ಮೈಸೂರು:18 ಜನವರಿ 2022
ನಂದಿನಿ
ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಭಕ್ತವೃಂದ ಹಾಗೂ ಕೃಷ್ಣರಾಜ ಯುವ ಬಳಗದ ವತಿಯಿಂದ ಕುವೆಂಪು ನಗರದಲ್ಲಿರುವ ಆದಿಚುಂಚನಗಿರಿ ರಸ್ತೆಯಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ೭೭ನೇ ವರ್ಷದ ಜಯಂತಿಯನ್ನು ಆಚರಿಸಲಾಯಿತು.
ಪುಷ್ಪನಮನ ಸಲ್ಲಿಸಿ ಮಾತನಾಡಿದ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ರವರು ಬಾಲಗಂಗಾಧಾರನಾಥ ಸ್ವಾಮೀಜಿಗಳು ಕೇವಲ ಒಂದು ಜಾತಿ ಒಂದು ಕ್ಷೇತ್ರಕ್ಕೆ ಸೀಮಿತವಾಗಿರಲಿಲ್ಲ ಬದಲಾಗಿ ಎಲ್ಲಾ ಜಾತಿ ಧರ್ಮದ ಎಲ್ಲಾ ಕ್ಷೇತ್ರದ ಅಭಿವೃದ್ಧಿಯ ಅಭಿಲಾಷೆ ಹೊಂದಿದ್ದಂತವರು.ಆಕಾಶಕ್ಕೆ ಆಕಾಶವೇ ಸರಿಸಮಾನ. ಅಂತೆಯೇ ಬಾಲಗಂಗಾಧರನಾಥ ಸ್ವಾಮೀಜಿ ಸಾಧನೆಯ ಹಾದಿ ಬಲು ದೊಡ್ಡದು.ಶ್ರೀಗಳು ಹೆಚ್ಚಾಗಿ ದೇವಸ್ಥಾನಗಳನ್ನು ಕಟ್ಟುವ ಇರಾದೆಯನ್ನು ಇಟ್ಟುಕೊಂಡಿರಲಿಲ್ಲ ಬದಲಾಗಿ ಜ್ಞಾನಪ್ರಸಾರದ ಮೂಲಕ ಮಾತ್ರ ಸಮಾಜದ ಬದಲಾವಣೆ ಸಾಧ್ಯ ಎಂದು ನಂಬಿದ್ದರು.ಅದಕ್ಕಾಗಿಯೇ ಹೆಚ್ಚಾಗಿ ಗ್ರಾಮೀಣಾ ಪ್ರದೇಶಗಳಲ್ಲಿ ಬಡಮಕ್ಕಳ ಶಿಕ್ಷಣಕ್ಕಾಗಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು.ನಂತರ ಆರೋಗ್ಯ ಕ್ಷೇತ್ರದಲ್ಲೂ ಸಂಸ್ಥೆಯ ಪಾತ್ರವನ್ನು ವಿಸ್ತರಿಸಿ ಎಲ್ಲ ವರ್ಗದ ಎಲ್ಲಾ ಪ್ರದೇಶದ ರೋಗಿಗಳಿಗೂ ಸರಿಯಾದ ಔಷಧೋಪಾಚಾರ ದೊರಕುವಂತಾಗಲೆಂದು ಆಸ್ಪತ್ರೆಗಳನ್ನು ಸ್ಥಾಪಿಸಿದರು.ಇದೆಲ್ಲೆಕ್ಕಿಂತ ಮಿಗಿಲಾಗಿ ವೃದ್ದಾಶ್ರಮ,ಅನಾಥಾಶ್ರಮ,ವಿದ್ಯಾರ್ಥಿನಿಲಯಗಳು ಸ್ಥಾಪಿಸುವ ಜೊತೆಜೊತೆಗೆ ಒಬ್ಬ ಪರಿಸರ ಪ್ರೇಮಿಯಾಗಿ ಲಕ್ಷಾಂತರ ಸಸಿಗಳನ್ನು ನೆಡಿಸುವ ಮೂಲಕ ವೃಕ್ಷ ರಕ್ಷಣ ಟ್ರಸ್ಟ್ ಗಳನ್ನು ಪ್ರಾರಂಭಿಸಿ ಪ್ರೋತ್ಸಾಹಿಸಿದರು.ತಮಿಳು ನಾಡಿನಲ್ಲಿ ಸಂಭವಿಸಿದಂತಹ ಸುನಾಮಿ,ಉತ್ತರ ಕರ್ನಾಟಕದ ಪ್ರವಾಹಗಳ ಸಂಧರ್ಭದಲ್ಲಿ ಸಂಸ್ಥೆ ಮತ್ತು ಮಠದ ಮೂಲಕ ಮಾಡಿದ ಸೇವೆಯನ್ನು ನಾವು ನೆನೆಯಲೇಬೇಕು.ಅವರ ಮೂರು ದಶಕದ ಆಡಳಿತದ ವೇಳೆಯಲ್ಲಿ ವಿಶ್ವಮಟ್ಟಕ್ಕೆ ಸಂಸ್ಥೆಯನ್ನು ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.ಶಿಕ್ಷಣ,ವೈದ್ಯಕೀಯ,ದಾಸೋಹ,ಸಮಾಜ ಸೇವೆಗೆ ಶ್ರೀಗಳು ನೀಡಿರುವ ಸೇವೆಯಿಂದಲೇ ಇವತ್ತಿಗೂ ಜನಮಾನಸದಲ್ಲಿ ದೇವರಾಗಿ ಉಳಿದಿದ್ದಾರೆ.ಆದ್ದರಿಂದಲೇ ಸಾಧನೆಗೆ ಗುರುವಾಗಿ ಮಾನವೀಯತೆ,ಮಾನವತೆಗೆ ಮೇರು ಪರ್ವತವಾಗಿ ತಮ್ಮ ಸೇವಾ ಕೈಂಕರ್ಯಗಳನ್ನು ಉಳಿಸಿ ಹೋಗಿದ್ದಾರೆ.ಶ್ರೀಗಳು ಹಾಕಿಕೊಟ್ಟ ದಾರಿಯಂತೆ ಅವರ ಆದರ್ಶಗಳನ್ನು ಪಾಲಿಸಿಕೊಂಡು ಹೋಗುತ್ತಿರುವ ನಿರ್ಮಲಾನಂದನಾಥ ಸ್ವಾಮೀಜಿಯೂ ಅವರ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ಸ್ವಾಮೀಜಿಯವರನ್ನು ನೆನೆಸಿದರು.
ಈ ಸಂಧರ್ಭದಲ್ಲಿ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ,ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ರಾದ ನಾರಾಯಣ್ ಗೌಡ ,ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ ,ಮುಡಾ ಸದಸ್ಯರಾದ ಲಕ್ಷ್ಮೀದೇವಿ ,ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೃಷ್ಣರಾಜ ಯುವಬಳಗದ ಅಧ್ಯಕ್ಷ ನವೀನ್ ಕೆಂಪಿ ,ವಿನಯ್ ಕಣಗಾಲ್ ,ಗುಣಶೇಖರ್, ಲೋಹಿತ್ ,ಸುಚೀಂದ್ರ ,ಸದಾನಂದ ,ಹಾಗೂ ಇತರರು ಹಾಜರಿದ್ದರು.