ಕೆಂಗಲ್ ಹನುಮಂತಯ್ಯ ರವರ 114 ನೇ ಜಯಂತಿ ಆಚರಣೆ

ಮೈಸೂರು:14 ಫೆಬ್ರವರಿ 2022

ನಂದಿನಿ ಮೈಸೂರು

ಮೈಸೂರಿನ ಅಗ್ರಹಾರ ವೃತ್ತದಲ್ಲಿ ಕರ್ನಾಟಕ ಸೇನಾ ಪಡೆಯ ವತಿಯಿಂದ ಭವ್ಯ ಐತಿಹಾಸಿಕ ವಿಧಾನ ಸೌಧದ ಶಿಲ್ಪಿ ಕೆಂಗಲ್ ಹನುಮಂತಯ್ಯ ರವರ 114 ನೇ ಜಯಂತಿ ಆಚರಿಸಲಾಯಿತು.

ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಸಿ ಜಿ ಗಂಗಾಧರ್ ,ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ರವರು ಪುಷ್ಪಾರ್ಚನೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ನಮನ ಸಲ್ಲಿಸಿದರು.

ನಂತರ
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶ್ರೀ ಮಡ್ಡೀಕೆರೆ ಗೋಪಾಲ್ ರವರು ಮಾತನಾಡಿ , ” ಕರ್ನಾಟಕ ಏಕೀಕರಣವು ಅವರ ಇನ್ನೊಂದು ಮಹಾನ್ ಸಾಧನೆ. ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದೇ ರಾಜ್ಯವಾಗಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಭಾಷೆಯಾಧಾರಿತ ರಾಜ್ಯ ನಿರ್ಮಾಣವನ್ನು ಬೆಂಬಲಿಸಿ ೧೯೫೫ ರಲ್ಲಿ ‘ಮೈಸೂರು ವಿಧಾಯಕಸಭೆ’ಯಲ್ಲಿ ಅವರು ಮಾಡಿದ ಭಾಷಣವು ಐತಿಹಾಸಿಕವಾಗಿದೆ. ಹಾಗೂ ಅವರು ಕೆಂಗಲ್ ನಲ್ಲಿ ಹನುಮಂತ ನ ದೇವಸ್ಥಾನ ನನ್ನು ವಿಶಿಷ್ಟ ವಾಗಿ ನಿರ್ಮಿಸಿದರು , ಸರಳತೆಯ ಸಹಕಾರ ಮೂರ್ತಿ ಎಂದರು.

ತದನಂತರ ಗಂಗಾಧರ್ ಮಾತನಾಡಿ
ಸ್ವಾತಂತ್ರ್ಯ ಭಾರತದ ಪ್ರಮುಖ ರಾಜಕೀಯ ಮುತ್ಸದ್ದಿಯೂ , ಧೀಮಂತ ರಾಜಕಾರಣಿಯೂ ಆದ ಶ್ರೀ ಕೆಂಗಲ್ ಹನುಮಂತಯ್ಯನವರು ಆಗಿನ ಬೆಂಗಳೂರು ಜಿಲ್ಲೆಯ(ಈಗಿನ ರಾಮನಗರ), ರಾಮನಗರ ತಾಲೂಕಿನ ಲಕ್ಕಪ್ಪನಪಳ್ಳಿಯಲ್ಲಿ ೧೯೦೮ರಲ್ಲಿ ಒಕ್ಕಲಿಗ ಕುಟುಂಬವೊಂದರಲ್ಲಿ ಹುಟ್ಟಿದರು. ೧೯೩೦ ರಲ್ಲಿ ಮೈಸೂರು ಮಹಾರಾಜಾ ಕಾಲೇಜು ವಿದ್ಯಾರ್ಥಿ ಸಂಘ ಮತ್ತು ಕರ್ನಾಟಕ ಸಂಘಗಳಿಗೆ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಮಹಾತ್ಮಾ ಗಾಂಧಿಯವರಿಂದ ಪ್ರೇರಿತರಾಗಿ ಸ್ವಾತಂತ್ರ್ಯಹೋರಾಟಕ್ಕಿಳಿದು ಅದಮ್ಯಶಕ್ತಿ ಮತ್ತು ಅರ್ಪಣಾಮನೋಭಾವವನ್ನು ಮೆರೆದರು. ಈ ಹೋರಾಟದ ಅವಧಿಯಲ್ಲಿ ಅವರು ಏಳು ಬಾರಿ ಬಂಧನಕ್ಕೊಳಗಾದರು. ೧೯೫೧ ರಲ್ಲಿ ಮೈಸೂರು ರಾಜ್ಯಕ್ಕೆ ಕೆಂಗಲ್ ಹನುಮಂತಯ್ಯನನವರು ಎರಡನೆ ಮುಖ್ಯಮಂತ್ರಿಯಾದರು. ಜನರ ನಿಜವಾದ ನಾಯಕನಾಗಿದ್ದುಕೊಂಡು ರಾಜಕೀಯ ಹಸ್ತಕ್ಷೇಪವಿಲ್ಲದ ದಕ್ಷ ಆಡಳಿತವನ್ನು ನೀಡಿ ರಾಜ್ಯದ ಏಳಿಗೆಗೆ ಮತ್ತು ಗ್ರಾಮೀಣ ಜನರ ಉದ್ಧಾರಕ್ಕೆ ದುಡಿದರು. ದೂರದೃಷ್ಟಿಯುಳ್ಳ ನಾಯಕನಾಗಿ ಅವರು ಅನೇಕ ಸಾಧನೆಗಳನ್ನು ಮಾಡಿದರು. ಅದಕ್ಕೆ ಬೆಂಗಳೂರಿನಲ್ಲಿರುವ ಭವ್ಯ ವಿಧಾನಸೌಧ ಕಟ್ಟಡವೇ ಸಾಕ್ಷಿಯಾಗಿದೆ. ದೇಶದಲ್ಲೇ ಅತಿ ದೊಡ್ಡದಾದ ಶಾಸಕಾಂಗ ಮತ್ತು ಆಡಳಿತ ಕಚೇರಿಯ ಕಟ್ಟಡವಿದು, ಕರ್ನಾಟಕ ಸೇನಾ ಪಡೆ ಇಂತಹ ಮಹನೀಯರ ಜಯಂತಿ ಆಚರಿಸುತ್ತಿರುವುದು ಶ್ಲಾಘನೀಯ” ಎಂದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು ಎನ್ ಎಂ ನವೀನ್ ಕುಮಾರ್, ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಮೈಸೂರು-ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಶ್ರೀ ಮರಿಸ್ವಾಮಿ, ಉಪಾಧ್ಯಕ್ಷ ರವಿರಾಜಕೀಯ, ಡಾ. ಶಾಂತರಾಜೇಅರಸ್, ರಾಜೇಶ್ ಎಂ, ಪ್ರಭುಶಂಕರ್, ಪ್ರಜೀಶ್ ಪಿ, ಬಂಗಾರಪ್ಪ, ಶಿವರಾಮೇಗೌಡ, ರವಿನಾಯಕ್, ಗಣೇಶ್ ಪ್ರಸಾದ್, ಗೊರೂರು ಮಲ್ಲೇಶ್, ವಿಜಯೇಂದ್ರ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *