ನಂದಿನಿ ಮೈಸೂರು
ರಾಜ್ಯ ಮಟ್ಟದ ಜೋಡಿ ಎತ್ತಿನಗಾಡಿ ಸ್ಪರ್ಧೆ ಮೈಸೂರ್ ರೇಸ್ ಆಯೋಜಿಸಲಾಗಿದೆ ಎಂದು ಮಂಜುಕಿರಣ್ ತಿಳಿಸಿದರು.
ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ , ಹಾಗೂ ಹಸಿರು ಸೇನೆ ಮೈಸೂರು ಜಿಲ್ಲೆ ಕರ್ನಾಟಕ ರಾಜ್ಯ ಇವರ ವತಿಯಿಂದ ಗ್ರಾಮದ ಯುವಶಕ್ತಿ ಪಡೆ ಸಹಭಾಗಿತ್ವದಲ್ಲಿ ಫೆಬ್ರವರಿ ರಂದು ಸಿದ್ದಲಿಂಗಪುರ ಗ್ರಾಮದಲ್ಲಿ ಮೊದಲನೇ ವರ್ಷದ ರಾಜ್ಯಮಟ್ಟದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸುಮಾರು 60ರಿಂದ 80 ಜೋಡಿ ಎತ್ತುಗಳು ಭಾಗವಹಿಸುವ ನಿರೀಕ್ಷೆ ಇದೆ.170 ಮೀಟರ್ ದೂರ ಎರಡು ಎತ್ತುಗಳ ನಡುವೆ ಸ್ಪರ್ದೇ ನಡೆಯಲಿದೆ.ಸ್ಪರ್ದೇಯಲ್ಲಿ ಗೆದ್ದವರಿಗೆ ಮೊದಲ ಬಹುಮಾನ 1ವರೆ ಕೆಜಿ ಬೆಳ್ಳಿ, ದ್ವೀತಿಯ ಬಹುಮಾನ 1 ಕೆಜಿ ಬೆಳ್ಳಿ, ತೃತೀಯ ಬಹುಮಾನ ಅರ್ಧಕೆಜಿ ಬೆಳ್ಳಿ ಬಹುಮಾನ ಜೊತೆಗೆ ಟ್ರೋಫಿ ನೀಡಲಾಗುವುದು.ಪ್ರವೇಶ ಶುಲ್ಕ 3500 ಸಾವಿರ ರೂಗಳು ನಿಗಧಿ ಪಡಿಸಲಾಗಿದೆ.ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯಕೀಯ ವ್ಯವಸ್ಥೆ ಇರಲಿದೆ ಎಂದರು.ಸುದ್ದಿಗೋಷ್ಟಿಯಲ್ಲಿ ಮೋಹನ್ ಕುಮಾರ್ ಬಾಬು, ದಿವಾಕರ್, ಶಂಕರ್ ಲಿಂಗೇಗೌಡ , ಕಾರ್ತಿಕ್, ವರ್ಕೋಡು ಕೃಷ್ಣೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗಾಗಿ:
6361001138
8147806680
7353439528
9900994480