ವಿಧಾನ ಪರಿಷತ್ ಚುನಾವಣೆಯಲ್ಲಿ ನಾಯಕ ಸಮುದಾಯಕ್ಕೂ ಅವಕಾಶ ಕೊಡಿ:ದ್ಯಾವಪ್ಪ ನಾಯಕ

ಮೈಸೂರು:16 ನವೆಂಬರ್ 2021

ನಂದಿನಿ

ಡಿ.10 ರಂದು ನಡೆಯುವ 25 ಸ್ಥಳೀಯ ಸಂಸ್ಥೆಯ ವಿಧಾನ ಪರಿಷತ್ ಚುನಾವಣೆಯಲ್ಲಿ ಮೈಸೂರು ವಿಭಾಗಕ್ಕೆ ಕನಿಷ್ಠ ಮೂವರಿಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ.

ಹಳೇ ಮೈಸೂರು ಭಾಗದ ಮೈಸೂರು , ಚಾಮರಾಜನಗರ , ಮಂಡ್ಯ , ಹಾಸನ , ಮಡಿಕೇರಿ , ಚಿಕ್ಕಮಗಳೂರು , ಜಿಲ್ಲೆಗಳನ್ನು ಒಳಗೊಂಡಂತೆ ಸುಮಾರು 11 ರಿಂದ 12 ಲಕ್ಷ ನಾಯಕ  ಸಮುದಾಯದವರಿದ್ದು ಈ ವ್ಯಾಪ್ತಿಯಲ್ಲಿ ಕೇವಲ ಒಬ್ಬರೇ ಮೀಸಲಾತಿ ಕ್ಷೇತ್ರದ ಶಾಸಕರಿದ್ದಾರೆ.

ನಾವು ಸುಮಾರು ಈ ವ್ಯಾಪ್ತಿಯ 7-8 ಕ್ಷೇತ್ರಗಳಲ್ಲಿ ಸುಮಾರು 25 ರಿಂದ 40 ಸಾವಿರದ ವರೆಗೆ ಮತದಾರರಿದ್ದು ಈ ಸಾಮಾನ್ಯ ಕ್ಷೇತ್ರಗಳಲ್ಲಿಯೂ ನಮ್ಮ ಸಮುದಾಯದವರು ಚುನಾವಣೆಯಲ್ಲಿ ಗೆಲ್ಲಲು ಅವಕಾಶವಿದೆ ಆದರೆ ಯಾವುದೇ ರಾಜಕೀಯ ಪಕ್ಷಗಳು ಈ ಸಾಮಾನ್ಯ ಕ್ಷೇತ್ರಗಳಲ್ಲಿ ಅವಕಾಶ ನೀಡದೆ ವಂಚಿಸುತ್ತಿದ್ದು ರಾಜಕೀಯವಾಗಿ ಈ ಭಾಗದಲ್ಲಿ ನಮಗೆ ಹಿನ್ನಡೆಯಾಗಿದೆ .

ಕಳೆದ 10 ವರ್ಷಗಳ ಹಿಂದೆ ಈ ಭಾಗದಲ್ಲಿ ಇಬ್ಬರು ನಮ್ಮ ಸಮುದಾಯದ ವಿಧಾನ ಪರಿಷತ್‌ ಸದಸ್ಯರಿದ್ದರು . ಈಗ ಒಬ್ಬರು ಕೂಡ ಇಲ್ಲ . ಇದು ಎಲ್ಲಾ ರಾಜಕೀಯ ಪಕ್ಷಗಳು ನಮಗೆ ಮಾಡಿರುವ ರಾಜಕೀಯ ದ್ರೋಹ ಎಂದರೆ ತಪ್ಪಗಲಾರದು.ಒಂದು ವೇಳೆ ಯಾವುದೇ ರಾಜಕೀಯ ಪಕ್ಷಗಳು ಅವಕಾಶ ನೀಡದೆ ಇದ್ದರೆ ಸಮುದಾಯದ ಮುಖಂಡರ ಸಭೆ ಕರೆದು ಮುಂಬರುವ ಚುನಾವಣೆಯಲ್ಲಿ ಯಾವ ರೀತಿ ನಮ್ಮ ಸಮುದಾಯ ಭಾಗವಹಿಸಬಹುದು ಎಂಬ ಬಗ್ಗೆ ನಿರ್ಣಯವನ್ನು ಕೈಗೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಪ್ರಭಕರ್ ಹುಣಸೂರು, ಶ್ರೀಧರ್ ಚಾಮುಂಡಿಬೆಟ್ಟ, ಚನ್ನ ನಾಯಕ, ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *