ಪಿರಿಯಾಪಟ್ಟಣ: 9 ಆಗಸ್ಟ್ 2022
ಸತೀಶ್ ಆರಾಧ್ಯ / ನಂದಿನಿ ಮೈಸೂರು
ಪಿರಿಯಾಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಶಿಯಾ ಮುಸ್ಲಿಂ ಪಂಗಡದವರು ವಾಸಿಸುವ ಸ್ಥಳಗಳಲ್ಲಿ ಮೊಹರಂ ಕಡೇ ದಿನವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು.
ಪಟ್ಟಣದ ಜೋಣಿಗೇರಿ ಬೀದಿಯಲ್ಲಿರುವ ಶಿಯಾ ಪಂಗಡದ ಅಂಜುಮಾನ್ ಹುಸೇನಿಯಾ ಮಸೀದಿ ಬಳಿಯಿಂದ ಮೆರವಣಿಗೆಯಲ್ಲಿ ಹೊರಟ ಜನಾಂಗದವರು ಎಸ್.ಜೆ ಬೀದಿ, ಬಿ.ಎಂ ರಸ್ತೆ ಮುಖಾಂತರ ಅರಸಿನ ಕೆರೆವರೆಗೆ ಮೆರವಣಿಗೆ ನಡೆಸಿ ಮತ್ತೆ ಮಸೀದಿಗೆ ಹಿಂದಿರುಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ತ್ಯಾಗ ಬಲಿದಾನದ ಪ್ರತೀಕವಾದ ಮೊಹರಂ ಕಡೆ ದಿನವನ್ನು ಆಚರಿಸಿದರು.
ಮೆರವಣಿಗೆ ವೇಳೆ ಪಟ್ಟಣದ ಇನ್ಸ್ ಪೆಕ್ಟರ್ ಜಗದೀಶ್ ಅವರ ನೇತೃತ್ವ ಪೊಲೀಸರು ಬಂದೋಬಸ್ತ್ ನೀಡಿದ್ದರು.
ಶಾಸಕ ಕೆ.ಮಹದೇವ್ ಹಾಗೂ ಪುರಸಭಾ ಅಧ್ಯಕ್ಷ ಕೆ.ಮಹೇಶ್ ಅವರು ಮಸೀದಿಗೆ ತೆರಳಿ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದರು, ಈ ಸಂದರ್ಭ ಮಸೀದಿ ಮುಖ್ಯಸ್ಥರು ಹಾಗೂ ಶಿಯಾ ಪಂಗಡದ ಮುಖಂಡರು ಇದ್ದರು.