ನಂದಿನಿ ಮೈಸೂರು
ಮೈಸೂರು:ಡ್ರಗ್ಸ್ ದಂಧೆಯಲ್ಲಿ ತೊಡಗಿದ ಆರೋಪ ಹೊತ್ತಿರುವ ಪೆಡ್ಲರ್ ಗಳಿಗೆ ಮೈಸೂರಿನ ಖಾಕಿ ಪಡೆ ಸಮರ ಸಾರಿದೆ.ಇಂದು ಬೆಳ್ಳಂಬೆಳಗ್ಗೆ ಪೊಲೀಸ್ ಆಯುಕ್ತ ಬಿ.ರಮೇಶ್ ಹಾಗೂ ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ಪೆಡ್ಲರ್ ಗಳ ಮನೆ ಮೇಲೆ ದಾಳಿ ನಡೆಸಿದ ಖಾಕಿ ಪಡೆ ಡ್ರಿಲ್ ಮಾಡಿಸಿದೆ.
ಸುಮಾರು 30 ಕ್ಕೂ ಹೆಚ್ಚು ಆರೋಪ ಎದುರಿಸುತ್ತಿರುವ ಪೆಡ್ಲರ್ ಗಳನ್ನ ಮೇಟಗಳ್ಳಿ ಪೊಲೀಸ್ ಠಾಣೆ ಕರೆಸಿ ಖಡಕ್ ವಾರ್ನಿಂಗ್ ನೀಡಿದ್ದಾರೆ.ಡ್ರಗ್ಸ್ ದಂಧೆಯಲ್ಲಿ ತೊಡಗಿದ್ರೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾರೆ.ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಹಾಗೂ ಡಿಸಿಪಿ ಮುತ್ತುರಾಜ್ ರವರಿಗೆ 4 ಎಸಿಪಿ ಗಳು,20 ಇನ್ಸ್ಪೆಕ್ಟರ್ ಗಳು ಸಾಥ್ ನೀಡಿದ್ದಾರೆ.