ಮೈಸೂರು:18 ಜನವರಿ 2022
ನಂದಿನಿ ಮೈಸೂರು
ಮೈಸೂರು ಮಹಾನಗರ ಪಾಲಿಕೆಯಲ್ಲಿ ಮಹಿಳಾ
ಪೌರಕಾರ್ಮಿಕರಲ್ಲಿ ಹೆಚ್ಚು ಕಾರ್ಯ ನಿರ್ವಹಿಸುತ್ತಿದ್ದು.ದೂರದಿಂದ ಆಗಮಿಸುವ ಮಹಿಳೆಯರಿಗೆ ಕೆಲಸದ ವೇಳೆ
ಬಟ್ಟೆ ಬದಲಿಸಲು ಕೊಠಡಿಗಳಿಲ್ಲದೇ ತೊಂದರೆಯಾಗುತ್ತಿದೆ.ಪ್ರತಿ ವಾರ್ಡ್ ಗಳಲ್ಲಿ ಕೊಠಡಿ ನಿರ್ಮಿಸುವಂತೆ ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ರಾಜ್ಯಾಧ್ಯಕ್ಷ ಬಿ.ಎಸ್ ರಾಜು ಸರ್ಕಾರಕ್ಕೆ ಒತ್ತಾಯಿಸಿದರು.
ಮೈಸೂರು ನಗರದಲ್ಲಿ ೭೦೦ ಪೌರಕಾರಗಮಿಕರಿದ್ದಾರೆ.
44 ನೇ ವಾರ್ಡ್ ನಲ್ಲಿ ಒಂದು ಕೊಠಡಿ ಇದೆ.
ಪೌರಕಾರ್ಮಿಕರಿಗೆ ವಿಶ್ರಾಂತಿ, ಶೌಚಾಲಯ ನಿರ್ಮಿಸಬೇಕು ಎಂದು ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನೆ ಆಗಿಲ್ಲ.ಮಹಿಳೆಯರಿಗೆ ಅಗತ್ಯವಿರುವ ಕೊಠಡಿ ನಿರ್ಮಿಸಬೇಕು.ಅದಲ್ಲದೇ
1977-78 ರಲ್ಲೇ ಐಪಿಡಿ ಸಾಲಪ್ಪ ಅವರು ನೀಡಿದ್ದ 96 ಶಿಫಾರಸ್ಸಿನಲ್ಲಿ 36 ಶಿಫಾರಸ್ಸು ಗಳನ್ನು ಸರ್ಕಾರ ಅಂಗೀಕರಿಸಿದ್ದಾರೆ. ಉಳಿದ ಎಲ್ಲವನ್ನೂ ಚಾಲ್ತಿಗೆ ತರಬೇಕು ಎಂದರು.
ಪ್ರಧಾನ ಕಾರ್ಯದರ್ಶಿ ದಿನೇಶ್ ಕುಮಾರ್ ಮಾತನಾಡಿ ಕಾರ್ಮಿಕರು ಸಾವನ್ನಪ್ಪಿದ್ದರೂ ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಅಷ್ಟು ಮಂದಿಗೂ ಅನುಕಂಪದ ಆಧಾರದ ಮೇಲೆ ಕೆಲಸ, ಮನೆ ಹಾಗೂ ಸೌಲಭ್ಯ ಕಲ್ಪಿಸುವ ಕೆಲಸ ವಾಗಬೇಕೆಂದು ತಿಳಿಸಿದರು.