“ಮಳೆಗೆ ಕುಸಿದ ಮನೆ “ಕಂಗಾಲಾಗಿದ್ದ ಕುಟುಂಬಕ್ಕೆ ಅಡಿಪಾಯವಾದ ಸುಜೀವ್ ಸಂಸ್ಥೆ

19 Views

ಮೈಸೂರು:25 ಅಕ್ಟೋಬರ್ 2021

ನ@ದಿನಿ

ಮನೆಗೆಲಸ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದವಳು ಆಕೆ. ಮಗನೊಬ್ಬ ಜೊತೆಗಿದ್ದ.ಚಿಕ್ಕದೊಂದು ಮನೆಯಲ್ಲಿ ಜೀವನ ಸಾಗಿಸುತ್ತಿದ್ದ ಬಡವಿ ಶಿವಮ್ಮನ ಕಣ್ಣಲ್ಲಿ ನೀರು ತರಿಸಿದ್ದು ರಣ ಮಳೆ .ಮಳೆಯ ಅಬ್ಬರಕ್ಕೆ ಇದ್ದೊಂದು ಮನೆ ಕುಸಿದು ಬೀದಿಗೆ ಬಿದ್ದೀದ್ದ ಬಡ ಕುಟುಂಬಕ್ಕೆ ಅಡಿಪಾಯ ಹಾಕಿಕೊಡಲು ಸುಜೀವ್ ಸಂಸ್ಥೆ ಹೆಜ್ಜೆ ಹಾಕಿದೆ.

ಬಡ ಕುಟುಂಬಕ್ಕೆ ಸೂರು ಕಟ್ಟಿಕೊಳ್ಳುವ ಆಸೆಗೆ ಜೀವ ತುಂಬಿದ್ದು ಮೈಸೂರು ಕಾಂಗ್ರೆಸ್ ಜಿಲ್ಲಾ ನಗರ ಉಪಾಧ್ಯಕ್ಷ ಸುಜೀವ್ ಸಂಸ್ಥೆಯ ಅಧ್ಯಕ್ಷ ರಾಜಾರಾಂ ಅವರು.

ಬಡ ಶಿವಮ್ಮ ಅವರು ಹಳೆಯ ಮನೆಯಲ್ಲಿ ಜೀವನ ನಡೆಸುತ್ತಿದ್ದರು.ಬದುಕಿನ ಬಂಡಿ ಸಾಗಿಸಲು ಬೇರೆಯವರ ಮನೆಯಲ್ಲಿ ಕೆಲಸ ಮಾಡಿಕೊಂಡು ತನ್ನ ಮಗನೊಂದಿಗೆ ಜೀವನ ನಡೆಸುತ್ತಿದ್ದರು .ಒಂದು ವಾರದಿಂದ ಮಳೆ ಸುರಿಯುತ್ತಿದ್ದು ಮಳೆ ಅವಾಂತರದಿಂದಾಗಿ ಇದ್ದೊಂದು‌ ಮನೆ ಕುಸಿದು ಬಿದ್ದಿದ್ದು ಶಿವಮ್ಮ ದಿಕ್ಕೇ ತೋಚದಂತೆ ತಲೆ ಮೇಲೆ ಕೈ ಹೊತ್ತಿ ಕುಳಿದ್ದರು.

ಶಿವಮ್ಮಳ‌ ಕಣ್ಣೀರ ಕಥೆಯನ್ನು ಕೇಳಿದ ರಾಜಾರಾಂ ಅವರು ತಕ್ಷಣ ಕುಟುಂಬದೊಂದಿಗೆ ಸ್ಪಂದಿಸಿ ಸಾಮಾಜಿಕ ಕಾರ್ಯಕ್ಕೆ ಮುಂದಾಗಿದ್ದು ಇಂದು ರಾಜಾರಾಂ ಸುನೀಲ್ ನಾರಾಯಣ್ , ಚಂದ್ರು ಜೆಟ್ಟಿಹುಂಡಿ, ಅಭಿ, ಸೇರಿದಂತೆ ಹಲವರು ಒಟ್ಟುಗೂಡಿ ಮನೆ ಕಟ್ಟೋಕೆ ಭೂಮಿ ಪೂಜೆ ನೆರವೇರಿಸಿದರು.

ಸ್ಥಳೀಯ ಎಂಎಲ್ ಎ , ನಗರ ಪಾಲಿಕೆ ಸದಸ್ಯರುಗಳು ಮಾಡದ ಕೆಲಸವನ್ನು ಸಮಾಜಸೇವಕ ರಾಜಾರಾಂ ಮಾಡುತ್ತಿರುವುದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಮನೆ ಕಟ್ಟೋಕೆ ಮುಂದಾಗಿರುವ ರಾಜಾರಾಂ ರವರಿಗೆ ಶಿವಮ್ಮ ಕೈಮುಗಿದು ಧನ್ಯವಾದ ತಿಳಿಸಿದ್ದಾರೆ.

 

Leave a Reply

Your email address will not be published.