ಮೈಸೂರು:15 ಏಪ್ರಿಲ್ 2022
ನಂದಿನಿ ಮೈಸೂರು
ಮಾನವ ಕುಲದ ಏಳಿಗೆಗಾಗಿ ಕ್ರಿಸ್ತನು ನೀಡಿರುವ ಬಲಿದಾನ ನೆನೆಯಲು ಇಂದು ಗುಡ್ ಫ್ರೈಡೇ ಆಚರಿಸಲಾಗುತ್ತದೆ.
ಇಂದು ಮೈಸೂರಿನ ಗಾಯತ್ರಿ ಪುರಂ ನಲ್ಲಿರುವ ಸಂತ ಅಂಥೋನಿಯವರ ಚರ್ಚ್ ನಲ್ಲಿ ಗುಡ್ ಫ್ರೈಡೆ ಆಚರಿಸಲಾಯಿತು. ಕ್ರೈಸ್ತ ಭಾಂಧವರು ಚರ್ಚ್ ಗಳಿಗೆ ಭೇಟಿ ನೀಡಿದರು.ನಂತರ ಚರ್ಚ್ ಫಾಧರ್ ಡಾ.ಆರ್. ಆರೋಗ್ಯ ಸ್ವಾಮಿ ನೇತೃತ್ವದಲ್ಲಿ ಹಾಗೂ ಹಿತರ ಸಹ ಗುರುಗಳೊಂದಿಗೆ ಧಾರ್ಮಿಕ ಆಚರಣೆ ಜರುಗಿತ್ತು, ಮಧ್ಯಾಹ್ನ ಯೇಸುವಿನ ಪಾಡು ಮರಣದ ಘಟನೆಯನ್ನು ಭಕ್ತದಿಗಳು ಪಾತ್ರಗಳನ್ನು ಅನುಕರಿಸುವ ಮೂಲಕ .ಗುಡ್ ಫ್ರೈಡೆ ದಿನದಂದು ಯೇಸು ಕೊನೆಯ ಕ್ಷಣದಲ್ಲಿ ಹೇಳಿದ ವ್ಯಾಖ್ಯಾನವನ್ನು ಸ್ಮರಿಸಿ ದುಃಖ ಹೊರಹಾಕಿದರು.
ಕಾರ್ಯಕ್ರಮದಲ್ಲಿ ಕೌನ್ಸಿಲ್ ಮೆಂಬರ್ಸ್ ಗಳಾದ ಫ್ರಾನ್ಸಿಸ್ ಆರ್, ನವೀನ್, ತೋಮಸ್,ಅಂಥೋನಿ ಸೇರಿದಂತೆ ಹಿತರ ಕ್ರೈಸ್ತ ಬಂಧುಗಳು ಭಾಗಿಯಾಗಿದ್ದರು.