ಬೆಟ್ಟದಪುರ:9 ಆಗಸ್ಟ್ 2022
ಸತೀಶ್ ಆರಾಧ್ಯ /ನಂದಿನಿ ಮೈಸೂರು
ಸಿದ್ದರಾಮಯ್ಯನವರ ಅಮೃತ ಮಹೋತ್ಸವದಲ್ಲಿ ಭಾಗವಹಿಸಿ ಹಿಂದಿರುಗುವಾಗ ಅಪಘಾತದಲ್ಲಿ ಮೃತಪಟ್ಟ ಹಲಗನಹಳ್ಳಿ ಗ್ರಾಮದ ನಿವಾಸಿ ಫಸಿವುದ್ದೀನ್ ಅವರ ನಿವಾಸಕ್ಕೆ ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷರಾದ ಸುಬ್ರಹ್ಮಣ್ಯ ಅವರು ಭೇಟಿ ನೀಡಿದರು.
ಈ ವೇಳೆ ಸುಬ್ರಹ್ಮಣ್ಯ ಅವರು ಫಸೀವುದ್ದೀನ್ ಕುಟುಂಬದವರಿಗೆ ಸಾಂತ್ವನ ಹೇಳಿ ಸಹಾಯಧನ ವಿತರಿಸಿ ಕುರುಬ ಸಮಾಜ ವತಿಯಿಂದ ಸಂಕಷ್ಟಕ್ಕೊಳಗಾಗಿರುವ ಕುಟುಂಬ ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಹುಣಸೂರು ತಾಲೂಕು ಕುರುಬರ ಸಂಘದ ಅಧ್ಯಕ್ಷ ಕುನ್ನೇಗೌಡ, ಬೆಟ್ಟದಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಹಮತ್ ಜಾನ್ ಬಾಬು, ಮುಖಂಡರಾದ ಕಣಗಾಲ್ ಮಲ್ಲೇಶ್, ಪಂಚವಳ್ಳಿ ಲೋಹಿತ್, ಸಾಲುಕೊಪ್ಪಲು ಪುಟ್ಟರಾಜು, ಗಣೇಶ್, ಅಸ್ವಾಳ್ ಶಫೀ, ಜಯಣ್ಣ, ಪುಟ್ಟರಾಜು, ಮಹದೇವ್, ಮಂಜಣ್ಣ, ರಾಜೇಶ್, ಗೋವಿಂದ್ ಮತ್ತಿತರಿದ್ದರು.