ನಂದಿನಿ ಮೈಸೂರು
ವಿಧಾನಸಭಾ ಚುನಾವಣೆ – 2023 ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ತೀವ್ರಗೊಳಿಸಿ : ಡಿ.ಸಿ ರಾಜೇಂದ್ರ
ಮೈಸೂರು:ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ ಗಳಲ್ಲಿ ನಡೆಸುತ್ತಿರುವ ತಪಾಸಣೆಯನ್ನು ತೀವ್ರಗೊಳಿಸಿ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ.ಕೆ.ವಿ ರಾಜೇಂದ್ರ ಹೇಳಿದರು.
ಸೋಮವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ವಿವಿಧ ಚುನಾವಣಾ ಕರ್ತವ್ಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಪ್ರತಿ ವಾಹನಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.ನೀವೇ ಮೇಲ್ನೋಟಕ್ಕೆ ನಿರ್ಧಾರ ತೆಗೆದುಕೊಂಡು ವಾಹನಗಳನ್ನು ಬಿಡಬಾರದು, ಅನುಮಾನ ಬಂದ ವಾಹನಗಳನ್ನು ತೀವ್ರ ತಪಾಸಣೆಗೊಳಪಡಿಸಬೇಕು,ಎಲ್ಲಾ ಚೆಕ್ ಪೋಸ್ಟ್ಗಳಲ್ಲಿ ಸಿ.ಸಿ.ಕ್ಯಾಮರಾ ಹಾಗೂ ಬ್ಯಾಕಪ್ ಸರಿ ಇರುವಂತೆ ನೋಡಿಕೊಳ್ಳಿ, ಅಗತ್ಯ ವಿರುವ ಕ್ಯಾಮೆರಾಗಳನ್ನು ಸ್ಥಳೀಯಾಡಳಿತಗಳು ಒದಗಿಸಬೇಕೆಂದರು.
ಒಂದೆರಡು ದಿನಗಳಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ಬರಲಿದ್ದು ಜಾಗ್ರತೆಯಿಂದ ಕಾರ್ಯ ನಿರ್ವಹಿಸಿ, ಹಾಗೂ ಎಲ್ಲಾ ತಂಡಗಳವರು ಯಾವುದೇ ಗೊಂದಲಗೊಳಗಾಗದೇ ತಂಡವಾಗಿ ಕಾರ್ಯ ನಿರ್ವಹಿಸಿ ಎಂದರು.
ಈಗಾಗಲೇ ಆಮಿಗಳಾದ ವಾಚ್,ಕುಕ್ಕರ್ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಯಾಗಿದ್ದು, ಜಿಲ್ಲೆಯಲ್ಲಿರುವ ಗೋದಾಮುಗಳ ಮೇಲೆ ಕಣ್ಣಿಡಿ ಹಾಗೂ ಒಂದೇ ನಂಬರಿನಿಂದ ಗೂಗಲ್ ಪೇ, ಪೋನ್ ಪೇ,ಪೇಟಿಎಂ ಗಳ ಮೇಲೆ ನಿಗಾ ಇರಿಸಬೇಕು ಎಂದರು.
ಸಭೆಯಲ್ಲಿ ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್,ಜಿ.ಪಂ.ಸಿಇಒ ಗಾಯತ್ರಿ, ನಗರಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ , ವಿವಿಧ ಅಧಿಕಾರಿಗಳು ಇದ್ದರು.