ಮೈಸೂರು:15 ಫೆಬ್ರವರಿ 2022
ನಂದಿನಿ ಮೈಸೂರು
ಗಾನ-ವೈದ್ಯಲೋಕ, ನೂತನ ಸಂಸ್ಥೆಯ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮೈಸೂರಿನ ವಿಜಯನಗರದಲ್ಲಿರುವ ಜಿಲ್ಲಾ ಸಾಹಿತ್ಯ ಭವನ ಸಭಾಂಗಣದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ”ಡಿ. ತಿಮ್ಮಯ್ಯ ರವರು ಉದ್ಘಾಟಿಸಿದ ಅವರು ಎಂದು ಮರೆಯದ ಹಾಡು ಸಂಗೀತ ಗಾಯ ನೋತ್ಸವ ಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯರಾದ ಡಾ”ಡಿ. ತಿಮ್ಮಯ್ಯ ರವರು ಈ ಸಂಸ್ಥೆಯು ಉತ್ತಮವಾಗಿ ಬೆಳೆದು ಯಶಸ್ಸನ್ನು ತರಲಿ ಎಂದು ಹಾರೈಸಿದರು, ಮತ್ತು ಆರೋಗ್ಯ ಮತ್ತು ಆರೋಗ್ಯವಂತ ಎಂದರೆ ಯಾವುದೇ ರೋಗ ರುಜಿನ ಇಲ್ಲದವರು ಎಂದಲ್ಲ. ಧೈರ್ಯವಾಗಿ ಆಧ್ಯಾತ್ಮಿಕವಾಗಿ ಇರುವವರಿಗೆ ಆರೋಗ್ಯವಂತ ಎನ್ನಬಹುದಾಗಿದೆ. ಅದರಲ್ಲೂ ಸಾಮಾಜಿಕವಾಗಿ ಅಂದರೆ ಊಟ, ವಸತಿ, ಬಟ್ಟೆ, ಎಲ್ಲವೂ ಸೂಕ್ತವಾಗಿ ಇರುವವರು ನಿಜವಾದ ಆರೋಗ್ಯವಂತರು ಎಂದರು.ವೈದ್ಯರು ವೈದ್ಯಲೋಕ ದಿಂದ ಗಾನ ಲೋಕ ಆರಂಭಿಸುವುದು ಉತ್ತಮ ವಿಚಾರವಾಗಿದೆ. ಏಕೆಂದರೆ ವೈದ್ಯರು ಪ್ರತಿನಿತ್ಯ ರೋಗ-ರುಜಿನ ನೋಡುವುದರ ಜೊತೆಗೆ ರೋಗಿಗಳಿಗೆ ಸೇವೆ ಸಲ್ಲಿಸುತ್ತಿರುತ್ತಾರೆ. ವೈದ್ಯರು ಸಹ ಮನುಷ್ಯರೇ.ಅವರಿಗೆ ವಿಶ್ರಾಂತಿ ಜೊತೆಗೆ ಮನೋರಂಜನೆ ಬೇಕಾಗುವ ಹಿನ್ನೆಲೆ ಸಂಗೀತವನ್ನು ಆಯ್ಕೆ ಮಾಡಿಕೊಂಡಿರುವುದು ಸಂತಸದ ವಿಚಾರವಾಗಿದೆ ಎಂದ ಅವರು ಸಂಗೀತ ಮನಸ್ಸು ಹಗುರವಾಗಿಸಲು ಸಹಕಾರಿಯಾಗಿದೆ. ಆದ್ದರಿಂದ ವೈದ್ಯರು ಹಾಡುವುದರ ಮೂಲಕ ತಮ್ಮ ಜೊತೆ ಮತ್ತೊಬ್ಬರ ಮನಸ್ಸನ್ನು ಹಗುರ ಗೊಳಿಸಿ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಡಾ. ಗುಬ್ಬಿಗೂಡು ರಮೇಶ್. ಗಾನ ವೈದ್ಯಲೋಕದ ಗೌರವಾಧ್ಯಕ್ಷ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರು ಆದ ಡಾ”ವೈ. ಡಿ. ರಾಜಣ್ಣ. ಗಾನ ವೈದ್ಯಲೋಕ ಅಧ್ಯಕ್ಷರಾದ ಡಾ”ಟಿ. ರವಿಕುಮಾರ್. ಗಾನ ವೈದ್ಯ ಲೋಕ ಕಾರ್ಯದರ್ಶಿ ಡಾ” ಪೂರ್ಣಿಮಾ ಎ.ಎಸ್. ಗಾನ ವೈದ್ಯಲೋಕ ಖಜಾಂಚಿ ಡಾ” ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.