ಬಿಜೆಪಿಯಂತಹ ಕೆಟ್ಟ ಸರ್ಕಾರ ಬರಲು ಕಾಂಗ್ರೆಸ್ ಪಕ್ಷದವರೇ ಕಾರಣ

ನಂದಿನಿ ಮೈಸೂರು

ಬಿಜೆಪಿಯಂತಹ ಕೆಟ್ಟ ಸರ್ಕಾರ ಬರಲು ಕಾಂಗ್ರೆಸ್ ಪಕ್ಷದವರೇ ಕಾರಣ.ಕಾಂಗ್ರೆಸ್ ಪಕ್ಷ 70 ರಿಂದ 75 ಕ್ಷೇತ್ರಗಳನ್ನು ದಾಟಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದರು.

ಮೈಸೂರಲ್ಲಿ ಮಾತಾಡಿದ ಅವ್ರು ,ನಾನು ಏನು ಮಹಾಪರಾಧ ಮಾಡಿದ್ದೇ ಅಂತ ಕೆಳಗಿಳಿಸಿದರು..?ಜನರಿಗೆ ಒಳ್ಳೆ ಆಡಳಿತ ಕೊಡುತ್ತಿದ್ದೆ. ರಾಜಕೀಯ ಷಡ್ಯಂತ್ರಕ್ಕೆ ನನ್ನನ್ನು ಬಲಿಪಡೆದ್ರು. ಈ ಬಾರಿ ರಾಜ್ಯದೆಲ್ಲೆಡೆ ಉತ್ತಮ ವಾತಾವರಣ ಇದೆ. ಪಂಚರತ್ನ ಅಭೂತಪೂರ್ವ ಯಶಸ್ಸು ಪಡೆದಿದೆ. ಜೆಡಿಎಸ್ 123 ಸ್ಥಾನ ಪಡೆಯಲಿದೆ ಅಂತ ಹೇಳಿದ್ರು.

ಸಿದ್ದು 2 ಕ್ಷೇತ್ರ ಸುರಕ್ಷಿತವಲ್ಲ ಎಂದು 3 ಕ್ಷೇತ್ರದಿಂದಲೂ ಸ್ಪರ್ಧಿಸಬಹುದುನಾನೇನು ಸಿದ್ದರಾಮಯ್ಯ ಅವರ ಬಗ್ಗೆ ಸಹಾನುಭೂತಿ ತೋರಿಲ್ಲ.ಯಾಕಪ್ಪ ಇವರಿಗೆ ಇಂತಹ ದಯನೀಯ ಪರಿಸ್ಥಿತಿ ಬಂತು ಎಂದು ಹೇಳಿದ್ದೇನೆ.ಕಾಂಗ್ರೆಸ್ ಒಳಜಗಳದ ಜೊತೆಗೆ ಸಿದ್ದುಗೆ ಅವರ ಮೇಲೆ ನಂಬಿಕೆಯಿಲ್ಲ. ಹಾಗಾಗಿ ಬೇರೆ ಬೇರೆ ಕ್ಷೇತ್ರಗಳಿಂದ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದಾರೆ.ಮಾಜಿ ಸಿಎಂ ಸಿದ್ದರಾಮಯ್ಯನವರ ಹೈಕಮಾಂಡ್ ಮನೆಯಲ್ಲಿದೆ
ಈ ಬಾರಿಯ ಚುನಾವಣೆಯಲ್ಲಿ ನಾವು 123 ಕ್ಷೇತ್ರ ಗೆದ್ದೇ ಗೆಲ್ಲುತ್ತೇವೆ
ಯಾವುದೇ ಶ್ರಮ ಹಾಕದಿದ್ರೂ ಕನಿಷ್ಠ 50 ಕ್ಷೇತ್ರಗಳನ್ನು ಗೆಲ್ಲುತ್ತೇವೆ
ಆದ್ರೆ, 123 ಕ್ಷೇತ್ರ ಗೆಲ್ಲಲೇ ಬೇಕೆಂದು ಹೆಚ್ಚಿನ ಶ್ರಮ ಹಾಕುತ್ತಿದ್ದೇವೆ ಎಂದು ತಿಳಿಸಿದ್ರು

ಮೀಸಲಾತಿ ಹೆಚ್ಚಳ ಘೋಷಣೆ ಮಾಡಿರುವ ವಿಚಾರದಲ್ಲಿ ಮಕ್ಕಳ ಆಟವಾಡಿದ್ದಾರೆ.ಚುನಾವಣೆ ಘೋಷಣೆಗೆ ಕೆಲವೇ ದಿನಗಳಿರುವಾಗ ಮೀಸಲಾತಿ ಹೆಚ್ಚಳ ಮಾಡುವ ಮೂಲಕ ಜನರ ಕಿವಿಗೆ ಹೂವು ಮುಡಿಸಿದ್ದಾರೆ.ಈಗ ಲಿಂಗಾಯತರು, ಒಕ್ಕಲಿಗರ ಕಿವಿಗೆ ಹೂವು ಮುಡಿಸಿದ್ದಾರೆ.ಇವರು ಮಾಡಿರುವ ಮೀಸಲಾತಿ ಹೆಚ್ಚಳ ಕಾರ್ಯರೂಪಕ್ಕೆ ಬರುವುದಿಲ್ಲ.ಸಮಾಜವನ್ನು ಒಡೆಯುವ ಸಲುವಾಗಿ ಮುಸ್ಲಿಮರ ಮೀಸಲಾತಿ ಕಡಿತ ಮಾಡಿ ಬೇರೆ ಸಮುದಾಯಕ್ಕೆ ಹಂಚಿದ್ದಾರೆ.ಈ ಮೂಲಕ ಹಿಂದೂ ಮುಸ್ಲಿಮರ ಮಧ್ಯೆ ಸಂಘರ್ಷ ಹುಟ್ಟುಹಾಕಲು, ಬೆಂಕಿ ಹಚ್ಚಲು ಈ ರೀತಿ ಮಾಡಿದ್ದಾರೆ ಎಂದು
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ರು.

ನರೇಂದ್ರ ಮೋದಿಯವರ ರೋಡ್ ಶೋ ನನ್ನ ಹಳ್ಳಿಗಳಲ್ಲಿ ಸಿಕ್ಕ ಸ್ವಾಗತಕ್ಕೆ ಸಮ. ನಿನ್ನೆ ನಮ್ಮ ನಿರೀಕ್ಷೆಗೂ ಮೀರಿ ಜನ ಸಮಾವೇಶಕ್ಕೆ ಆಗಮಿಸಿದ್ದರು. ನಮ್ಮ ತಂದೆ ಜನರನ್ನ ನೋಡಿ ಭಾವೋದ್ವೇಗವಾಗಿ ಕಣ್ಣೀರೀಟ್ಟರು. ನಾನೂ ಕೂಡ ಭಾವುಕನಾಗಿದ್ದೆ ಆದರೂ ನಾನು ತಡೆದುಕೊಂಡೆ. ಜನ ದೇವೇಗೌಡರ ನೋಡಿ ಕಣ್ಣೀರಿಟ್ಟ ಸನ್ನಿವೇಶ ನಡೆಯಿತು. ತಾಯಿ ಚಾಮುಂಡೇಶ್ವರಿ ನಮ್ಮ ತಂದೆಗೆ ಶಕ್ತಿ ಕೊಟ್ಟು ಇಲ್ಲಿಗೆ ಬರುವಾಗೆ ಮಾಡಿದ್ದು. ಚಾಮುಂಡೇಶ್ವರಿಯ ಆಶೀರ್ವಾದ ನಮಗೆ ಇದೆ. ಹಾಗಾಗಿ ನಮಗೆ ನಿರೀಕ್ಷೆಗೂ ಮೀರಿ ಯಶಸ್ಸು ಸಿಕ್ಕಿದೆ ಎಂದರು.

Leave a Reply

Your email address will not be published. Required fields are marked *