ಮೈಸೂರು:18 ಜನವರಿ 2022
ನಂದಿನಿ ಮೈಸೂರು
ಮೈಸೂರಿನ ಗೋಕುಲಂನ ಕೆಆರ್‌ಎಸ್ ರಸ್ತೆಯಲ್ಲಿರುವ ಅತ್ಯಾಧುನಿಕ ಹಾಗೂ ವಿಶ್ವ ದರ್ಜೆಯ ಸೇವೆ ನೀಡುವ ಡಿಆರ್‌ಎಂ ಡಯಾಗ್ನಸ್ಟಿಕ್ ಕೇಂದ್ರ ಜ.೨೦ರಂದು ತನ್ನ ಸೇವೆಗೆ ಆರಂಭಿಸಲಿದೆ ಎಂದು ಡಿಆರ್‌ಎಂ ಆಸ್ಪತ್ರೆ ನಿರ್ದೇಶಕ ಮಂಜುನಾಥ್ ತಿಳಿಸಿದರು.
ಜ. ೨೦ ರಂದು ಮೈಸೂರಿನ ಜನಪ್ರತಿನಿಧಿಗಳು,ನಾನಾ ಆಸ್ಪತ್ರೆಗಳ ತಜ್ಞವೈದ್ಯರು ಸೇರಿ ಇನ್ನಿತರ ಗಣ್ಯರು ನೂತನ ಕೇಂದ್ರಕ್ಕೆ ಚಾಲನೆ ನೀಡುವರು. ಇದರಿಂದ ಮೈಸೂರು ಹಾಗೂ ಸುತ್ತಲಿನ ಆಸ್ಪತ್ರೆಗಳು ದೂರದ ಹೊಸ ದಿಲ್ಲಿಯಂತಹ ಕೇಂದ್ರಗಳಿಗೆ ಮಾದರಿಗಳನ್ನು ಕಳುಹಿಸಿ ೧೦ ರಿಂದ ೧೫ ದಿನಗಳ ನಂತರ ವರದಿಗಳನ್ನು ಪಡದು ಚಿಕಿತ್ಸೆ ನೀಡಬೇಕಾದ ಸಂದಿಗ್ಧತೆ ಸದ್ಯದಲ್ಲೆ ದೂರವಾಗಲಿದೆ ಎಂದರು.
ಆಸ್ಪತ್ರೆಗಳಿಗೆ ಬರುವ ರೋಗಿಗಳ ಹಿಮ್ಮುನೂ ಹಿಸೋ ಕೆಮಿಸ್ಟ್ರಿ,
ಟ್ಯೂಮರ್ ಮಾಕರ ಇಮುನೂ ಹ್ಯಾಸ್ ಸಿ ಪರೀಕ್ಷೆಗಳನ್ನು ಮಾಡಿಸಲು ದೂರದ ಬೆಂಗಳೂರು ಹಾಗೂ ಹೊಸದಿಲ್ಲಿ ಇನ್ನಿತರ ಕೇಂದ್ರಗಳಿಗೆ ಕಳುಹಿಸಿ ಅದರ ವರದಿ ಪಡೆಯಲು ಕನಿಷ್ಠ ೧೦ ರಿಂದ ೧೫ ದಿನ ಕಾಯಬೇಕಾದ ಸನ್ನಿವೇಶವಿದೆ. ಈ ಸನ್ನಿವೇಶವನ್ನು ದೂರಗೊಳಿಸಲು ಹಾಗೂ ಯಾವುದೇ ರೋಗಕ್ಕೆ ಸಂಬಂಧಿಸಿದಂತೆ
ಕರಾರುವಕ್ಕಾದ ವರದಿಗಳನ್ನು ಡಿಆರ್‌ಎಂ ಡಯಾಗ್ನಸ್ಟಿಕ್ ಕೇಂದ್ರ ೨೪ ತಾಸಿನಲ್ಲಿ ನೀಡಲಿದೆ ಎಂದರು.
ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ರೋಗ ಪತ್ತೆ ಮಾಡುವ ವ್ಯವಸ್ಥೆ ಇದಾಗಿದ್ದು, ವಿಶ್ವದರ್ಜೆಯ
ಯಂತ್ರೋಪಕರಣ ಅಳವಡಿಸಲಾಗಿದೆ. ಮಾತ್ರವಲ್ಲದೇ ಇಲ್ಲಿ ವಿಶ್ವದರ್ಜೆಯ ರೋಗಪತ್ತೆ ಶಾಸ್ತ್ರಜ್ಞರು ಕೆಲಸ ಮಾಡಲಿದ್ದಾರೆ. ಒಂದೇ ದಿನದಲ್ಲಿ ವರದಿ ಲಭ್ಯವಾಗುವುದರಿಂದ ರೋಗದ ಪ್ರಮಾಣ ನಂತರದ ಹಂತ ತಲುವುವುದನ್ನು ನಿಯಂತ್ರಿಸಬಹುದಾಗಿದೆ. ವರದಿ ಪಡೆಯುವಲ್ಲಿ ಆಗುವ ವಿಳಂಬದಿಂದ
ಕೆಲವೊಮ್ಮೆ ಉಂಟಾಗುವ ಸಾವುನೋವುಗಳು ಇದರಿಂದ ತಪ್ಪಲಿದೆ. ಕೇಂದ್ರದಲ್ಲಿ ಕೂಡಲೇ ಪರೀಕ್ಷೆ ನಡೆಸಿ ಬೇಗ ವರದಿ ನೀಡುವುದರಿಂದ ರೋಗದ ತೀವ್ರತೆಯನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.
ಮೈಸೂರು ಸುತ್ತಾ ಮುತ್ತಲ ಜಿಲ್ಲೆಯೂ ಸೇರಿ ಹುಬ್ಬಳ್ಳಿ, ಧಾರಾವಾಡ, ಬಳ್ಳಾರಿಯ ಜಿಲ್ಲೆಗೆಗೂ
ಸೇವೆ ನೀಡಲಾಗುವುದು ಎಂದು ತಿಳಿಸಿದರು.
ಡಿಆರ್‌ಎಂ ಆಸ್ಪತ್ರೆ ನಿರ್ದೇಶಕರಾದ ಡಿ.ಟಿ. ಪ್ರಕಾಶ್ ಮಾತನಾಡಿ, ಎಲ್ಲವೂ ತಂತ್ರಜ್ಞಾನ ದ ಮೂಲಕ ನಡೆಯುವುದರಿಂದ ಫಲಿತಾಂಶ ವರದಿ ನೂರಕ್ಕೆ ನೂರು ನೈಜವಾಗಿ ಬರಲಿದೆ. ಹೀಗಾಗಿ ಈ ಭಾಗದ ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ ಎಂದರು.
ವೈದ್ಯಕೀಯ ನಿರ್ದೇಶಕ
ಡಾ ವೇಣುಗೋಪಾಲ್, ಆಸ್ಪತ್ರೆ ಸೌಲಭ್ಯ ನಿರ್ದೇಶಕ ಡಾ. ಪ್ರಶಾಂತ್, ಡಾ. ಸಂತೋಶ್, ಪ್ರಧಾನ
ವ್ಯವಸ್ರಾವಕ ಎಂ.ಕೆ.ಲೋಕೇಶ್ ಇತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಯಾರೇ ಇಲ್ಲಿ ಸೇವೆ ಬಯಸಿ ಸಂಪರ್ಕಿಸಿದರೂ ಅವರ ಮನೆಗೆ ಸೇವೆ ಒದಗಿಸಲು ಆಸ್ಪ ಸಿದ್ಧವಿದೆ. ಇಎಸ್ ಐ ಹಾಗೂ ಇನ್ನಿತರರು ಸರ್ಕಾರಿ ಯೋಜನೆಯನ್ನು ಒಳಗೊಂಡಿದೆ. ಜತೆಗೆ ರೈತರು, ಆಟೋ ಚಾಲಕರು ಸೇರಿ ಎಲ್ಲರಿಗೂ ರಿಯಾಯಿತಿ ದರವನ್ನು ಸಹ ನೀಡಲಾಗುತ್ತಿದೆ.
– ಡಾ.ಮಂಜುನಾಥ್, ನಿರ್ದೇಶಕ, ಡಿಆರ್ ಎಂ ಆಸ್ಪತ್ರೆ.