜಯಪ್ಪ, ನಾಗೇಶ್, ಉಮೇಶ್, ಪ್ರತಿ ಸುಶೀಲ ಲತಾ ರಮೇಶ್ ಕಾರ್ಯಧ್ಯಕ್ಷ ಆನಂದ್, ರಘು, ಮಲೇಗೌಡ ಪ್ರೇಮ ಮತ್ತು ವಿವಿಧ ವೃಂದ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *