ಹುಲಿ ದಿನಾಚರಣೆ ಅಂಗವಾಗಿ ಬಂಡಿಪುರ ಅರಣ್ಯ ಅಧಿಕಾರಿ ಡಾ.ರಮೇಶ್ ಕುಮಾರ್ ರವರಿಗೆ ಸನ್ಮಾನ

ನಂದಿನಿ ಮೈಸೂರು

* ಹುಲಿ ದಿನಾಚರಣೆ ಅಂಗವಾಗಿ ಬಂಡಿಪುರ ಅರಣ್ಯ ಅಧಿಕಾರಿ ಡಾ .ರಮೇಶ್ ಕುಮಾರ್ ರವರಿಗೆ ಸನ್ಮಾನ*

*ಕಾಡುಗಳಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದ್ದರೆ ಅರಣ್ಯ ಸಂಪತ್ತು ನಾಶವಾಗುವುದನ್ನು ತಪ್ಪಿಸಲು ಸಹಕಾರಿಯಾಗಲಿದೆ*

ಅರಣ್ಯ ಅಧಿಕಾರಿ ದಿನಾಚರಣೆ ಹಾಗೂ ಹುಲಿ ದಿನಾಚರಣೆ ಅಂಗವಾಗಿ ಹುಲಿ ಸಂಖ್ಯೆಯಲ್ಲಿ ರಾಷ್ಟ್ರಮಟ್ಟದಲ್ಲಿ ಬಂಡಿಪುರಕ್ಕೆ ದ್ವಿತೀಯ ಹಾಗೂ ಕರ್ನಾಟಕ ಐದು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಬಂಡೀಪುರ ಅಭಯಾರಣ್ಯವೂ ಅತಿ ಹೆಚ್ಚು ಹುಲಿ ಹೊಂದಿರುವ ಅರಣ್ಯಗಳಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದ ಪ್ರದೇಶ ಎಂಬ ಹೆಗ್ಗಳಿಕೆ ಹಿನ್ನೆಲೆಯಲ್ಲಿ ಬಂಡಿಪುರ ಅರಣ್ಯ ಅಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕರಾದ ಡಾಕ್ಟರ್ ರಮೇಶ್ ಕುಮಾರ್ ರವರಿಗೆ ಅಭಿನಂದನೆ ಸಲ್ಲಿಸಿ ಸಿಹಿ ವಿತರಿಸುವ ಮೂಲಕ ಹರ್ಷ ವ್ಯಕ್ತಪಡಿಸಿ ಗೌರವ ಸಲ್ಲಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅರಣ್ಯ ಅಧಿಕಾರಿ ಡಾ. ರಮೇಶ್ ಕುಮಾರ್ ಬಂಡಿಪುರ ಅರಣ್ಯ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತ ಪ್ರದೇಶವನ್ನು ಮಾಡಲು ಪ್ರವಾಸಿಗರ ಸಹಕಾರ ಮುಖ್ಯ , ಪ್ರವಾಸಿಗರು ಅರಣ್ಯ ಇಲಾಖೆ ನೀಡಿರುವ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ವನ್ಯಜೀವಿ ಹಾಗೂ ಅರಣ್ಯ ಪ್ರದೇಶವನ್ನು ಸಂರಕ್ಷಣೆ ಮಾಡಲು ನಮ್ಮೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು,ಇಂದಿನ ಪರಿಸ್ಥಿತಿಯಲ್ಲಿ ಹುಲಿ ಸಂತತಿ ಉಳಿಸುವುದು, ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಹಲವು ಕಾರಣಗಳಿಂದ ಅಳಿವಿನಂಚಿಗೆ ತಲುಪುತ್ತಿರುವ ಹುಲಿ ಸಂರಕ್ಷಿಸುವ ಕೆಲಸವಾಗಬೇಕಾಗಿದೆ. ಕಾಡುಗಳಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದ್ದರೆ ಅರಣ್ಯ ಸಂಪತ್ತು ನಾಶವಾಗುವುದನ್ನು ತಪ್ಪಿಸಲು ಸಹಕಾರಿಯಾಗಲಿದೆ ಎಂದರು.

ನಂತರ ಮಾತನಾಡಿದ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್
ಅರಣ್ಯ ಅಧಿಕಾರಿಯಾದ ಡಾಕ್ಟರ್ ರಮೇಶ್ ಕುಮಾರ್ ರವರು ವಿಶೇಷವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಅರಣ್ಯವನ್ನು ಪರಿಚಯಿಸಲು ಸಫಾರಿ ವ್ಯವಸ್ಥೆ ಮಾಡಿದ್ದಾರೆ, ಮೊದಲ ಹಂತದಲ್ಲಿ ಬಂಡಿಪುರ ಸುತ್ತಮುತ್ತ ಇರುವ ಶಾಲೆಗಳ ಮಕ್ಕಳಿಗೆ ಉಚಿತವಾಗಿ ಸಫಾರಿ ವ್ಯವಸ್ಥೆ ಕಲ್ಪಿಸಿ ನಂತರ ಕಾಡಿನ ಬಗ್ಗೆ ಅರಿವು, ಬಂಡಿಪುರದ ಮಹತ್ವ ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷಗಳ ಬಗ್ಗೆ ಮಾಹಿತಿ ಹಾಗೂ ಅರಣ್ಯ ಸಂಬಂಧಿತ ವಿಚಾರಗಳನ್ನು ಮಕ್ಕಳಿಗೆ ತಿಳಿ ಹೇಳುವ ಕಾರ್ಯದಲ್ಲಿ ಮುಂದಾಗಿರುವುದು ಶ್ಲಾಘನೀಯ ಕೆಲಸವಾಗಿದೆ.

ಇದೇ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಕೆಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಎಂ ಪಿ ರಾಜೇಶ್, ಪವನ್ ಸಿದ್ದರಾಮ, ರಾಕೇಶ್, ನವೀನ್ ಕೆಂಪಿ, ಹಾಗೂ ಇನ್ನಿತರರು ಅಭಿನಂದನೆ ಸಲ್ಲಿಸಿದರು.

Leave a Reply

Your email address will not be published. Required fields are marked *