ಅನುಕಂಪದ ಬದಲಿಗೆ ಅವಕಾಶ ನೀಡಿ: ಮಣಿಕಾಂತ್

ಸರಗೂರು:19 ಜನವರಿ 2022

ವಿಶೇಷಚೇತನರಿಗೆ ಅನುಕಂಪ ತೋರುವ ಬದಲು ಅವಕಾಶ ನೀಡಿ ಎಂದು ಉದಯವಾಣಿ ಪತ್ರಿಕೆಯ ಮ್ಯಾಗಜಿನ್ ಎಡಿಟರ್ ಮಣಿಕಾಂತ್ ಅವರು ಹೇಳಿದರು.

ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ನಲ್ಲಿರುವ ಜನಧ್ವನಿ ಸಮುದಾಯ ಬಾನುಲಿ ಕೇಂದ್ರದ ಕಛೇರಿಯಲ್ಲಿ ಅವರು ಮಾತನಾಡಿದರು.ನನಗೆ ಹತ್ತನೇ ತರಗತಿಯಲ್ಲಿಯೇ ಎರಡು ಕಿವಿಗಳು ಕೇಳಿಸದೆ, ಮುಂದೆ ದೊಡ್ಡ ಸಮಸ್ಯೆಗಳನ್ನೇ ಎದುರಿಸಲಾಯಿತು.ನಾನು ಆಟೋ ಮೊಬೈಲ್ ಇಂಜಿನಿಯರಿಂಗ್ ನಲ್ಲಿ ಪದವಿ ಮುಗಿಸಿದ ಬಳಿಕ . ನನಗೆ ನನ್ನ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಯಾವುದೇ ಕೆಲಸಗಳು ಪ್ರಾರಂಭದಲ್ಲಿ ಸಿಗದೆ ತುಂಬಾ ಜೀವನ ನಿರ್ವಹಣೆಗೆ ತುಂಬಾ ಕಷ್ಟವಾಯಿತು.ನನಗೆ ಕಿವಿಗಳು ಕೇಳಿಸದೆ ಇರುವ ಪರಿಣಾಮ ಯಾವುದೇ ಸಂಸ್ಥೆಗಳು ಕೆಲಸ ಕೊಡಲು ಮುಂದಾಗಲಿಲ್ಲ. ಸುಮಾರು 03 ತಿಂಗಳ ಅಲೆದಾಟದ ನಂತರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಅನುವಾದಕಾರರಾಗಿ ಆಯ್ಕೆಯಾದೆ ಎಂದರು.ಸಂಯುಕ್ತ ಕರ್ನಾಟಕದ ಸೀನಿಯರ್ ಜರ್ನಲಿಸ್ಟ್ ಪಿ.ತ್ಯಾಗರಾಜ್ ಎಂಬುವವರು ನನ್ನ ಬದುಕಿನ ದಾರಿಯನ್ನೆ ಬದಲಾವಣೆ ಮಾಡಿದರು.ಮುಂದಿನ ದಿನಗಳಲ್ಲಿ ದಿನಪತ್ರಿಕೆಯ ಮುಖಪುಟಗಳಿಗೆ ವರದಿ ಮಾಡುವ ಅವಕಾಶ ಲಭಿಸಿತು. ಹಾಗೂ ಹಲವಾರು ಪುಸ್ತಕಗಳು, ಸಿನಿಮಾ ಸಂಗೀತಗಳನ್ನು ರಚಿಸಿದೆ.ಪ್ರಸ್ತುತ 05 ವರ್ಷಗಳಿಂದಲೂ ಉದಯವಾಣಿ ದಿನಪತ್ರಿಕೆಯ ಮ್ಯಾಗಜಿನ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದರು.

ಕಾರ್ಯಕ್ರಮವನ್ನು ಜನಧ್ವನಿ ಸಮುದಾಯ ಬಾನುಲಿ ಕೇಂದ್ರದ ವ್ಯವಸ್ಥಾಪಕ ನಿಂಗರಾಜು ಅವರು ನಡೆಸಿಕೊಟ್ಟರು.

ಸಂಜಯ್ ಕೆ ಬೆಳತೂರು ಜೊತೆ ನಂದಿನಿ ಮೈಸೂರು

Leave a Reply

Your email address will not be published. Required fields are marked *