ಮೈಸೂರು:6 ಮಾರ್ಚ್ 2022
ನಂದಿನಿ ಮೈಸೂರು
ಮೈಸೂರಿನ ವಿಜಯನಗರದಲ್ಲಿರುವ ಸೇಪಿಯೆಂಟ್ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ” ರಂಗ ಕಹಳೆ ‘ ವಿದ್ಯಾರ್ಥಿ ನಾಟಕ ತಂಡ ಮತ್ತು ‘ ಕ್ರೀಡಾ ಸಂಘ’ದ ವತಿಯಿಂದ ನಿರಾಶ್ರಿತರಿಗೆ ಒಂದು ದಿನದ ಊಟೋಪಚಾರದ ವ್ಯವಸ್ಥೆ ಕಲ್ಪಿಸುವ ಸಮಾಜಸೇವಾ ಕಾರ್ಯಕ್ಕೆ ಮುಂದಾಗಿದ್ರು.
ಕೆ.ಆರ್.ಆಸ್ಪತ್ರೆಯ ಆವರಣದಲ್ಲಿ ಸೇಪಿಯೆಂಟ್ ಶಿಕ್ಷಣ ಸಂಸ್ಥೆಯ ಕಾಲೇಜಿನ ಟ್ರಸ್ಟಿ
ದಲ್ಜೀತ್,ಪ್ರಾಂಶುಪಾಲರಾದ ಡಾ.ಕೆ.ಗಣೇಶ್ , ಕಾಮಿಡಿ ಕಿಲಾಡಿಗಳು ಖ್ಯಾತಿಯ ಮನೋಹರ್‌ಗೌಡ , ಕನ್ನಡ ಪ್ರಾಧ್ಯಾಪಕರಾದ ಪ್ರೊ.ಮಹಾದೇವಸ್ವಾಮಿ ,ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಶಾಂತ್ ನೇತೃತ್ವದಲ್ಲಿ ಹಸಿದವರಿಗೆ ಊಟ ವಿತರಿಸಿದರು.ಆರ್.ಜೆ ಸುನೀಲ್ ಹಾಗೂ ಡಿಕೆಡಿ ಫೈನಲಿಸ್ಟ್ ದರ್ಶನ್ ರವರು ಕೂಡ ಸೇವಾ ಕಾರ್ಯಕ್ರಮಕ್ಕೆ ಕೈ ಜೋಡಿಸಿದ್ರು.
ಇಂತಹ ಕಾರ್ಯಕ್ರಮವನ್ನು
ಅನಾಥಶ್ರಮ , ಅಂಧ ವಿದ್ಯಾರ್ಥಿನಿಲಯ ಹಾಗೂ ವೃದ್ಧಾಶ್ರಮಮಗಳಲ್ಲಿ
ಮುಂದಿನ ದಿನಗಳಲ್ಲಿ ಊಟ ವಿತರಣೆ ಮಾಡುವುದಾಗಿ ವಿಧ್ಯಾರ್ಥಿಗಳು ತಿಳಿಸಿದ್ದಾರೆ.
ಅದೇನೇ ಆಗಲೀ ಒಂದು ತುತ್ತಿನ ಬೆಲೆ
ಹಸಿದವನಿಗೆ ತಿಳಿದಿರುತ್ತೇ.. ಕಲಿಕೆಯ ಹಂತದಲ್ಲಿರುವ ವಿಧ್ಯಾರ್ಥಿಗಳು ಮತ್ತೊಬ್ಬರಿಗೂ ಹಸಿದವರ ಹೊಟ್ಟೆ ತುಂಬಿಸುವ ಮನಸ್ಸು ಮಾಡಿದ್ದಾರೆ.
ನಂದಿನಿ ಭಾರತ್ ನ್ಯೂಸ್ ಟಿವಿ ಮೈಸೂರು