ಮೈಸೂರು:21 ಮೇ 2022
ನಂದಿನಿ ಮೈಸೂರು
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಹಾಗೂ ಮೈಸೂರು ವಿಶ್ವವಿದ್ಯಾನಿಲಯ ಕುಲಪತಿಗಳೂ ಆಗಿದ್ದ ಪ್ರೊ.ಕೆ.ಎಸ್.ರಂಗಪ್ಪನವರ ಪುತ್ರ ಯುವ ವಿಜ್ಞಾನಿಗೆ ಅಂತಾರಾಷ್ಟ್ರೀಯ ಫೆಲೋಷಿಪ್‌ನ ಗೌರವ ದೊರೆತಿದೆ.
ನಾಗಮಂಗಲ ಆದಿ ಚುಂಚನಗಿರಿ ಮೆಡಿಸಿನ್ ‘ ನಲ್ಲಿ ವಿಶ್ವವಿದ್ಯಾನಿಲಯ , ಆದಿಚುಂಚನಗಿರಿ ಇನ್ಸ್‌ಟಿಟೂಟ್ ಆಫ್ ಮಾಲಿಕ್ಯೂಲರ್ ನಿರ್ದೇಶಕರಾಗಿರುವ ಡಾ . ಶೋಭಿತ್ ರಂಗಪ್ಪ ಅವರಿಗೆ ಜಪಾನ್ ಸರ್ಕಾರದ ಜಸ್ಟೋ ಫೆಲೋಷಿಪ್ ( JASSO Fellowship ) ದೊರಕಿದೆ . ಈ ಫೆಲೋಷಿಪ್‌ನ ಅಂಗವಾಗಿ ಡಾ . ಶೋಭಿತ್ ರಂಗಪ್ಪ ಅವರು ಜಪಾನಿನ ಹೊಕೈಡೊ ವಿಶ್ವವಿದ್ಯಾನಿಲಯದಲ್ಲಿ ತಾವು ಕಾಲ ಈಗಾಗಲೇ ಕೈಗೊಂಡಿರುವ ಸಂಶೋಧನೆಯನ್ನು 90 ದಿನಗಳ ಕಾಲ ಅಲ್ಲಿ ಮುಂದುವರಿಸಬಹುದಾಗಿದೆ . ಜಪಾನಿನ ಸದರಿ ವಿಶ್ವವಿದ್ಯಾನಿಲಯದಲ್ಲಿ ಡಾ . ಶೋಭಿತ್ ರಂಗಪ್ಪ ಅವರು ಪ್ರೊ , ಹಿರೋಶಿ ಹಿನ್ ಅವರ ಅತಿಥಿಯಾಗಿರುವರು .
ಜಪಾನಿನ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡಿರುವ ಅಭ್ಯರ್ಥಿಗಳು ಕೈಗೊಂಡಿರುವ ಶ್ರೇಷ್ಠ ಮಟ್ಟದ ಸಂಶೋಧನೆಯನ್ನು ಗುರುತಿಸುವುದು ಜೆಸ್ಟ್ ಫೆಲೋಷಿಪ್‌ನ ಕುರು ಆಗಿದೆ . ಡಾ . ಶೋಭಿತ್‌ರಂಗಪ್ಪ ಅವರು ಅಂತಾರಾಷ್ಟ್ರೀಯ ಸಂಶೋಧನಾ ಜರ್ನಲ್‌ಗಳಲ್ಲಿ 75 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿರುವುದರ ಜೊತೆಗೆ ಕ್ಯಾನ್ಸರ್ ಔಷಧದ ಸಂಶೋಧನೆಯಲ್ಲಿ 5 ಪೇಟೆಂಟ್‌ಗಳನ್ನು ಪಡೆದಿರುತ್ತಾರೆ .
ಸಂಶೋಧನೆ ಮಾಡೋದು ಸುಲಭದ ಮಾತಲ್ಲ.ಸಂಶೋಧನೆ ಮಾಡುವವರಿಗೆ ಶ್ರದ್ದೆ,ತಾಳ್ಮೆ ಇರಬೇಕು. ಮಗನ ಸಂಶೋಧನೆಗೆ ಕೆ.ಎಸ್. ರಂಗಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.ನಮಗಿಂತ ಎತ್ತರಕ್ಕೆ ಬೆಳೆಯಬೇಕೆಂಬ ಆಸೆ ಇದೆ ಎಂದು ಶುಭ ಹಾರೈಸಿದರು.ಮುಂದುವರೆದು ಮಾತನಾಡಿದ ಅವರು ಇತ್ತೀಚೆಗೆ ಸಂಶೋಧನೆಗಳು ಕಡಿಮೆಯಾಗುತ್ತಿದೆ.ಸಂಶೋಧನೆ ಹೆಚ್ಚಾದರೆ ದೇಶ ಅಭಿವೃದ್ಧಿ ಆಗುತ್ತದೆ.ಸಂಶೋಧನೆ ಮಾಡಲು ಆಸೆ ಇರುವ ಬಡ ವಿಧ್ಯಾರ್ಥಿಗಳಿಗೆ ಸರ್ಕಾರ ನೆರವಾಗಬೇಕು ಎಂದು ತಿಳಿಸಿದರು.
ಕೆ.ಎಸ್.ರಂಗಪ್ಪ