ಎಚ್.ಡಿ.ಕೋಟೆ:19 ಜನವರಿ 2022
ಸರಗೂರು
ಇಂದು ತಾಲೂಕು ಆರೋಗ್ಯಧಿಕಾರಿ ಕಚೇರಿಯಲ್ಲಿ ಹುಣಸೂರು ವಿಭಾಗದ ಎ.ಸಿ. ವರ್ಣಿತ್ ನೇಗಿ ಅವರು ತಾಲೂಕು ಮಟ್ಟದ ಅಧಿಕಾರಿಗಳಿಗೆ ಕೋವಿಡ್ -19 ಕಾರ್ಯಕ್ರಮದ ಬಗ್ಗೆ ತುರ್ತು ಸಭೆಯನ್ನು ನಡೆಸಿದರು.
ಸಭೆಯಲ್ಲಿ ಎ.ಸಿ. ವರ್ಣಿತ್ ನೇಗಿ ಅವರು ಕೋವಿಡ್ ರೋಗಿಗಳಿಗೆ ಸಿ. ಸಿ .ಕೇಂದ್ರ ತೆರೆಯುಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರತಿನಿತ್ಯ ಹೋಮ್ ಇಷೋಲೇಶನ್ ರೋಗಿಗಳ ಮನೆ ಭೇಟಿ ಮಾಡಿ, ಚಿಕಿತ್ಸೆ ನೀಡುವಂತೆ ತಿಳಿಸಿದರು.
ಮುಂಜಗ್ರತೆಯಿಂದ ಕೋವಿಡ್ -19 ದಾಸ್ತಾನು ಇಟ್ಟುಕೊಳ್ಳುವಂತೆ ಆದೇಶ ನೀಡಿದರು.
ಹಾಗೆಯೇ ಬಾವಲಿ ಚೆಕ್ ಪೋಸ್ಟ್ ನಲ್ಲಿ ತಾಲೂಕು ಆರೋಗ್ಯ ಇಲಾಖೆಯು ತುಂಬಾ ಚೆನ್ನಾಗಿ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಪ್ರಶಂಸಿದರು.
ಎಚ್ ಡಿ ಕೋಟೆ ತಾಲೂಕಿನಲ್ಲಿ ಕೋವಿಡ್ ಪ್ರಕರಣಗಳು ಕಡಿಮೆ ಇವೆ, ಆದುದರಿಂದ ಕೋವಿಡ್ ನಿಯಂತ್ರಿಸುವಲ್ಲಿ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳ ಸಹಕಾರ ಅಗತ್ಯ.
ಕೋವಿಡ್ ಲಸಿಕೆಕರಣ ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಹಕಾರ ನೀಡಬೇಕು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ನರಗುಂದ ತಾಲೂಕ್ ಆರೋಗ್ಯಧಿಕಾರಿ .ಟಿ ಡಾ”ರವಿಕುಮಾರ್ ರವರು, ಇ.ಓ ರಾಜೇಶ್ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ”ಸೋಮಣ್ಣ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಸಂಜಯ್ ಕೆ ಬೆಳತೂರು ಜೊತೆ ನಂದಿನಿ
ಸರಗೂರು